ಶ್ರೀಅಭಯ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ 18ನೇ ವರ್ಷದ ಗುರು ಪೊರ್ಣಮಿಯ ವಾರ್ಷಿಕೋತ್ಸವ ಹಾಗು ಗುರುವಂದನಾ ಕಾರ್ಯಕ್ರಮ
ತಾವರೆಕೆರೆ:ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿರುವ ಶ್ರೀ ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಗುರುಪೂರ್ಣಮಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿಸಮೇತ ಸತ್ಯನಾರಾಯಣ ಸ್ವಾಮಿಯ ವಿಶೇಷ ಪೂಜೆ ಹಾಗೂ 18ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ , ಗುರುವಂದನಾ ಕಾರ್ಯಕ್ರಮ.
ಪೂಜಾ ಕಾರ್ಯಕ್ರಮಗಳು ಕ್ಷೇತ್ರದ ಧರ್ಮದರ್ಶಿಗಳಾದ ವೇದಬ್ರಹ್ಮ ಡಾಕ್ಟರ್ ಡಿ.ಎಲ್ ವೀರಬ್ರಹ್ಮಚಾರ್ ಗುರೂಜಿಗಳ ನೇತೃತ್ವದಲ್ಲಿ ನೆರವೇರಿತು. ಗುರುಪೂರ್ಣಿಮೆಯ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ನಿರಂತರ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳು ಪೂಜಾ ಕೈಂಕರ್ಯಗಳು ನೂರಾರು ಭಕ್ತಾದಿಗಳೊಂದಿಗೆ ನೆರವೇರಿತು.
ನಂತರ ಮಾತನಾಡಿದ ಕ್ಷೇತ್ರದ ಧರ್ಮದರ್ಶಿಗಳು ಪ್ರತಿವರ್ಷದಂತೆ ಈ ವರ್ಷವೂ ಸಹ ಗುರುಪೂರ್ಣಿಮೆಯ ಪ್ರಯುಕ್ತ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತ ಬಂದಿದೆ .ವರ್ಷದಿಂದ ವರ್ಷಕ್ಕೆ ಪೂಜಾ ಕಾರ್ಯಕ್ರಮಗಳು ಹಾಗೂ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತಿದೆ ಹೊರತು ಎಂದು ಕಡಿಮೆಯಾಗಿಲ್ಲ . ಈ ಪೂಜಾ ಕಾರ್ಯಕ್ರಮಗಳು ಮಾಡುವ ಮುಖ್ಯ ಉದ್ದೇಶ ಎಲ್ಲಾ ಭಕ್ತಾದಿಗಳಿಗೆ ಹಾಗೂ ರಾಜ್ಯದ ಜನತೆಗೆ ಶ್ರೀ ಶನಿಮಹಾತ್ಮ ಸ್ವಾಮಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿಯ ಆಶೀರ್ವಾದಗಳೊಂದಿಗೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗಿ ಹಾಗೂ ಉತ್ತಮ ಆರೋಗ್ಯವನ್ನು ನೀಡಿ ಜನರ ಕಷ್ಟ ಕಾರ್ಪಣ್ಯಗಳಿಗೆ ದೇವರು ಕಾರಣಭೂತರಾಗಲೆಂದು ಈ ಪೂಜಾ ಕಾರ್ಯಕ್ರಮಗಳು ಮಾಡುವ ಮುಖ್ಯ ಉದ್ದೇಶ. ಗುರುಪೂರ್ಣಿಮೆಯ 18ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುವಂದನ ಕಾರ್ಯಕ್ರಮ ಕ್ಷೇತ್ರದಲ್ಲಿ ನೆರವೇರಿದೆ ನೆರೆದಿದ್ದ ಭಕ್ತಾದಿಗಳಿಗೆ ದೇವರ ಕೃಪೆಗೆ ಪಾತ್ರರಾಗಲಿ ಎಂದು ತಿಳಿಸಿದರು.
ದೇವಾಲಯದ ಭಕ್ತರಾದ ಸತೀಶ್ ಮಾತನಾಡಿ ತಾಲೂಕಿನಲ್ಲಿಯೇ ಗುರೂಜಿಗಳು ಹಾಗೂ ಕ್ಷೇತ್ರದ ಒಂದು ಮಹಿಮೆಗೆ ತಮ್ಮದೇ ಆದ ಒಂದು ಭಕ್ತ ಸಮೂಹವೇ ನೆರೆದು ಬರುತ್ತದೆ ಗುರುಪೂರ್ಣಮಿ ಹಾಗೂ ಇನ್ನಿತರ ಪೂಜೆ ಕಾರ್ಯಕ್ರಮಗಳಲ್ಲಿ ವಿಶೇಷ ಪೂಜೆಗಳು ಹಾಗೂ ಗುರೂಜಿ ಗಳಿಂದ ಉಪದೇಶಗಳನ್ನು ಪಡೆಯಲು ರಾಜ್ಯದ ನಾನಾ ಕಡೆಗಳಿಂದ ಹೆಚ್ಚಾಗಿ ಜನರು ಬರುತ್ತಾರೆ. ಇವರ ಸೇವೆಯನ್ನು ಪರಿಗಣಿಸಿ ನಾನ ಕ್ಷೇತ್ರಗಳಲ್ಲಿ ವಿವಿಧ ಪ್ರಶಸ್ತಿಗಳಿಗೆ ಹಾಜನರಾಗಿದ್ದಾರೆ. ಅದರಲ್ಲಿ ಕರ್ನಾಟಕ ಸೌಜನ್ಯ ರತ್ನ ಪ್ರಶಸ್ತಿ, ಜ್ಯೋತಿಷ್ಯ ವಾಸ್ತು ಪ್ರವೀಣ ಪ್ರಶಸ್ತಿ, ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಶ್ರೇಷ್ಠ ಕನ್ನಡಿಗ ಪ್ರಶಸ್ತಿ, ಸಮಾಜ ಸೇವ ರತ್ನ ಪ್ರಶಸ್ತಿ, ಹೃದಯವಂತ ಸಹೋದರ ರತ್ನ ಪ್ರಶಸ್ತಿ, ದೈವಜ್ಞ ಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಶ್ರೀ ಪ್ರಶಸ್ತಿ, ಜ್ಞಾನ ಯೋಗಿ ಪ್ರಶಸ್ತಿ, ವೈದಿಕ ಶಿರೋಮಣಿ ಪ್ರಶಸ್ತಿ, ಜ್ಯೋತಿಷ್ಯ ವಿದ್ಯಾರತ್ನ ಪ್ರಶಸ್ತಿ, ಸೇವಾ ಯೋಧರತ್ನ ರಾಜ್ಯ ಪ್ರಶಸ್ತಿ ಹೀಗೆ ಇನ್ನು ಹಲವಾರು ಪ್ರಶಸ್ತಿಗಳಿಗೆ ಗುರೂಜಿಗಳು ಭಾಜನರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಸಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆ ಸತೀಶ್, ಗುರುಜಿಗಳ ಧರ್ಮಪತ್ನಿಯಾದ ಮಂಜುಳಾ, ಸ್ವಾಮಿಯೇ ತನ್ನ ಶಿವಕುಮಾರ್, ಸಂದೀಪ್, ಧನುಷ್ ,ಪ್ರವೀಣ್ ,ನಂಜಪ್ಪ ,ಅಭಿಲಾಶ್ , ಪ್ರಕಾಶ್ ,ಹರೀಶ್ ,ಮರಿಯಪ್ಪ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಕುಟುಂಬಸ್ಥರು ತಳ್ಳಿಯ ರಾಜಕೀಯ ನಾಯಕರು ಸಮಾಜ ಸೇವಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.