ನೂತನ ವೀರಾಂಜನೇಯ ಸ್ವಾಮಿ ದೇವಾಲಯದ ಉದ್ಘಾಟನೆಯಲ್ಲಿ ಭಾಗವಹಿಸಿದ ಮಾಜಿ ಸಂಸದರಾದ ಬಿ.ಎನ್.ಬಚ್ಚೇಗೌಡ “
ತಾವರೆಕೆರೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ನೂತನ ಶ್ರೀ ಮಹಾಗಣಪತಿ ಸಮೇತ ಶ್ರೀ ವೀರಾಂಜನೇಯ ಸ್ವಾಮಿ ಸಹಿತ ಶ್ರೀ ವೇಣುಗೋಪಾಲ ಸ್ವಾಮಿ ವಿಮಾನ ಗೋಪುರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ.
ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳು ಶುಕ್ರವಾರ ಧ್ವಜಾರೋಹಣ ಹಾಗೂ ಕುಂಬಾರಾಧನೆ ಕಳಸ ಸ್ಥಾಪನೆ ಮಾಡುವುದರ ಮೂಲಕ ಪೂಜಾ ಕಾರ್ಯಕ್ರಮಗಳು ಆರಂಭಗೊಂಡು ಶನಿವಾರ ಸುಪ್ರಭಾತ ಸೇವೆ ಗಣಪತಿ ಹೋಮ ತೀರ್ಥ ಪ್ರಸಾದ ವಿನಿಯೋಗ ನೈವೇದ್ಯ ನಡೆದು ಕಡೆ ದಿನವಾದ ಭಾನುವಾರ ವಿಗ್ರಹ ಲೋಕಾರ್ಪಣೆ ಹಾಗೂ ಕುಂಭಾಭಿಷೇಕ ಶಾಂತಿ ಹೋಮ ಪೂರ್ಣಾಹುತಿ ಹೀಗೆ ಪೂಜಾ ಕಾರ್ಯಕ್ರಮಗಳು ಕೇಶವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನೆರವೇರಿತು.
ದೇವಾಲಯದ ಧರ್ಮಕರ್ತರಾದ ವೆಂಕಟಗಿರಿಯಪ್ಪ ಮಾತನಾಡಿ ಗ್ರಾಮದ ಜನರ ಬಹುದಿನಗಳ ಬೇಡಿಕೆ ಇಂದು ನನಸಾಗಿದೆ ಕಾರಣ ದೇವಾಲಯದ ನಿರ್ಮಾಣಕ್ಕೆ ಗ್ರಾಮದ ಪ್ರತಿಯೊಬ್ಬರು ಹಗಲಿರುಳು ಕ್ಷಮಿಸಿ ಈಗ ಉನ್ನತ ಮಟ್ಟಕ್ಕೆ ಸೇರಿಸಿದ್ದಾರೆ . ಶ್ರೀ ಆಂಜನೇಯ ಸ್ವಾಮಿ ಗ್ರಾಮದ ಪ್ರತಿಯೊಬ್ಬ ಜನತೆಗೆ ಉತ್ತಮ ಆರೋಗ್ಯ ನೀಡಿ ಕಾಲಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಬಿ ಎನ್ ಬಚ್ಚೇಗೌಡರು, ಕೋಲಾರ ಶಾಸಕರಾದ ಕೊತ್ತೂರು ಮಂಜುನಾಥ್, ಹೊಸಕೋಟೆ ಉದ್ಯಮಿಗಳಾದ ಬಿವಿ ಬೈರೇಗೌಡರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಬಿವಿ ರಾಜಶೇಖರ್ ಗೌಡರು,ಸಿ. ಮುನಿಯಪ್ಪ, ಹಾಲು ಒಕ್ಕೂಟದ ನಿರ್ದೇಶಕರಾದ ಬಿವಿ ಸತೀಶ್ ಗೌಡರು, BMRD ಸದಸ್ಯರಾದ ಎಚ್ಎಮ್ ಸುಬ್ಬರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ ಎಸ್ ರಾಜಶೇಖರ್, ನರಸಿಂಹಮೂರ್ತಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಾಜಸೇವಕರು ಹಾಗೂ ಚಿಕ್ಕನಹಳ್ಳಿ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.