ಅದ್ದೂರಿಯಾಗಿ ನಡೆದ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವ
ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ,ಹೋಬಳಿ ರಾಜಘಟ್ಟದ ಆಂಜನೇಯ ಸಾಮಿ ದೇವಾಲಯದಲ್ಲಿ ಶ್ರೀ ರಾಮಾಂಜನೇಯ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೇರ ವೇರಿಸಲಾಯಿತು
ದೇವಾಲಯದಲ್ಲಿ ಆಂಜನೇಯಸ್ವಾಮಿ ಹಾಗೂ ಸೀತಾ ರಾಮ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಮೂರ್ತಿಗೆ ಅಭಿಷೇಕ, ಕಲ್ಯಾಣೋತ್ಸವ, ವಿಶೇಷ ಅಲಂಕಾರ ಹಾಗೂ ಪೂಜಾ ಕೈಂ ಕಾರ್ಯಗಳು ನಡೆದವು. ರಾಜಘಟ್ಟ, ತೊಗರಿಘಟ್ಟ ಗ್ರಾಮಸ್ಥರಿಂದ ಹೂವಿನ ಅಲಂಕಾರ, ರಥೋತ್ಸವಗಳ ( ಕುರ್ಜು) ಸೇವೆ ನಡೆಸಲಾಯಿತು
ದೂರದ ಊರುಗಳಿಂದ ಬಂದ ಭಕ್ತರು ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು
ಜಾತ್ರೆಯ ಅಂಗವಾಗಿ ವಿವಿಧ ಬಗೆಯ ಅಂಗಡಿ ಮುಗ್ಗಟ್ಟುಗಳು ಸೇರಿದ್ದವು ಯುಗಾದಿಯ ನಂತರ ಒಂಬತ್ತು ದಿನಗಳಿಗೆ ಬರುವ ಶ್ರೀರಾಮ ನವಮಿಯ ಮರುದಿನ ನೆಡೆಯಲಿರುವ ಜಾತ್ರಾ ಪ್ರಯುಕ್ತ ವಿವಿದ ಸಂಘ ಸಂಸ್ಥೆಗಳಿಂದ ಪಾನಕ ನೀರು ಮಜ್ಜಿಗೆ
ಹಾಗು ದೇವಾಲಯದ ಸಮಿತಿಗಳಿಂದ ಅರವಂಟಿಗೆ ಸೇವಾ ಕಾರ್ಯ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು