ನಿವೃತ್ತಿ ಹೊಂದಿದ ನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಪ್ಪ ರವರಿಗೆ ಬೀಳ್ಕೊಡುಗೆ ಸಮಾರಂಭ
ದೊಡ್ಡಬಳ್ಳಾಪುರ:ಆರಕ್ಷಕ ಉಪ ನೀರೀಕ್ಷಕರಾಗಿ ಸೇವೆ ಸಲ್ಲಿಸಿದ ನಗರ ಪೋಲಿಸ್ ಠಾಣೆಯ ಕೃಷ್ಣಪ್ಪ ಇಂದು ವೃತ್ತಿಯಿಂದ ನಿವೃತ್ತಿ ಹೊಂದಿದ್ದು ಅವರಿಗೆ ಬೀಳ್ಕೋಡಿಗೆ ಸಮಾರಂಭವು ನೆಡೆಸಲಾಯಿತು.
ನಿವೃತ್ತ ಪೋಲಿಸ್ ಅಧಿಕಾರಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವ್ ನಾಯಕ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಹಾಗು ಬೆಂಗಳೂರು ನಗರದ ಬಾಗದಲ್ಲಿ ಸೇವೆ ಸಲ್ಲಿಸುವ ಮುಖಾಂತರ ಸಮಾಜದಲ್ಲಿ ದುಷ್ಟರನ್ನು ಮಟ್ಟ ಹಾಕಿ ಒಳ್ಳೆಯ ಜನರಿಗೆ ನ್ಯಾಯ ಕೂಡಿಸುವ ಮುಖಾಂತರ ಉತ್ತಮ ಸೇವೆ ಸಲ್ಲಿಸಿ ಇಂದು ವೃತ್ತಿಯಿಂದ ನಿವೃತ್ತಿ ಹೂಂದಿರುವ ಇವರು ಮುಂದಿನ ದಿನಗಳಲ್ಲಿ ಇನ್ನುಷ್ಟು ಜನಸೇವೆ ಮಾಡಲಿ ಎಂದರು ಆಶಿಸಿದರು.
ನಂತರ ಮಾತನಾಡಿದ ಕನ್ನಡ ಪಕ್ಷದ ಕಾರ್ಯದರ್ಶಿ ಆಂಜೀನೇಯ ಪೋಲಿಸ್ ಇಲಾಖೆಯಲ್ಲಿ ಹಂತ ಹಂತವಾಗಿ ಬೆಳೆದು ಕನ್ನಡ ಪರ ರೈತ ಪರ ಹಾಗು ದಲಿತ ಪರ ಸಂಘಟನೆಗಳಿಗೆ ಬೆಂಬಲವನ್ನು ನೀಡಿ ಹಾಗು ಸಮಾಜದಲ್ಲಿನ ಕಳ್ಳ ಸುಲಿಗೆ ದರೋಡೆ ಕೂರನ್ನ ಸದೆ ಬಡೆಯುವ ಮೂಲಕ ಉತ್ತಮ ಸೇವೆ ಸಲ್ಲಿಸಿದ್ದಾರೆ ಅವರಿಗೆ ಆರೋಗ್ಯ ಭಾಗ್ಯ ನೆಮ್ಮದಿ ಸಿಗಲಿ ಎಂದರು.
ಈ ಸಂದರ್ಭದಲ್ಲಿ ಬಿಜಿಪಿ ಹಿರಿಯ ಮುಖಂಡ ಪ್ರೇಮ್ ಕುಮಾರ್ ಬಿ ಹೆಚ್ ಕೆಂಪಣ್ಣ ಕನ್ನಡ ಪರ ಸಂಘಟನೆಯ ವಿ ಪರಮೇಶ್ವರ. ವೆಂಕಟೇಶ. ಮುನಿ ಪಾಪಯ್ಯ ರೈತ ಹೋರಾಟಗಾರ ತುರುವನಹಳ್ಳಿ ವಾಸುದೇವ್. ತೂಬಗೆರೆ ಗ್ರಾ ಪಂ ಸದಸ್ಯ ಕೃಷ್ಣ ಮೂರ್ತಿ (ಕಿಟ್ಟಿ) ಅನ್ನದಾಸೋಹಿ ಮಲ್ಲೇಶ ಇನ್ನೂ ಹಲವಾರು ಗಣ್ಯರು ಹಾಜರಿದ್ದರು.
1986ರಲ್ಲಿ ಪೋಲಿಸ್ ಇಲಾಖೆಗೆ ಪೋಲಿಸ್ ಪೇದೆ ಯಾಗಿ ಚನ್ನಪಟ್ಟಣ ನಗರ ಠಾಣೆಯಿಂದ ವೃತ್ತಿ ಅರಂಭ ಮಾಡಿ ದೊಡ್ಡಬಳ್ಳಾಪುರ ನಗರ ರಾಮನಗರ ದಿಂದ ಮುಂಬಡ್ತಿ ಹೊಂದಿ ಮಾಗಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಠಾಣೆಗಳಲ್ಲಿ ಸೇವೆ ಸಲ್ಲಿಸುವ ಮುಖಾಂತರ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪೋಲಿಸ್ ಉಪನಿರೀಕ್ಷರಾಗಿ ಇಂದು ನನ್ನ ವೃತ್ತಿ ಜೀವನದಲ್ಲಿ ನಿವೃತ್ತಿಯಲ್ಲಿ ಸಮಾಜದ ಎಲ್ಲರ ಸಹಕಾರ ಮುಖ್ಯವಾಗಿದೆ. ಹಾಗು ನಮ್ಮ ಮೇಲಿನ ಅಧಿಕಾರಿಗಳ ಸಹಕಾರವು ನನ್ನನ್ನು ಇಲ್ಲಿಯ ವರೆವಿಗೂ ಕರೆತಂದಿದೆ ಎಂದರು
ಕೃಷ್ಣಪ್ಪ
ನಿವೃತ್ತ ಪೋಲಿಸ್ ಸಬ್ ಇನ್ಸ್ ಸ್ಪೆಕ್ಟರ್
ನಗರ ಠಾಣೆ