ವಿದ್ಯೆ ಕಲಿಸಿದ ಗುರುಗಳನ್ನು ಗುರುತಿಸಿ ಗೌರವಿಸುವುದು ಸ್ವಾಗತಾರ್ಹ… ಕೆ. ಎಂ. ಹನುಮಂತರಾಯಪ್ಪ

ದೊಡ್ಡಬಳ್ಳಾಪುರ:1974-75 ನೇ ಸಾಲಿನಲ್ಲಿ ಸುಮಾರು 50 ವರ್ಷಗಳ ಹಿಂದೆ ಸರ್ಕಾರಿ ಜೂನಿಯರ್ ಕಾಲೇಜು, ದೊಡ್ಡಬಳ್ಳಾಪುರ ದಲ್ಲಿ ಎಸ್. ಎಸ್. ಎಲ್. ಸಿ. ಓದುತ್ತಿದ್ದ ಆಗಿನ ವಿದ್ಯಾರ್ಥಿಗಳು ದಿನಾಂಕ:11/05/2025 ರ ಭಾನುವಾರ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯಲ್ಲಿ, ತಮಗೆ ಆ ಅವಧಿಯಲ್ಲಿ ಪಾಠಮಾಡುತ್ತಿದ್ದ ಗುರುಗಳಾದ ಶ್ರೀ K. R. ಶ್ರೀನಿವಾಸ್, ಶ್ರೀಮತಿ A. ಜಯಮ್ಮ ರವರ ಇರುವಿಕೆಯನ್ನು ಗುರ್ತಿಸಿ, ಅವರಿಗೆ “ಗುರುವಂದನಾ” ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಅಥಿತಿಗಳಾಗಿದ್ದ ಶ್ರೀ.K. M. ಹನುಮಂತರಾಯಪ್ಪ ರವರು ಮಾತನಾಡುತ್ತಾ 50 ವರ್ಷಗಳ ಹಿಂದಿನ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಸ್ವಾಗತರ್ಹ, ಇಂತಹ ಗೌರವ ಶಿಕ್ಷಕರಿಗೆ ಮಾತ್ರ ಸಿಗುತ್ತದೆ, ಇದು ಅನುಕರಣೀಯ ಎಂದು ತಿಳಿಸಿದರು.ಸನ್ಮಾನಿತ K. R ಶ್ರೀನಿವಾಸ್ ಹಾಗು ಶ್ರೀಮತಿ. A. ಜಯಮ್ಮ ರವರು, ನನ್ನ ವಿದ್ಯಾರ್ಥಿಗಳು 50 ವರ್ಷಗಳ ನಂತರ, ಅವರಿಗೆ ಸುಮಾರು 65 ವರ್ಷ ಗಾಳಾಗಿರುವಾಗ ನಮ್ಮ ಇರುವಿಕೆಯನ್ನು ಹುಡುಕಿ, ಗುರುತಿಸಿ ಸನ್ಮಾನಿಸುತ್ತಿರುವುದು ನಮಗೆ ಜೀವನದಲ್ಲಿ ಆತಿ ಹೆಚ್ಚು ಆನಂದವನ್ನು ಉಂಟು ಮಾಡಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದರು ಕಾಲೇ ಜಿನ ಉಪ ಪ್ರಾoಶು ಪಾಲರಾದ ಶ್ರೀಮತಿ. H. S. ದಾಕ್ಷಯಿಣಿ ರವರು, ಮುಂದಿನ ವರ್ಷ ಶಾಲೆಯ ಶತಮಾನೋತ್ಸವ ಸಮಾರಂಭ ಬರಲಿದ್ದು , ಆ ಕಾರ್ಯಕ್ರಮದಲ್ಲಿ ಎಲ್ಲರೂ ಪೂರ್ಣಪ್ರಮಾಣ ದಲ್ಲಿ ಬಾಗವಹಿಸಲು ತಿಳಿಸಿದರು. ಸಮಾರಂಭದಲ್ಲಿ ಶ್ರೀ. K. N. ಪ್ರಭುದೇವ ರವರು ಕಾರ್ಯಕ್ರಮ ನಿರೂಪಿಸಿದರು,ಶ್ರೀ B. G. ಅಮರನಾಥ್, ಪ್ರಸ್ಥಾ ವಿಕ ವಾಗಿ ಮಾತನಾಡಿದರು, p. c. ವೆಂಕಟೇಶ್ ಎಲ್ಲರನ್ನೂ ಸ್ವಾಗತಿಸಿ, D. S. ಸಿದ್ದಣ್ಣ ರವರು ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ಸುಮಾರು 50 ಜನ ಹಳೆಯ ಆಗಿನ ವಿದ್ಯಾರ್ಥಿಗಳು ಬಾಗವಸಿದ್ದು ವಿಶೇಷವಾಗಿತ್ತು.