ಮೇ ಕೊನೆಯ ವಾರದಲ್ಲಿ ಯುವ ಸಮುದಾಯಕ್ಕಾಗಿ ಗಾಂಧೀ ಕಾರ್ಯಾಗರ

ಬೆಂಗಳೂರು:ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಇವರ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮೂರು ದಿನಗಳ “ಯುವಸಮುದಯಕ್ಕಾಗಿ ಗಾಂಧೀ ಕಾರ್ಯಗಾರ ” ವನ್ನು ಆಯೋಜಿಸಿದ್ದು ಕಾರ್ಯಗಾರದಲ್ಲಿ ಪೋಸ್ಟರ್ ಮಾಡುವುದು, ಗಾಂಧೀ ಸಾಹಿತ್ಯ, ದೃಶ್ಯ ಮಾಧ್ಯಮದಲ್ಲಿ ಗಾಂಧೀ ಅರಿವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀ ತತ್ವಗಳ ಪ್ರಸಾರ , ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ ತತ್ವಗಳನ್ನು ಪ್ರಸಾರ ಮಾಡುವ ಬಗ್ಗೆ ತರಬೇತಿ , ಆಡಿಯೋ , ವಿಡಿಯೋ ಎಡಿಟಿಂಗ್, ಕ್ಯಾಮೆರಾ ಬಳಕೆ , ಮತ್ತು ಯೂಟ್ಯೂಬ್ ಚಾನಲ್ ನಿರ್ವಹಣೆ ಬಗೆಗೆ ಮಾರ್ಗದರ್ಶನ ನೀಡಲಾಗುವುದು .
ಕೇವಲ 40 ಜನಕ್ಕೆ ಮಾತ್ರ ಅವಕಾಶವಿದ್ದು 18 ರಿಂದ 35 ವರ್ಷದ ಎಲ್ಲರೂ ಭಾಗವಹಿಸಬಹುದು .
ಮತ್ತು ಕಾರ್ಯಗಾರಕ್ಕೆ ಬರುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.ಯಾವುದೇ ರೀತಿಯ ಶುಲ್ಕವಿರುವುದಿಲ್ಲ .
ಹೆಚ್ಚಿನ ಮಾಹಿತಿಗಾಗಿ ಆಸಕ್ತರು 9008149149 (ವಿಜಯ್ ಹನೆಕೆರೆ ನಿರ್ದೇಶಕರು ) ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕೆಂದು ಗಾಂಧೀ ಸ್ಮಾರಕ ನಿಧಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .