ಗುಂಡಿ ಬಿದ್ದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಪ್ರತಿಭಟನೆ ನೆಡಿಸಿದ ಗ್ರಾಮಸ್ಥರು

ಕೃಷ್ಣರಾಜಪೇಟೆ:ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು,_

_ನಂತರ ಮಾತನಾಡಿದ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ವಿನುತಾ ಸುರೇಶ್ ರವರು ಮಾಜಿ ಸ್ವಿಕರ್ ದಿವಂಗತ ಕೃಷ್ಣ ರವರ ಕಾಲದಿಂದಲೂ ರಸ್ತೆ ಇಲ್ಲ. ಇಲ್ಲಿಯವರೆಗೂ ತಾಲ್ಲೂಕಿನ ಕ್ಷೇತ್ರದಲ್ಲಿ ಗೆದ್ದ ಶಾಸಕರು-ಸಚಿವರು ಯಾರು ಕೂಡ ತೆಲೆ ಕೆಡಿಸಿಕೊಂಡಿಲ್ಲ ಗ್ರಾಮದಲ್ಲಿ ಕಳೆದ ಬಾರಿ ವಿಧಾನ ಸಭಾ ಕ್ಷೇತ್ರ ಚುನಾವಣೆಯನ್ನು ಬಹಿಷ್ಕಾರ ಮಾಡಲು ಮುಂದಾಗಿದ್ದರು ನಂತರ ಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆಯನ್ನು ಬಹಿಷ್ಕಾರ ಮಾಡಬೇಡಿ ಮುಂದೆ ನಿಮ್ಮ ಗ್ರಾಮದ ರಸ್ತೆ ಕಾಮಗಾರಿಯನ್ನು ಮಾಡಿಸುತ್ತೆವೆ ಎಂದು ಆಸ್ವಾಸನೆ ನೀಡಿ ಇಲ್ಲಿಯವರೆಗೂ ಯಾರು ಸಹ ತಿರುಗಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು,_

_ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಶೇಖರ್, ಶಿವು. ಲೋಲಾಕ್ಷಿ ಜಗದೀಶ್, ಗ್ರಾ. ಪ. ಮಾಜಿ ಅಧ್ಯಕ್ಷ ಮಂಜು, ರವಿ, ರಂಗೇಗೌಡ, ಪ್ರೇಮ, ಕಾಳಯ್ಯ, ಚಲುವಯ್ಯ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದರು,_

ವರದಿ: ಸಾಯಿಕುಮಾರ್. ಎನ್. ಕೆ