ಸಾಧನೆಯ ಹಾದಿಯಲ್ಲಿ ಬಾಲಕ ಸಂಸ್ಕೃತ್
ದೊಡ್ಡಬಳ್ಳಾಪುರ:ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಪ್ರಚಲಿತವಾದ ಸತ್ಯ. ಬಹುಷಃ ಈ ಗಾದೆ ಮಾತು ತನ್ನ ಕಿರಿವಯಸಿನಲ್ಲಿ ಸಾಧನೆಯ ಹಾದಿಯಲ್ಲಿ ಬೆಳಕಿಗೆ ಬರುತ್ತಿರುವ ಬಾಲ ಪ್ರತಿಭೆ ಎಸ್. ಎಂ. ಸಂಸ್ಕೃತ್ ಗೆ ಒಪ್ಪುತ್ತದೆನ್ನುವುದರಲ್ಲಿ ಎರಡು ಮಾತಿಲ್ಲ ಸಂಸ್ಕೃತ್ ಎನ್ನುವ ಪೋರ ತನ್ನ ಹನ್ನೆರಡನೇ ವಯಸ್ಸಿಗೆ ತನ್ನದೇ ಆದ ಪರಿಶ್ರಮದ ಚಟುವಟಿಕೆಗಳಿಂದಾಗಿ ವಿವಿಧ ಆಟೋಟಗಳಲ್ಲಿ ಸಾಧನೆ ಮಾಡಿ ಭವಿಷ್ಯದ ದಿನಗಳಲ್ಲಿ ಸಾಧಕ ನಾಗುವ ಎಲ್ಲಾ ಲಕ್ಷಣಗಳನ್ನು ತೋರಿದ್ದಾನೆ.
ಸಂಸ್ಕೃತ್ ಕೌಟುಂಬಿಕ ಹಿನ್ನೆಲೆಯನ್ನು ನೋಡುವುದಾದರೆ ಮಂಜುಳಾ ಹಾಗೂ ಸಿದ್ದಮುನಿಯಪ್ಪ ದಂಪತಿಗಳ ಪುತ್ರನಾದ ಸಂಸ್ಕೃತ್ ಯಲಹಂಕ ಸಿ. ಆರ್. ಪ್ಪ. ಎಫ್ ನ ಕೆ. ವಿ. ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಕ್ಲಿಷ್ಟಕರವಾದ ಏನನ್ನಾದರೂ ಸಾದಿಸುವ ಛಲ ಈ ಬಾಲಕನದು. ಶಿಕ್ಷಣ ಮಾತ್ರವಲ್ಲದೆ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿ ಶಾಲೆಯಲ್ಲಿ ಮೊದಲಿಗನೆನಿಸಿಕೊಂಡಿರುವುದು ಈತನ ಹೆಗ್ಗಳಿಕೆ. ಅದರಲ್ಲೂ ಕ್ರೀಡೆ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಸಂಸ್ಕೃತ್ ವಾಲಿಬಾಲ್, ಹಾಗೂ ಕ್ರಿಕೆಟ್ ತರಬೇತಿ ಪಡೆಯುತ್ತಿದಾನೆ. ಅದರಲ್ಲೂ ತನ್ನ ಅಚ್ಚುಮೆಚ್ಚಿನ ಕ್ರೀಡೆಯಾದ ಟೈಕೊಂಡೋ ದಲ್ಲಿ ಓದು ನಿಮಿಷದಲ್ಲಿ 225 ಪಂಚ್ ಗಳನ್ನು ಮಾಡುವ ಮೂಲಕ ಕ್ರೀಡೆನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ನೋಂದಾಯಿಸಿದ್ದಾನೆ. ಯಲಹಂಕ ಹೆಸರಾಂತ ಸಾನ್ವಿ ಟೈಕೊಂಡೋ ಅಕಾಡೆಮಿಯಲ್ಲಿ ಡಾ. ಕೃಷ್ಣ ಚೈತನ್ಯ ರವರ ತರಬೇತಿಯಲ್ಲಿ ಸುಮಾರು ಹನ್ನೆರಡು ಮಕ್ಕಳು ವಿಶ್ವ ದಾಖಲೆ ಮಾಡಿದ್ದಾರೆ. ಅಂತಹ ಪ್ರಖ್ಯಾತ ಕ್ರೀಡಾ ಅಕಾಡೆಮಿಯಲ್ಲಿ ಕೃಷ್ಣ ಚೈತನ್ಯ ರಂತಹ ಉನ್ನತ ಮಟ್ಟದ ತರಬೇತುದಾರರಿಂದ ವಿಶ್ವ ದಾಖಲೆ ಮಾಡುವ ಮಟ್ಟಕ್ಕೆ ಸಂಸ್ಕೃತ್ ಬೆಳೆದಿರುವುದು ಪ್ರಶಂಸನೀಯವೆಂದೆ ಹೇಳಬೇಕು. ಈ ಬಗ್ಗೆ ಕೋಚರ್ ಕೃಷ್ಣ ಚೈತನ್ಯ ರವರು ತರಬೇತಿ ನೀಡಿದ ಹಲವಾರು ವಿದ್ಯಾರ್ಥಿಗಳಲ್ಲಿ ಸಂಸ್ಕೃತ್ ಒಬ್ಬ ವಿಶಿಷ್ಟ ವಿದ್ಯಾರ್ಥಿಯಾಗಿದ್ದಾನೆ. ಅವನಿಗೆ ಸಾದಿಸುವ ಛಲವಿರುವುದರಿಂದ ವಿಶ್ವ ದಾಖಲೆ ಮಾಡುವ ಮಟ್ಟಕ್ಕೆ ಹೋಗಿರುವುದು ನಮಗೆ ಹಾಗೂ ಸಾನ್ವಿ ಟೈಕೊಂಡೋ ಅಕಾಡೆಮಿಗೆ ತುಂಬಾ ಹೆಮ್ಮೆಯ ಸಂಗತಿ ಎನ್ನುತ್ತಾರೆ. ಮುಂಬರುವ ದಿನಗಳಲ್ಲಿ ಶಿಕ್ಷಣ ಹಾಗೂ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ತೋರುವ ಹಂಬಲದಲ್ಲಿರುವ ಸಂಸ್ಕೃತ್ ಎಂಬ ಕಿಶೋರನಿಗೆ ಹಲವಾರು ಸಂಘ ಸಂಸ್ಥೆಗಳು ಶುಭ ಹಾರೈಸಿವೆ.