ಒಳ ಮೀಸಲಾತಿ ವರ್ಗೀಕರಣ ಜಾರಿಯಿಂದಾಗಿ ಮಾ ದಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಜಿ.ಮಾರಪ್ಪ.

ದೇವನಹಳ್ಳಿ :- ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ಜಾರಿಗಾಗಿ ಕಳೆದ ಮೂರು ದಶಕಗಳ ಅವಿರತ ಹೋರಾಟಕ್ಕೆ ಗೆಲವಿಗಾಗಿ ಶ್ರಮಿಸಿದ ಆಹಾರ ಪೂರೖಕೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್. ಮುನಿಯಪ್ಪ ಅವರಿಗೆ
ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಯ ಜಿಲ್ಲಾಧ್ಯಕ್ಷ ಜಿ.ಮಾರಪ್ಪ ಅವರ ನೇತೃತ್ವದ ಸಮಿತಿ ಕಾರ್ಯ ಕರ್ತರೊಂದಿಗೆ ಅಭಿನಂದನೆ ಸಲ್ಲಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿಯ ಸಚಿವ ಕೆಎಚ್.ಮುನಿಯಪ್ಪ ಅವರಿಗೆ ಜನಾಂಗದ ಪರವಾಗಿ ಸನ್ಮಾನಿಸಿದ ಮಾತನಾಡಿ, ಒಳ ಮೀಸಲಾತಿ ಜಾರಿ ಆಗಲೇಬಾರದು ಎಂಬ ಷಡ್ಯಂತರ ರೂಪಿಸಿದ ಕೆಲ ಸ್ವಾರ್ಥ ಜನಾಂಗಗಳ ಆರೋಪ ಪ್ರತ್ಯಾರೋಪಗಳಿಗೆ  ಕಿವಿಗೊಡದೆ ಮುಖ್ಯಮಂತ್ರಿ
ಸಚಿವ ಸಂಪುಟದ ಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಪರಿಶಿಷ್ಟ ಜಾತಿಯ ಎಲ್ಲಾ ಸಮು ದಾಯಗಳಿಗೂ ಸಾಮಾಜಿಕ ನ್ಯಾಯ ಕೊಡಿಸು ವಲ್ಲಿ ಶ್ರಮಿಸಿದ ಜನಾಂಗದ ಹಿರಿಯ ಮುತ್ಸದಿ ಕೆಎಚ್. ಮುನಿಯಪ್ಪ ಅವರನ್ನು ಎಷ್ಟು ಬಣ್ಣಿಸಿದರು ಸಾಲದು ಅವರ ನಿರಂತರ ಪರಿಶ್ರಮಕ್ಕೆ ಬೆಂಗಳೂರು ಗ್ರಾಮಾಂತ ರದ ನಾಲ್ಕು ತಾಲೂಕುಗಳ ಮಾದಿಗ ಸಮುದಾಯ ಒಗ್ಗೂಡಿ ಮಂತ್ರಿಗಳನ್ನು ಅಭಿನಂದಿಸುವ ಅವಕಾಶ ಅವಿಸ್ಮರಣೀಯ ಎಂದರು.

ಸನ್ಮಾನ ಸ್ವೀಕರಿಸಿ ಬಳಿಕ ಸಚಿವರಾದ ಕೆಎಚ್. ಮುನಿಯಪ್ಪ ಅವರು ಮಾತನಾಡಿ ಕಳೆದ ಮೂರು ದಶಕಗಳ ಹೋರಾಟದ ಪ್ರತಿಫಲವಾಗಿ ಸರ್ಕಾರದ ಕಣ್ಣು ತೆರೆಸುವ ಮೂಲಕ ಎಲ್ಲಾ ಸಮುದಾ ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಅವರಿಗೆ ಕಾರಣಕ್ಕೆ ಸರ್ಕಾರ ಅಧಿಕೃತ ಮುದ್ರೆ ದೊರೆತಿರುವುದು ತಮ್ಮೆಲ್ಲ ತ್ಯಾಗ ಬಲಿದಾನದ ಹೋರಾಟದ ಪ್ರತಿಫಲವಾಗಿ ಜಯಗಳಿ ಸಲು ಸಾಧ್ಯ ವಾಗಿದೆ. ಅಲೆಮಾರಿ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಒದಗಿಸಿಲ್ಲ ಎಂಬ ಅಂಶ ಮುನ್ನೆಲೆಗೆ ಬಂದಿದ್ದು ಸಮಸ್ಯೆ ಪರಿಹರಿಸುವ ಸಂಬಂಧ ಮುಖ್ಯ ಮಂತ್ರಿಗಳ ಜತೆ ಸದ್ಯದಲ್ಲೇ ಚರ್ಚಿಸಿ ಅವರಿಗೂ ಕೂಡ ಸಾಮಾಜಿಕ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಮಾದರ ಮಹಾಸಭಾ ಪದಾಧಿಕಾರಿಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ಮಾದಿಗ  ಸಮುದಾಯದ ತಾಲೂಕು ಅಧ್ಯಕ್ಷ ಅಣ್ಣೇಶ್ವರ ವೆಂಕಟೇಶ್, ಕದಿರಪ್ಪ, ಗೊಡ್ಲು ಮುದ್ದೇನಹಳ್ಳಿ ಮುನಿರಾಜು, ಸಿದ್ದಾರ್ಥ ಟೆಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ,  ಮಲ್ಲೇಪುರ ಗಿರೀಶ್, ಮುದುಗುರ್ಕಿ ನಾರಾಯಣ ಸ್ವಾಮಿ, ಬಿಟ್ಟೆನಲ್ಲಿ ವೆಂಕಟೇಶ್, ಮುನಿರಾಜು, ಶ್ರೀನಿವಾಸ್, ಬೂದಿಗೆರೆ ವೆಂಕಟೇಶ್, ಭೂವನಹಳ್ಳಿ ಆನಂದ್ ಸಾದಹಳ್ಳಿ ಮಂಜುನಾಥ್, ವಿಜಯಪುರ ವೇಣು, ನಾರಾಯಣಸ್ವಾಮಿ   ಸೇರಿದಂತೆ ನೂರಾರು ಜನಾಂಗದ ಕುಲಬಾಂಧವರು ಹಾಜರಿದ್ದರು.