ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಮೇ. 7.ರಂದು ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ

ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಾಂಗಲ್ಯ ಬಾಗ್ಯ ಯೋಜನೆಯಡಿ ಸರಳ ವಿವಾಹ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದ್ದು ದಿನಾಂಕ ಮೇ ,07 ರಂದು ಬೆಳಗ್ಗೆ 11-00 ರಿಂದ 12-00 ರವರೆಗೆ ಕಟಕ ಲಗ್ನದಲ್ಲಿ ಸಾಮೂಹಿಕ ಸರಳ ವಿವಾಹ ನೆಡೆಯಲಿದೆ ಎಂದು ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಬಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿ ಅವರು ಅರ್ಹತಾ ಫಲಾನುಭಾವಿಗಳು ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಅರ್ಜಿ ಪಡೆದು ಮಾರ್ಚಿ 31 ರ ಒಳಗಾಗಿ ಸೂಕ್ತ ದಾಖಲೆಗಳೂಂದಿಗೆ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕು.
ನೋಂದಾಯಿಸಿಕೊಂಡಿರುವ ವದು,-ವರರ ವಿವರಗಳನ್ನು ಪಟ್ಟಿಯನ್ನು ಮಾರ್ಚಿ 10 ರಂದು ಪ್ರಕಟಿಸಲಾಗುವುದು ವದುವರರ ಬಗ್ಗೆ
ಆಕ್ಷೇಪಣೆ ಇದ್ದಲ್ಲಿ ಮಾರ್ಚಿ 20 ರೊಳಗಾಗಿ ಸಲ್ಲಿಸಬಹುದು . ಅಂತಿಮ ವಧು-ವರರ ಪಟ್ಟಿಯನ್ನು ಏಪ್ರಿಲ್ 25ರಂದು ಪ್ರಕಟಿಸಲಾ ಗುವುದು. ಮಾಂಗಲ್ಯ ಭಾಗ್ಯ ಯೋಜನೆಯಲ್ಲಿ
ವರನಿಗೆ ರೂ. 5,000/ ಗಳನ್ನು ಹಾಗೂ ವಧುವಿಗೆ ರೂ. 10,000/-ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ರೂ. 48,000/- ಮೌಲ್ಯದ್ದು) ಹೀಗೆ ಒಟ್ಟು ರೂ. 63,000/- ಗಳನ್ನು ಅಭಿವೃದ್ಧಿ ಪ್ರಾಧಿಕಾರ ನಿಧಿಯಿಂದ ಭರಿಸಲಾಗುವುದು.ಇದಲ್ಲದೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವ ವಧು-ವರರ ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಾಡಲಾಗುವುದು.
ಹೆಚ್ಚಿನ ವಿವರಗಳಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹಾಗು ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ನಾನು ನಿರ್ದೇಶಿತ ಸದಸ್ಯರುಗಳನ್ನು ಸಂಪರ್ಕಿಸಿ ಎಂದು ದೇವಾಲಯದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೋಬೈಲ್ ಸಂಖ್ಯೆ
ಜಿ.ಎನ್. ರಂಗಪ್ಪ. 9449142479.
ರವಿ. ಕೆ.ಎಸ್ 9611290053.
ಲಕ್ಷ್ಮವಾಯಕ 81050 12135.
ಮಹೇಶ್‌ಕುಮಾ‌ರ್, ಆರ್.ವಿ 9886622223
ಹೇಮಲತಾ ರಮೇಶ ಎಂ ಎಲ್ 9900403330