ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ : ಡಾ ಆರ್ ಎಂ ಮಿರ್ಧೆ
ಕೆಸಿಪಿ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವಿಭಾಗದ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮಕ್ಕೆ ಚಾಲನೆ
ವಿಜಯಪುರ : ನಗರದ ಬಿ ಎಲ್ ಡಿ ಸಂಸ್ಥೆಯ ಎಸ್. ಬಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ 2025-26 ನೆ ಸಾಲಿನ ಬಿಎ ಬಿಸಿಎ ಪ್ರಥಮ ವರ್ಷದ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಓರಿಯಂಟ್ಏಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವಿಭಾಗದ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಶೈಕ್ಷಣಿಕ ನೀತಿ ನಿಯಮಗಳು , ವಿವಿಧ ವಿಭಾಗಗಳು ಹಾಗೂ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಆರ್ ಎಂ ಮಿರ್ಧೆ ಮಾತನಾಡಿ ನಮ್ಮ ಬಿ ಎಲ್ ಡಿ ಈ ಸಂಸ್ಥೆಯು ಉತ್ತರ ಕರ್ನಾಟಕದ ಜನಪ್ರಿಯ ವಿದ್ಯಾಸಂಸ್ಥೆಯಾಗಿದ್ದು
ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಂಸ್ಥೆಯಡಿಯಲ್ಲಿ 1945 ರಲ್ಲಿ ಪ್ರಾರಂಭವಾದ ಈ ವಿದ್ಯಾಲಯದಿಂದ ಹಲವಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕೇವಲ ಪದವಿ ಸರ್ಟಿಫಿಕೇಟ್ ಗಳಿಗಾಗಿ ಓದದೆ ಜೀವನದಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕೆಂದು ಹೇಳಿದರು.
ಹೊಸದಾಗಿ ಸೇರ್ಪಡೆಗೊಂಡ ನೀವು ಮಹಾವಿದ್ಯಾಲಯದ ಸೌಲಭ್ಯ ಪಡೆದು ನಿಮ್ಮ ಜೀವನದಲ್ಲಿ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿ ನೀಡಿ ಎಂದು ಹೇಳಿದರು.
ಮಹಾವಿದ್ಯಾಲಯದ ಗ್ರಂಥ ಪಾಲಕಿಯಾದ ಸವಿತಾ ಕನಕರೆಡ್ಡಿ ಅವರು ತಮ್ಮ ಗ್ರಂಥಾಲಯದಲ್ಲಿ 92560 ಪುಸ್ತಕಗಳಿದ್ದು, ಪ್ರತಿ ದಿನ 7 ದಿನಪತ್ರಿಕೆಗಳು ಲಭ್ಯವಿದ್ದು ಹಾಗೂ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿನ ಕಂಪ್ಯೂಟರ್ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಎನ್. ಸಿ.ಸಿ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ನಾಯಕ ಅವರು ಮಾತನಾಡಿ ಎನ್ ಸಿ.ಸಿ ವ್ಯಕ್ತಿತ್ವ ವಿಕಸನ ಜೊತೆಗೆ ನಾಯಕತ್ವ ಗುಣಗಳನ್ನು ವೃದ್ಧಿಸುತ್ತದೆ.ದೈಹಿಕ ಸದೃಢತೆ ಜೊತೆಗೆ ಮಾನಸಿಕ ಸದೃಢತೆಗೂ ಸಹಕರಿಸುತ್ತದೆ.ಒಬ್ಬ ಎನ್ ಸಿ ಸಿ ಕ್ಯಾಂಡೇಟ್ ಅಧಿಕಾರಿ 500 ಅಧಿಕಾರಿಗಳಿಗೆ ಸಮ ಎಂದು ಎನ್ ಸಿ ಸಿ ಮಹತ್ವ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಮುಖ್ಯಸ್ಥರಾದ ಅನಿಲ್ ಬಿ ನಾಯಕ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಇದೊಂದು ಎನ್ ಸಿ ಸಿ, ಎನ್ ಎಸ್ ಎಸ್ ಕೋಶಗಳ ಮಿಶ್ರಣ ವಾಗಿದೆ.ಇದರಲ್ಲಿ ಸೇರ್ಪಡೆಯಾಗುವುದರಿಂದ ವ್ಯಕ್ತಿತ್ವ ಬೆಳವಣಿಗೆ ಆಗುತ್ತದೆ ಎಂದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಎಸ್ ಆರ್ ದೊಡ್ಡಮನಿ ಅವರು ಮಾತನಾಡಿ ಸಾಂಸ್ಕೃತಿ ಕತೆ ಎಲ್ಲಾ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ . ಎಲ್ಲರಲ್ಲಿಯೂ ಒಂದು ಕಲೆ ಅಡಗಿರುತ್ತದೆ
ಆ ಕಲೆಯನ್ನೂ ವೇದಿಕೆ ಸಿಕ್ಕಾಗ ಪ್ರಸ್ತುತ ಪಡಿಸಬೇಕು,ಪಠ್ಯದ ಜೊತೆಗೆ ಕಲಾತ್ಮಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದು ಮುಖ್ಯ ವಾಗಿದೆ ಎಂದು ಹೇಳಿದರು.
ಎನ್ ಎಸ್ ಎಸ್ ವಿಭಾಗದ ಮುಖ್ಯಸ್ಥರಾದ ತರುಣಮಾ ಜಬಿನ್ ಖಾನ್ ಅವರು ಎನ್ ಎಸ್ ಎಸ್ ವಿಭಾಗದ ರೂಪು ರೇಷೆಗಳು ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.
ಕಾರ್ಯಕ್ರಮವನ್ನು ಕನ್ನಡ ಪ್ರಾದ್ಯಾಪಕಿಯಾದ ಉಷಾದೇವಿ ಹಿರೇಮಠ ನಿರೂಪಿಸಿದರು
ಐಕ್ಯೂಏಸಿ ಮುಖ್ಯಸ್ಥರಾದ ಪಿ ಎಸ್ ಪಾಟೀಲ್ ವಂದಿಸಿದರು.