ದೇವನಹಳ್ಳಿಯಲ್ಲಿ ನಡೆಯುವ ಜೆಡಿಎಸ್ ಯುವ ಸಮಾವೇಶಕ್ಕೆ ನಿಕಿಲ್ ಕುಮಾರಸ್ವಾಮಿ ಚಾಲನೆ

ದೇವನಹಳ್ಳಿ :- ರಾಜ್ಯದಲ್ಲಿ ಜನವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಆಡಳಿತಕ್ಕೆ ತಕ್ಕ ಪಾಠ ಕಲಿಸಲು ಜೆಡಿಎಸ್ ರಾಜ್ಯವ್ಯಾಪಿ ಪಕ್ಷವನ್ನು ಬಲವರ್ಧನೆಗೊಳಿಸಲು ಕಾರ್ಯಕರ್ತರ ಸಮಾವೇಶ ಅತ್ಯವಶ್ಯಕವಾಗಿದೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ  ಅವರು ತಿಳಿಸಿರುತ್ತಾರೆ.

ದೇವನಹಳ್ಳಿ ತಾಲೂಕು ಆಲೂರು ದುದ್ದನಹಳ್ಳಿ ನಡೆದ ಪಕ್ಷದ ಕಾರ್ಯಕರ್ತ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿ, ದೇಶದಾದ್ಯಂತ ಎಲ್ಲಾ ವರ್ಗದವರ ಏಳಿಗೆಗಾಗಿ ಶ್ರಮಿಸುತ್ತಿರುವ ಎನ್.ಡಿ.ಎ ಮೈತ್ರಿಕೂಟದ ಜನಪದ ಯೋಜನೆಗಳನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮುಂಬರುವ ತಾಲೂಕು ಪಂಚಾ ಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಈ ಒಂದು ಸಮಾವೇಶವನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.

ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ದುದ್ದನಹಳ್ಳಿ ಮುನಿ ರಾಜು ಅವರು ಮಾತನಾಡಿ, ತಾಲೂಕಿನಲ್ಲಿ ಜೆಡಿ(ಎಸ್) ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಭರ್ಜರಿ ಸಿದ್ಧತೆ ಆಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ಬೃಹತ್ ಡಿಜಿಟಲ್ ಸದಸ್ಯತ್ವ ನೋಂದಣಿ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸ ಲಿದ್ದಾರೆ. ಪ್ರತಿ ಪಂಚಾಯಿತಿಯಿಂದ 25 ಬಸ್ಸುಗಳಂತೆ ತಾಲೂಕಿನ ಅತ್ಯಂತ ಸುಮಾರು 400ಕ್ಕೂ ಹೆಚ್ಚು ಬಸ್ ಗಳ ಮೂಲಕ ದೇವನಹಳ್ಳಿಯ ಪೂರ್ವ ಕಾಲೇಜಿನ ಮೈದಾನದಲ್ಲಿ ಅದ್ದೂರಿ ಕಾರ್ಯ ಕರ್ತರ ಸಮಾವೇಶ ನಡೆಯಲಿದೆ. ದೂರ ದೂರದಿಂದ ಬರುವ ಕಾರ್ಯಕರ್ತರಿಗೆ ಹಾಗೂ ಜನತೆಗೆ ಅಗತ್ಯ ಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ.

ನಿಖಿಲ್ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಉತ್ತಮ ಯುವ ಸಮಾಜ ಸ್ವಯಂ ಪ್ರೇರಿತವಾಗಿ ಪಕ್ಷದ ಕಾರ್ಯಕರ್ತಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾರಂಭದ ಯಶಸ್ವಿಗೆ ಅಪಾರ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.