ಶ್ರೀ ಮಹಾಲಕ್ಷ್ಮಿಯ ಕೃಪೆಯಿಂದ ಒಲಿದ ನೂತನ ದಾಸೋಹ ಹಾಗೂ ನವೀಕೃತ ಕಲ್ಯಾಣ ಮಂಟಪ

ಸನಾತನತೆಯೇ ಪುರಾತನದ ಇತಿಹಾಸ ಎಂದ ಗುರು ಪೀಠಗಳು

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ತೀತ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಪ್ರಸಿದ್ಧ ಗೊರವನಹಳ್ಳಿಯ ಪುರಾತನ ಇತಿಹಾಸವಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದ ನೂತನ ದಾಸೋಹ ನಿಲಯ ಹಾಗೂ ನವಿಕೃತ ಕಲ್ಯಾಣ ಮಂಟಪವನ್ನು ಶ್ರೀ ಬಿ ಜಿ ವಾಸುದೇವ್ ಅವರ ಅಧ್ಯಕ್ಷತೆ ಹಾಗೂ ಪ್ರಮುಖ ಗುರು ಹಿರಿಯರ ಆಶಯದಲ್ಲಿ ಉದ್ಘಾಟನೆ ಮಾಡಲಾಯಿತು.

ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ಪುರಾತನ ಇತಿಹಾಸವನ್ನು ಹೊಂದಿದ್ದು. ಹಿಂದೆ ಅಬ್ಬಯ್ಯ ಎನ್ನುವ ವ್ಯಕ್ತಿ ಈ ಸ್ಥಳಕ್ಕೆ ಬಂದಾಗ ಲಕ್ಷ್ಮಿಯ ಆಶೀರ್ವಾದದೊಂದಿಗೆ ಸಕಲ ಐಶ್ವರ್ಯ ಸಂಪತ್ತು ಲಭ್ಯವಾಗಿ ನಂತರ ದಾನ ಧರ್ಮವನ್ನು ಮಾಡಿದ ಅಬ್ಬಯ್ಯ ಅಬ್ಬಯ್ಯನ ಮರಣದ ನಂತರ ಸಹೋದರ ತೋಟದಪ್ಪ ಎಂಬುವರು ಪೂಜೆಯನ್ನು ಆರಂಭಿಸಿದರು ನಂತರ ದೇವಿ ಕನಸಿನಲ್ಲಿ ಬಂದು ದೇವಾಲಯವನ್ನು ನಿರ್ಮಿಸುವಂತೆ ಕೇಳಿದಳು. ನಂತರ 1925 ರಲ್ಲಿ ಗೊರವನಹಳ್ಳಿಗೆ ಆಗಮಿಸಿದ ಕಮಲಮ್ಮ ಎಂಬ ಭಕ್ತೆ ದೇವಾಲಯದ ಸ್ಥಿತಿಯನ್ನು ಕಂಡು 1959ರಲ್ಲಿ ಅವರು ಅಲ್ಲಿ ನೆಲೆಸಿ ದೇವಿಯ ಮಹತ್ವವನ್ನು ಭಕ್ತರಿಗೆ ತಿಳಿಸಿದರು. ಈಗಲೂ ವಿಜ್ಞಾನ ಲೋಕಕ್ಕೆ ಸವಾಲಿಸಿಯುವಂತ ಪವಾಡಗಳು ಹಾಗೂ ಭಕ್ತರ ಇಷ್ಟಾರ್ಥಸಿದ್ದಿಗಳು ಇಲ್ಲಿ ನಡೆಯುತ್ತಿದೆ. ಎಂದು ಭಕ್ತರು ಅಭಿಪ್ರಾಯ ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜಪಾನಂದ ಮಹಾರಾಜ ಸ್ವಾಮಿಗಳು : ಗುರು ಸ್ತೋತ್ರಗಳನ್ನು ಹೇಳುತ್ತಾ ಪ್ರಾರಂಭ ಮಾಡಿ ತುಮಕೂರು ಜಿಲ್ಲೆ ದಾಸೋಹಕ್ಕೆ ಹೆಸರುವಾಸಿಯಾದ ಜಿಲ್ಲೆ ಯಾಕಂದ್ರೆ ಶ್ರೀ ಶಿವಕುಮಾರ ಸ್ವಾಮಿಗಳ ಒಂದು ಮಾದರಿಯಲ್ಲಿ ದಾಸೋಹ ಪರಂಪರೆಯನ್ನ ನಡೆಸಿಕೊಂಡು ಹೋಗುತ್ತಿರುವುದು ಹಾಗೂ ಧರ್ಮಸ್ಥಳ ತಿರುಪತಿ ಹೊರನಾಡು ದೇವಾಲಯಗಳು ದಾಸೋಹಕ್ಕೆ ಮಾದರಿಯಾಗಿವೆ ಹಾಗಾಗಿ ದಾಸೋಹವು ಒಂದು ಧರ್ಮ ಜಾಗೃತಿಯಾಗಿದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಲು ಗುರುಪೀಠಗಳು ಕಾರ್ಯನಿರ್ವಹಿಸುವುದು ಮುಖ್ಯವಾಗುತ್ತದೆ. ಜಗನ್ಮಾತೆಯ ಕೃಪೆಗೆ ಪಾತ್ರವಾಗಲು ದಾಸನ ದಾಸನ ದಾಸ ಆಗಬೇಕು ಮತ್ತು ದೇವಾಲಯದಲ್ಲಿ ವಿನಯತೆಯನ್ನ ಪಾಲನೆ ಮಾಡಬೇಕು ಆಗ ಮಾತ್ರ ಸಾಧ್ಯ ಎಂದರು.

ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ: ಕಮಲಮ್ಮ ತನ್ನ ಲಕ್ಷ್ಮಿ ಭಕ್ತಿ ಇಂದ ಭಿಕ್ಷಾಟನೆ ಮಾಡಿ ಗುರು ಚರಿತ್ರೆಯನ್ನು ಓದಿ ಪುಣ್ಯಕ್ಷೇತ್ರವನ್ನು ನಿರ್ಮಿಸಲು ಸಾಧ್ಯವಾಗಿದು. ಶಿವ ಶಕ್ತಿ ಯುಕ್ತಿ ಸರಳ ಸಹಜ ಬದುಕಿಗೆ ಮುಕ್ತಿಯ ಮಾರ್ಗ. ನಮ್ಮ ಯೋಚನೆಗಳು ಯಾವಾಗ ಒಳ್ಳೆಯದಾಗುತ್ತದೆ ಆಗ ಮಾತ್ರ ಒಳ್ಳೆಯದಾಗುತ್ತದೆ. ಈ ಸ್ಥಳದಲ್ಲಿ 10,000 ಸಸ್ಯಗಳನ್ನು ನೆಡಲು ನೆರವನ್ನು ನೀಡುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಮಕ್ಕಳನ್ನು ಫಸ್ಟ್ ರಾಂಕ್ ರಾಜು ಗಳನ್ನು ಮಾಡಬೇಡಿ ಕೌಶಲ್ಯ ತರಬೇತಿಗಳನ್ನು ಕೊಡಿ ಹಾಗೂ ಸಮಾಜದಲ್ಲಿ ಡ್ರಗ್ಸ್ ನ ಹಾವಳಿ ಜಾಸ್ತಿಯಾಗಿದ್ದು. ಇದರಿಂದ ಮಕ್ಕಳ ಬುದ್ಧಿಯನ್ನ ಕ್ಷೀಣಿಸುತ್ತದೆ ಇಂಥ ಡ್ರಗ್ಸ್ಗಳ ನಿರ್ಮೂಲನೆಗೆ ಗುರು ಪೀಠಗಳ ಗಮನದಲ್ಲಿರಬೇಕು. ಇಲ್ಲಿ ದಾಸೋಹ ಮಾತ್ರ ಆಗೋದು ಬೇಡ ಆಸ್ಪತ್ರೆಗಳು ಕಾಲೇಜು ನಿರ್ಮಾಣ ಆಗಲಿ ಎಂದು ಆಶೀರ್ವದಿಸಿದರು.

ಶ್ರೀ ಪರಮಪೂಜ್ಯ ಡಾಕ್ಟರ್ ಬಿ ಭೀಮೇಶ್ವರ ಜೋಶಿಗಳು ಮಾತನಾಡಿ : ಎಲ್ಲಿ ಗುರು ಪೀಠಗಳು ಸ್ಥಾಪನೆಯಾಗಿರುತ್ತವೋ ಅಲ್ಲಿ ಶಾಂತಿ ನೆಮ್ಮದಿಗಳು ನೆಲೆಸಿರುತ್ತವೆ. ಮಹಾಲಕ್ಷ್ಮಿ ದೇವಾಲಯ ಕರ್ನಾಟಕದಲ್ಲಿ ವಿಶೇಷ ದೇವಾಲಯ ಇಲ್ಲಿನ ವಿಶೇಷ ವಿಷ್ಣುವಿನ ವಾಸಸ್ಥಾನ. ಭಕ್ತರಲ್ಲಿ ಸರ್ವಜನ ಸುಖಿನೋ ಭವಂತು ಎಂಬ ಸಂಕಲ್ಪದಿಂದ ಹಾಗೂ ದೇವಾಲಯದ ಒಳಗೆ ಬರುವಾಗ ಅಧಿಕಾರ ಸಂಪತ್ತನ್ನು ಬಿಟ್ಟು ಮಗುವಾಗಿ ಬಂದಾಗ ಮಾತ್ರ ತಾಯಿ ಜಗನ್ಮಾತೆಯ ದರ್ಶನ ಕೊಡುತ್ತಾಳೆ ಎಂದರು.

ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ : ಅನ್ನ ಹಾಕೋ ಮನೆ ಕೆಡುವುದಿಲ್ಲ ಗೊಬ್ಬರ ಹಾಕುವ ಹೊಲ ಕೆಡುವುದಿಲ್ಲ ಎಂಬ ಗಾದೆ ಮಾತಿನಂತೆ ಅನ್ನದಾಸೋದ ಮಹತ್ವವನ್ನು ತಿಳಿಸಿದರು. ಜಗತ್ತಿನಲ್ಲಿ ತೃಪ್ತಿ ಕೊಡುವ ಅಂಶಗಳಲ್ಲಿ ದಾಸೋಹ ಮಹತ್ವ ಪಾತ್ರವನ್ನು ವಹಿಸುತ್ತದೆ. ದಾಸೋಹದ ಮಂದಿರದ ವಿನ್ಯಾಸ ತುಂಬಾ ಚೆನ್ನಾಗಿದೆ. ಅನ್ನಕ್ಕೆ ಸಮನಾದದ್ದು ಅಂದ್ರೆ ನೀರು ಮಾತ್ರ ಏಕೆಂದರೆ ಹಿಂದಿನ ಕಾಲದಲ್ಲಿ ರಸ್ತೆಯ ಬದಿಯಲ್ಲಿ ಅರವಟ್ಟಿಗೆಗಳನ್ನು ನಿರ್ಮಾಣ ಮಾಡುತ್ತಿದ್ದು ಹಸಿದ ಹೊಟ್ಟೆಗೆ ನೀರುಣಿಸಲು ಎಂದು ನೀರಿನ ಮಹತ್ವವನ್ನು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿ. ಶ್ರೀ ಜಪಾನಂದ ಮಹಾರಾಜ ಸ್ವಾಮಿ. ಪರಮಪೂಜೆ ಡಾಕ್ಟರ್ ಭೀಮೇಶ್ವರ ಜೋಶಿ ಮಾನ್ಯ ಶಾಸಕರು ಮೂಡಿಗೆರೆ ವಿಧಾನಸಭಾ ಕ್ಷೇತ್ರ ಶ್ರೀಮತಿ ನಯನಮೋಟಮ್ಮ. ಡಾಕ್ಟರ್ ಎನ್ ತಿಪ್ಪೇಸ್ವಾಮಿ ಅಪಾರ ಜಿಲ್ಲಾಧಿಕಾರಿಗಳು ತುಮಕೂರು. ತಾಲೂಕು ದಂಡಾಧಿಕಾರಿಗಳು ಶ್ರೀ ಮಂಜುನಾಥ. ಪೊಲೀಸ್ ಉಪ ಅಧ್ಯಕ್ಷರು ಶ್ರೀ ಮಂಜುನಾಥ. ಆರಕ್ಷಕ ವೃತ್ತ ನಿರೀಕ್ಷಕರು ಕೊರಟಗೆರೆ ವೃತ್ತ ಅನಿಲ್. ಶ್ರೀ ಕೇಶವಮೂರ್ತಿ ವಿಶೇಷ ಕರ್ತವ್ಯ ಅಧಿಕಾರಿ ದೇವತಾ ಕಾರ್ಯಕ್ರಮದ ಉಸ್ತುವಾರಿ ಶ್ರೀ ಸುಬ್ರಹ್ಮಣ್ಯ ಪ್ರಸನ್ನ ಕುಮಾರ್ ಮತ್ತು ತಂಡದವರು ದೇವಾಲಯದ ವಾಸ್ತು ಮಾರ್ಗದರ್ಶಕರಾದ ಪ್ರಖ್ಯಾತ ವಾಸ್ತು ಮತ್ತು ಜ್ಯೋತಿಷ್ಯ ತಜ್ಞರಾದ ಶ್ರೀಯುತ ನಿರಂಜನ್ ಬಾಬು ಶ್ರೀ ಮಹಾಲಕ್ಷ್ಮಿ ಚಾಟಬಲ್ ಟ್ರಸ್ಟ್. ಶ್ರೀ ಬಿಸಿ ಲಕ್ಷ್ಮಯ್ಯ ಕಾರ್ಯನಿರ್ವಣ ಅಧಿಕಾರಿ ಹಾಗೂ ಶ್ರೀ ಮಹಾಲಕ್ಷ್ಮಿ ಚಟುವಟಿ ಟ್ರಸ್ಟ್ ಅಧ್ಯಕ್ಷರು ಕಾರ್ಯದರ್ಶಿ ಖಜಾಂಚಿ ಧರ್ಮದರ್ಶಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಗೊರವನಹಳ್ಳಿ ನರಸಯ್ಯನ ಪಾಳ್ಯ ಗೊಲ್ಲರಹಟ್ಟಿ ಗ್ರಾಮಸ್ಥರು ಮುಂತಾದವರು ಉಪಸ್ಥಿತಿ ಇದ್ದರು.

ವರದಿ : ಭರತ್ ಕೆ