ದೇವಾಲಯದ ಜಮೀನು, ಖಾಸಗಿ ವ್ಯಕ್ತಿಗೆ ಮಾರಾಟ ಕಾನೂನು ಹೋರಾಟಕ್ಕೆ ಸಿದ್ದರಾದ ತೊಗರಿ ಘಟ್ಟ ಗ್ರಾಮಸ್ಥರು

ಕೊರಟಗೆರೆ:ಸರ್ಕಾರ 1960ರ ಇಸವಿಯಲ್ಲಿ ಶ್ರೀ ಚೆಲುವ ಚೆನ್ನಿ ಗರಾಯ ದೇವಾಲಯಕ್ಕೆ ಸರ್ವೇ ನಂಬರ್ 130ರಲ್ಲಿ 4 ಎಕರೆ 6 ಕುಂಟೆ ಜಮೀನು ಮಂಜೂರು ಮಾಡಿದೆ. ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಡಲಿದ್ದು. ಇಲಾಖೆಗೆ ಗೊತ್ತಿಲ್ಲದೆ ಅರ್ಚಕರ ಕುಟುಂಬ ನೆಲಮಂಗಲದ ಮಹಿಳೆಗೆ ಕ್ರಯ ಮಾಡಿದ್ದಾರೆ

ಕೊರಟಗೆರೆ ತಾಲೂಕು ಹೋಳವನಹಳ್ಳಿ ಹೋಬಳಿ ತೊಗರಿ ಘಟ್ಟ ಗ್ರಾಮದ ಚಂದ್ರಗ್ರಹ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಸರ್ಕಾರದ ಜಮೀನನ್ನು ಇಲಾಖೆಯ ಗಮನಕ್ಕೆ ತರದೆ ನೆಲಮಂಗಲದ ಮೂಲದ ಭಾಗ್ಯಮ್ಮ ಮತ್ತು ದೀಪ ಜಿ ಎಂಬುವರಿಗೆ ಮಾರಾಟ ಮಾಡಿದ್ದು. ಅಧಿಕಾರಿಗಳ ಕರ್ತವ್ಯ ಲೋಕದಿಂದ ಕ್ರಯ ಮಾಡಿದ್ದಾರೆಂದು ತಾಲೂಕು ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಮನವಿಯನ್ನು ಗ್ರಾಮಸ್ಥರು ಸಲ್ಲಿಸಿರುತ್ತಾರೆ.

ಸರ್ಕಾರದಿಂದ ದೇವಾಲಯಕ್ಕೆ ಜಮೀನು ಮಂಜೂರಾದ ವೇಳೆ ಭೂ ನ್ಯಾಯ ಮಂಡಳಿಯ ಅಡಿಯಲ್ಲಿ ಸದರಿ ದೇವಾಲಯದ ಅರ್ಚಕ ಚೆನ್ನಕೇಶವಚಾರ್ ಮತ್ತು ಅಥಣಿ ಪುಟ್ಟಲಕ್ಷ್ಮಿ ಅಮ್ಮನವರ ಖಾತೆ ಪಾಣಿ ಮಾಡಿಸಿಕೊಂಡಿದ್ದರು. ಇವರ ಮರಣದ ನಂತರ ಸೊಸೆ ಸುಶೀಲಮ್ಮ ಕೋಂ ಲೇಟ್ ಶ್ರೀರಂಗ ಮೂರ್ತಿ ರವರ ಹೆಸರಿಗೆ ಎಂಆರ್‌ಎಚ್ 54/ 2019-20ರಲ್ಲಿ ಖಾತೆ ಮತ್ತು ಪಹಣಿಯಾಗಿದ್ದು. ಗ್ರಾಮಸ್ಥರು ಇದನ್ನು ವಿರೋಧಿಸಿ ಜಮೀನು ನಮ್ಮ ಮೇಲೆ ಭೂ ನ್ಯಾಯ ಮಂಡಳಿಯಲ್ಲಿ ದಾವೆಯನ್ನು ದಾಖಲಿಸಿದ್ದು. ಜಮೀನು ವಿಚಾರಣೆಯ ದಾವೆ ದಾಖಲಿಸಿದ್ದು ಜಮೀನು ವಿಚಾರಣೆಯ ಸಂಬಂಧಪಟ್ಟಂತೆ ಪಹಣಿಯಲ್ಲಿ ಉಲ್ಲೇಖಿಸಲಾಗಿದೆ. ಕೊರಟಗೆರೆ ಜಿಎಂಎಫ್‌ಸಿ ನ್ಯಾಯಾಲಯದಲ್ಲಿ ಮತ್ತು ಹುಚ್ಚ ನ್ಯಾಯಾಲಯ ದೇವಾಲಯದ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ಆದೇಶ ಮಾಡಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸುಶೀಲಮ್ಮನವರ ಮಗ ನರಸಿಂಹಮೂರ್ತಿ ಮತ್ತು ಸೊಸೆ ಅಶ್ವಿನಿ ಬಿ ಎಂ ಕುಣಿಗಲ್ ಉಪ ನೊಂದಣಿ ಅಧಿಕಾರಿಗಳ ಕಚೇರಿಯಲ್ಲಿ 12/5/2025 ರಂದು ನೆಲಮಂಗಲ ಮೂಲದ ಭಾಗ್ಯಮ್ಮ ಮತ್ತು ದೀಪಾ ಜೆ ಎಂಬುವರ ಹೆಸರಿಗೆ ಕ್ರಯ ಮಾಡಿರುವುದು ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರು ಎಚ್ಚೆತ್ತು ಎಂಆರ್ ಅನ್ನು ವಜಗೊಳಿಸುವಂತೆ ಕೊರಟಗೆರೆ ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್ ಕೆ ರವರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ.

ಅರ್ಚಕರು ನಟರಾಜ್ ರವರು ಮಾತನಾಡಿ : ನಾನು 12 ವರ್ಷದಿಂದ ಪೂಜಾರಿಕೆ ಮಾಡಿಕೊಂಡು ಬಂದಿದ್ದು. ಈ ದೇವಾಲಯಕ್ಕೆ ಪುರಾತನ ಇತಿಹಾಸವಿದೆ. ದೇವಸ್ಥಾನದ ಅಭಿವೃದ್ಧಿಗೆ ಈ ಜಮೀನು ಪೂರಕವಾಗಿ ಬೇಕಾಗಿದ್ದು. ದೇವಾಲಯ ಜಮೀನು ಭಾಗ್ಯಮ್ಮ ಮತ್ತು ದೀಪ ಜೆ ಅವರ ಹೆಸರಿಗೆ ಕ್ರಯ ಆಗಿರೋದು ಅಚ್ಚರಿಯನ್ನ ಉಂಟು ಮಾಡಿದೆ ಎಂದು ಹೇಳಿದರು.

ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಲಿಂಗಪ್ಪನವರು ಮಾತನಾಡಿ : 200 ಜನ ಸಮ್ಮುಖದಲ್ಲಿ ತಾಸಿಲ್ದಾರ್ ಮಂಜುನಾಥ್ ರವರಿಗೆ ಮನವಿಯನ್ನು ಸಲ್ಲಿಸಿದ್ದು 1989 ರಲ್ಲಿ ದಾವೇ ಇದ್ದು. ಸ್ಟೇ ಎಂಟ್ರಿ ಯನ್ನು ತೆಗೆದು ಸುಶೀಲಮ್ಮನ ಅವರ ಹೆಸರಿಗೆ ಕ್ರಯಕ್ಕೆ ದಾರಿ ಮಾಡಿಕೊಟ್ಟಿದ್ದು ಮಾಡಿಕೊಟ್ಟಿದ್ದು. ಅಧಿಕಾರಿಗಳ ನಿರ್ಲಕ್ಷಿತನದಿಂದ 2024ರ ವರ್ಗು ಕಲಂ 11 ಅಡಿ ದಾವೆ ನಂಬರ್ ನೋಂದಣಿಯಾಗಿತ್ತು. 2025 ರಲ್ಲಿ ಕುಣಿಗಲ್ ಉಪ ನೊಂದಣಿ ಅಧಿಕಾರಿಗಳು ನೆಲಮಂಗಲದ ಭಾಗ್ಯಮ್ಮ ಎಂಬುವರಿಗೆ ಕ್ರಯ ಮಾಡಿದ್ದಾರೆ . ಆದರಿಂದ ಗ್ರಾಮಸ್ಥರ ಸಮ್ಮುಖದಲ್ಲಿ MR ಮತ್ತು ಕ್ರಯಾ ಪತ್ರ ರದ್ದತಿಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಹಸಿಲ್ದಾರ್ ಅವರು ಭರವಸೆ ಕೊಟ್ಟಿರುತ್ತಾರೆ. ಎಂದು ಹೇಳಿದರು