ಈಜಾಡಲು ಹೋಗಿ ಓರ್ವ ಯುವಕ ಸಾವು
ತುಮಕೂರು: ಜಿಲ್ಲೆಯಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಯ,ವಮಚೇನಹಳ್ಳಿ ಗ್ರಾಮದ ಹನುಮಂತ ರಾಜು ಮತ್ತು ನಾಗವೇಣಿ ರವರ ಪುತ್ರ ಹೇಮಂತ್ ಎಂಬ 21 ವರ್ಷದ ಹುಡುಗ ತಿಮ್ಮಸಂದ್ರ ಕೆರೆ ಯಲ್ಲಿ ಮೃತ ಪಟ್ಟಿರುತ್ತಾರೆ.
ಐದಾರು ಜೊತೆಗಾರರೊಂದಿಗೆ ಮಧ್ಯಾಹ್ನ 3:30ಗೆ ಈಜಾಡಲು ಬಂದಿದ್ದು. ಹೇಮಂತ್ ರವರಿಗೆ ಈಜು ಬರದ ಕಾರಣ ಸಾವನ್ನಪ್ಪಿರುತ್ತಾರೆ.
ನಂತರ ಕೋಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಮತ್ತು ಯೋಗೇಶ್ ರವರ ತಂಡ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ನಂತರ ಅಗ್ನಿಶಾಮಕ ದವರ ತಂಡದ ಸಹಾಯದಿಂದ ಶವವನ್ನು ತಿಮ್ಮಸಂದ್ರ ಕೆರೆಯಿಂದ ಈಚೆ ತೆಗೆಯಲಾಯಿತು.