ಶಾರ್ಟ್ಸರ್ಕ್ಯೂಟ್ ನಿಂದ ಸುಟ್ಟು ಕರಕಲಾಗಿ ವಾಸಮಾಡಲು ಯೊಗ್ಯವಲ್ಲದ ಮನೆಯನ್ನು ದುರಸ್ಥಿಗೊಳಿಸಿದ ಭೀಮ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್.

ತಾವರೆಕೆರೆ: ಹೊಸಕೋಟೆ ತಾಲ್ಲೂಕು ನಂದಗುಡಿ ಹೋಬಳಿ ಗಡಿಗೇನಹಳ್ಳಿ ಗ್ರಾಮದ ಬಡ ಕುಟುಂಬದ ಮನೇಯೊಂದು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾಗಿ ವಾಸ ಮಾಡಲು ಯೊಗ್ಯವಲ್ಲದ ಮನೆಯನ್ನು ಭೀಮ್ ಸೇವಾ ಸಮಿತಿ ಸಂಘಟನೆಯು ಬೇಟಿ ನೀಡಿ ಸಂಪೂರ್ಣ ಘಟನೆಯನ್ನು ಪರಿಶೀಲಿಸಿ ಸಂಭಂದಿಸಿದ ಅಧಿಕಾರಿಗಳ ಹಾಗೂ ಹೊಸಕೋಟೆ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಆದಂತಹ ಸಿದ್ದರಾಜು ರವರು ಸಹ ಸ್ಥಳಕ್ಕೆ ಬೇಟಿ ನೀಡಿ ಮನೆಯ ದುರಸ್ಥಿಗಾಗಿ ಬೇಕಾದ ಎಲೆಕ್ಟ್ರಿಕಲ್ ಸಾಮಾಗ್ರಿಗಳನ್ನು ನೀಡಿದ್ದು ಹಾಗೂ ಭೀಮ್ ಸೇವಾ ಸಮಿತಿಯ ತಂಡವು ಮನೆಯ ದುರಸ್ಥಿಗೆ ಕೈ ಜೋಡಿಸಿ ವಾಸಿಸಲು ವ್ಯವಸ್ಥೆ ಮಾಡಿ ಕೊಟ್ಟದ್ದೆವೇ ಎಂದು ಭೀಮ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ರಾವಣ್ ತಿಳಿಸಿದರು

ಇದೇ ಸಂದರ್ಭದಲ್ಲಿ ಯುವ ಘಟಕ ರಾಜ್ಯಾಧ್ಯಕ್ಷರು ಗಂಗಾಧರ್ ಬಿ.ಸಿ
ಚಾಲಕರ ಘಟಕ ಬೆಂ ಗ್ರಾಂ ಜಿಲ್ಲಾಧ್ಯಕ್ಷರು
ಮುನಿರಾಜ್ ಬಿ.ಆರ್
ಆಟೋ ಘಟಕ ಬೆಂ ಗ್ರಾಂ ಜಿಲ್ಲಾಧ್ಯಕ್ಷರು
ಶ್ರೀನಾಥ್. ಸಿ
ಕಾರ್ಮಿಕ ಘಟಕ ‌ಬೆಂ ಗ್ರಾಂ ಜಿಲ್ಲಾಧ್ಯಕ್ಷರು
ವರುಣ್ ರಾಜ್ ಚಕ್ರವರ್ತಿ
ವಿದ್ಯಾರ್ಥಿ ಘಟಕ ಹೊಸಕೋಟೆ ಟೌನ್ ಅಧ್ಯಕ್ಷರು ನಿತೀನ್ ಕುಮಾರ್
ಯುವ ಘಟಕ ಹೊಸಕೋಟೆ ಟೌನ್ ಅಧ್ಯಕ್ಷರು
ತೇಜಸ್ ಕುಮಾರ್ ಸ್ಥಳದಲ್ಲಿ ಹಾಜರಿದ್ದರು