ನಿಧಿಯಾಸೆಗೆ ದೇವರ ವಿಗ್ರಹವನ್ನೇ ಕದ್ದೋಯ್ದ ಕಳ್ಳರು
ದೊಡ್ಡಬಳ್ಳಾಪುರ : ತಾಲ್ಲೂಕಿನ,ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿರುವ ದೇವರ ಬೆಟ್ಟದ ಅರಣ್ಯದಲ್ಲಿನ ಕಂಬದ ಗುಟ್ಟೆ ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹವನ್ನ ಕಳವು ಮಾಡಲಾಗಿದ್ದು, ನಿಧಿಯಾಸೆಗೆ ವಿಗ್ರಹದ ಕೆಳಗೆ ಮಣ್ಣು ಅಗೆದಿರುವ ಕಳ್ಳರು ವಿಗ್ರಹದೊಂದಿಗೆ ಪರಾರಿಯಾಗಿದ್ದಾರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ಪಕ್ಕದಲ್ಲಿಯೇ ಬರುವಂತಹ ಮಾಕಳಿ ಬೆಟ್ಟ ವಲಸೆ ಬೆಟ್ಟ ಹಾಗು ದೇವರ ಬೆಟ್ಟದ ಈ ಬೆಟ್ಟಗಳು ಸುಮಾರು ವರ್ಷಗಳ ಹಿಂದೆ ವನ್ಯ ಜೀವಿಗಳ ವಾಸಸ್ಥಾನ ವಾಗಿತ್ತು ಅರಣ್ಯ ಸಂಪತ್ತು ಹೇರವಾಗಿತ್ತು ಶ್ರೀ ಗಂಧ ನೇರಳೆ ಆಲ ಗೋಣಿ ಹಾಗು ಆಯುರ್ವೇದಿಕ ಗಡ ಮೂಲಿಕೆ ಗಳ ಹೊಂದಿರು ಅರಣ್ಯ ವಾಗಿತ್ತು ಮಾನವನ ದುರಾಸೆಗೆ ಕಾಡು ಹಾಳಾಗಿ ನಾಡಾಗುವ ಸ್ಥಿತಿಗೆ ತಲುಪಿದ್ದು ನಿಧಿ ಅಸೆಗೆ ದೇವರ ವಿಗ್ರಹ ಕಳ್ಳನ ಮಾಡಿದ್ದಾರೆ
ಪ್ರತಿ ವರ್ಷ ಶಿವರಾತ್ರಿ ಜಾಗರಣೆ ಹಾಗು ಕಾಮನ ಹಬ್ಬ ದಿನ ಕದಿರಿ ಹುಣ್ಣುಮೆ ದಿನದಂದು ವಿಶೇಷ ಪೂಜಾ ಕೈಂ ಕಾರ್ಯಗಳು ಮಾಡುತ್ತಾ ಬರುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವು ಶಿವರಾತ್ರಿ ದಿನ ದೇವಸ್ಥಾನದ ಬಳಿ ಜಾಗರಣೆ ಕಾರ್ಯಕ್ರಮವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಮಾಡುತ್ತಿದ್ದರು ಈ ಕಾರಣಕ್ಕಾಗಿ ಜಾಗವನ್ನು ನೋಡಲು ಇಂದು ಮಧ್ಯಾಹ್ನ ಗ್ರಾಮಸ್ಥರು ದೇವಸ್ಥಾನದ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ
ದೇವರ ಬೆಟ್ಟದಲ್ಲಿ ಪ್ರಕೃತಿ ಸಹಜವಾಗಿ ನಿರ್ಮಾಣವಾಗಿರುವ ಗುಹೆ ದೇವಾಲಯವಾಗಿದ್ದು, ಗುಹೆ ಯೊಳಗಿರುವ ದೇವರನ್ನು ಕಂಬದ ಗುಟ್ಟೆಯ ಕಲ್ಲಿನ ಲಕ್ಷ್ಮೀ ನರಸಿಂಹಸ್ವಾಮಿ ದೇವರೆಂದ್ದು ಸುತ್ತಮುತ್ತಲಿನ ಜನರು ಆರಾಧಿಸುತ್ತಾರೆ, ಅರಣ್ಯ ಪ್ರದೇಶದಲ್ಲಿರುವ ಕಾರಣಕ್ಕೆ ವಿಶೇಷ ದಿನಗಳಲ್ಲಿ ಮಾತ್ರ ಗ್ರಾಮಸ್ಥರು ಅಲ್ಲಿಗೆ ತೆರಳಿ ದೇವರಿಗೆ ಪೂಜೆ ಮಾಡುತ್ತಿದ್ದರು. ಹಿಂದೆಯೂ ಸಹ ಇದೇ ಸ್ಥಳದಲ್ಲಿ ನಿಧಿ ಯಾಸೆಗೆ ಮಣ್ಣನ್ನು ಅಗೆದಿದ್ದರು, ಈಗ ದೇವರ ವಿಗ್ರಹವನ್ನು ನಿಧಿಗಳ್ಳರು ಕದ್ದೊಯ್ದಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.