ಗೃಹ ಸಚಿವರ ತವರಲ್ಲಿ ಕಳಪೆ ಗುಣಮಟ್ಟದ ಅನ್ನಭಾಗ್ಯ: ಅಕ್ಕಿ ಜೊತೆಗೆ ಸತ್ತ ಇಲಿ ಫ್ರೀ!
ಕೊರಟಗೆರೆ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯು ಕಳೆದ ಮೂರು ತಿಂಗಳಿಂದ ಚುರುಕುಗೊಂಡಿದ್ದು. ಬಿಪಿಎಲ್ ಕಾರ್ಡುದಾರರಿಗೆ ರಾಜ್ಯ ಸರ್ಕಾರವು ಹಣ ನೀಡುವ ಬದಲಾಗಿ ಅಕ್ಕಿ ನೀಡುವ ಉದ್ದೇಶವನ್ನು ಹೊಂದಿದ್ದು. ಈ ಹಿನ್ನೆಲೆಯಲ್ಲಿ ಕಳಪೆ ಹಾಗೂ ಗುಣಮಟ್ಟವಿಲ್ಲದ ಅಕ್ಕಿ ವಿತರಣೆ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಯಲ್ಲಿ ಸತ್ತ ಇಲಿ ಹಾಗೂ ಕಲ್ಲು ಮಣ್ಣು ದೂಳು ಕಂಡು ಅನ್ನಭಾಗ್ಯದ ಫಲಾನುಭವಿಗಳು ದಿಗ್ಬ್ರಾಂತರಾದರು.
ಸ್ಥಳೀಯ ಫಲಾನುಭವಿ ರಾಮಮೂರ್ತಿಯವರು ಮಾತನಾಡಿ : ಅಕ್ಕಿಯಲ್ಲಿ ಸತ್ತ ಇಲಿ ಸಿಕ್ಕಿದು. ಬಡಸಾಮಾನ್ಯರು ಅಕ್ಕಿಯನ್ನು ಹೇಗೆ ಬಳಸುವುದು? ಬಳಸಲು ಯೋಗ್ಯವೇ? ಆರೋಗ್ಯದ ಗತಿ ಏನ್ ಸರ್…! ಸರ್ಕಾರ ಹಾಗೂ ಅಧಿಕಾರಿಗಳು ಇಂತಹ ಘಟನೆಗಳ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ? ನಾವು ಈ ಅಕ್ಕಿಯನ್ನು ಬಳಸುವುದರ ಬಗ್ಗೆ ಚಿಂತನೆ ಉಂಟಾಗಿದೆ. ಈ ಅಕ್ಕಿ ಕೇಂದ್ರದಿಂದ ಬರುತ್ತದೆಯೋ ಇಲ್ಲ ಗೋಡೌನಿಂದ ಬರುತ್ತದೆಯೋ ಗೊತ್ತಿಲ್ಲ ನಾವು ಅಕ್ಕಿಯನ್ನು ಪಡೆಯುವಾಗ ಇದು ಸಿಕ್ಕಿದ್ದು ಹಲವಾರು ಪ್ರಶ್ನೆಗೆ ದಾರಿ ಮಾಡಿಕೊಟ್ಟಿದೆ. ಜೊತೆಗೆ ಸ್ಥಳೀಯ ಫಲಾನುಭವಿ ಮಂಜುಳಾ ರವರು ಮಾತನಾಡಿ : ಸರ್ಕಾರದ ಅಕ್ಕಿಯನ್ನು ನಾವು ಹಿಂದಿನಿಂದಲೂ ಪಡೆದುಕೊಳ್ಳುತ್ತಿದ್ದು. ಅಕ್ಕಿಯ ಗುಣಮಟ್ಟದಲ್ಲಿ ಏರುಪೇರುಗಳು ಕಂಡುಬಂದಿದೆ ಹಾಗೂ ಈಗ ನೋಡುವುದಾದರೆ ಹಕ್ಕಿಯ ಮೂಟೆಯಲ್ಲಿ ಸತ್ತ ಇಲಿಯನ್ನ ಕಂಡು ನಮ್ಮ ಆರೋಗ್ಯದ ಬಗ್ಗೆ ಚಿಂತನೆ ಉಂಟಾಗಿದೆ ಪ್ರಸ್ತುತವಾಗಿ ಕೊರೋನಾ ಕಾಯಿಲೆಯದ್ದು ಈ ಅಕ್ಕಿಯನ್ನು ಬಳಸುವುದರಿಂದ ಮನೆಯಲ್ಲಿನ ಮಕ್ಕಳು ಮರಿಗಳು ಆರೋಗ್ಯದ ಬಗ್ಗೆ ಕಳವಳ ಸೃಷ್ಟಿಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕೊರಟಗೆರೆ ತಾಲ್ಲೂಕಿನ ಅಧಿಕಾರಿಗಳ ನಿರ್ಲಕ್ಷ ಮತ್ತು ಬೇಜವಾಬ್ದಾರಿ ಇದಕ್ಕೆಲ್ಲ ಕಾರಣ ಎಂದು ಕೋಳಾಲ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಫಲಾನುಭವಗಳು ಅಧಿಕಾರಿಗಳಿಗೆ ಇಡಿ ಶಾಪವನ್ನು ಹಾಕಿದರು ಹಾಗೂ ಇಂಥ ನಿರ್ಲಕ್ಷತನಕ್ಕೆ ಕಠಿಣ ಕ್ರಮವನ್ನು ಕೈಗೊಳ್ಳಲು ಆಗ್ರಹಿಸಿದ್ದರು.
ಕೊರಟಗೆರೆ ತಾಲೂಕಿನ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯದಲ್ಲಿ ಅಕ್ಕಿ ಪೂರೈಕೆ ಆಗುತ್ತಿಲ್ಲ ಮತ್ತು ತೂಕದಲ್ಲಿ ಏರುಪೇರು ಹಾಗೂ ಅಕ್ಕಿಯ ಅಕ್ರಮ ಮಾರಾಟ ಹೆಚ್ಚಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ವರದಿ : ಭರತ್ ಕೆ