ಸರ್ಕಾರಿ ಜಮೀನು ಉಳಿಸಲು ಕೆ. ಆರ್. ಎಸ್. ಒತ್ತಾಯ
ದೊಡ್ಡಬಳ್ಳಾಪುರ :ತಾಲ್ಲೂಕಿನಲ್ಲಿ ಹಲವಾರು ಸರ್ಕಾರಿ ಸ್ಥಳಗಳನ್ನು ಪ್ರಭಾವಿಗಳು ಹುನ್ನಾರ ನೆಡೆಸಿ ಕಬಳಿಕೆ ಮಾಡಿದ್ದಾರೆ ಸದರಿ ಜಾಗಗಳನ್ನು ಉಳಿಸುವಂತೆ ನಮ್ಮ ಕೆ ಆರ್ ಎಸ್ ಪಕ್ಷವು ಅಧಿಕಾರಿಗಳನ್ನು ಭೇಟಿಮಾಡಿ ಒತ್ತಾಯಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗ ಮಧ್ಯಮಗಳೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಗೋಮಾಳ, ಗುಂಡು ತೋಪು, ಇತರೆ ಸ್ಥಳಗಳು ಕಾಣೆಯಾಗುತ್ತಿವೆ, ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಕೆಲ ಪ್ರಭಾವಿಗಳು ಸರ್ಕಾರಿ ಜಾಗಗಳನ್ನು ಕಬಳಿಸುತ್ತಿದ್ದಾರೆ, ಭೂಮಿ ಬೆಲೆ ಗಗನಕ್ಕೆರಿದ ಹಿನ್ನಲೆ ಭೂ ಗಳ್ಳರ ಹಾವಳಿ ಹೆಚ್ಚಾಗಿದೆ ಈ ರೀತಿಯ ಕೃತ್ಯಾಗಳಲ್ಲಿ ಅಧಿಕಾರಿಗಳು ಭಾಗಿಯಾಗುತ್ತಿರುವುದು ವಿಪರ್ಯಾಸ ಎಂದರು.
ನಮ್ಮ ತಾಲ್ಲೂಕಿನ ಹಲವು ಗ್ರಾಮ ಹಾಗೂ ನಗರ ಭಾಗದಲ್ಲಿ ಈಗಾಗಲೇ ಹಲವು ಸರ್ಕಾರಿ ಜಾಗಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಅಂತಹ ಭೂಗಳ್ಳರ ವಿರುದ್ಧ ದಕ್ಷ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಜಾಗ ಉಳಿಸಬೇಕೆಂದು ಮನವಿ ಮಾಡಿತ್ತೇವೆ, ಮಾನ್ಯ ಉಪವಿಭಾಗಾಧಿಕಾರಿಗಳು ಹಾಗೂ ಮಾನ್ಯ ತಾಲ್ಲೂಕು ದಂಡಧಿಕಾರಿಗಳು ಸ್ಪಂದಿಸಿದ್ದು, ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಜಾಗಗಳನ್ನು ಉಳಿಸದೆ ಇದ್ದ ಪಕ್ಷದಲ್ಲಿ ನಮ್ಮ ಕೆ ಆರ್ ಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ಖಂಡಿತಾ ಕೈಗೊಳ್ಳಲಾಗುವುದು, ಸಾಂಕೇತಿಕ ಪ್ರತಿಭಟನೆ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ,ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಅಲೀಮ್,ಶ್ರೀನಿವಾಸ್, ವೆಂಕಟೇಶ್, ಫಾರೂಕ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.