ಆಪ್ಪು ಹುಟ್ಟು ಹಬ್ಬದ ಪ್ರಯುಕ್ತ ಮ್ಯಾರಾಥಾನ್

ದೊಡ್ಡಬಳ್ಳಾಪುರ:ದಿವಂಗತ ನಟ ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿಐದು ಕಿಲೋಮೀಟರ್ ದೂರದ ಪವರ್ ಸ್ಟೆಪ್ಸ್ ಹೆಸರಿನ ಮ್ಯಾರಥಾನ್ ಓಟ ಆಯೋಜನೆ ಮಾಡಲಾಗಿತ್ತು

ದೊಡ್ಡಬಳ್ಳಾಪುರದ ನಗರದ ಭಗತ್ ಸಿಂಗ್ ಕ್ರಿಡಾಂಗಣದಲ್ಲಿ ಮ್ಯಾರಥಾನ್ ಓಟಕ್ಕೆ ಶಾಸಕ ದೀರಜ್ ಮುನಿರಾಜು ಚಾಲನೆ ನೀಡಿ ಮಾತನಾಡಿ ಪುನಿತ್ ರಾಜ್ ಕುಮಾರ್ ರವರ 50 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು ಈಗಿನ ದಿನಮಾನಗಳಲ್ಲಿ. ಆರೋಗ್ಯದ ಬಗ್ಗೆ ಎಚ್ಚರದಿಂದ ಇರಬೇಕು ಬೆಳಗಿನ ಸಮಯ ಯೋಗ ವ್ಯಾಯಮ ದೇಹವನ್ನು ಧಣಿಸುವುದರಿಂದ ಆರೋಗ್ಯ ಉತ್ತಮ ರೀತಿಯಲ್ಲಿ ಇರುತ್ತೆ ಹಾಗು ಪ್ರತಿಯೂಬ್ಬರು ಆರೋಗ್ಯದ ಬಗ್ಗೆ ಎಚ್ಚರವಿರಲಿ ಎಂದರು

ಈ ಮ್ಯಾರಥನ್ ಓಟದಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಹಲವರು ಬಾಗಿಯಾಗಿದ್ದರು.