ಜ್ಯಾತ್ಯಾತೀತ ದೇಶದಲ್ಲಿ ಜಾತಿ, ಧರ್ಮದ ರಾಜಕೀಯ ತಿರುವುಗಳು ಸಮಾಜಕ್ಕೆ ಕಂಟಕ– ಶ್ರೀನಿವಾಸ್
ದೇವನಹಳ್ಳಿ :- ದಸರಾ ನಾಡ ಹಬ್ಬ ಯಾವ ಜಾತಿಗೆ ಧರ್ಮಕ್ಕೆ ಸೀಮಿತ ಅಲ್ಲ ಒಂದು ಧರ್ಮವನ್ನು ಹೊರ ಗಿಟ್ಟು ದಸರಾ ಹಬ್ಬ ಮಾಡಲು ಸಾಧ್ಯವೇ ಈ ಹಿಂದೆ ಮಿರ್ಜಾಇಸ್ಮಾಯಿಲ್ ದಿವಾನರಾಗಿದ್ದ ಸಂದರ್ಭ ದಲ್ಲಿ ದಸರಾ ಹಬ್ಬ ಆಚರಣೆ ನಡೆದಿಲ್ಲವೇ.. ಕನ್ನಡದ ಹೆಸರಾಂತ ಸಾಹಿತಿ ಕೆಎಸ್ನಿ.ಸಾರ್ ಅಹ್ಮದ್ ಕೂಡ ದಸರಾ ಹಬ್ಬವನ್ನು ಉದ್ಘಾಟಿಸಿದ್ದರು ಆಗಲಿ ಲ್ಲದ ವಿರೋಧಗಳು ಹೀಗ್ಯಾಕೆ ಬಂದಿದೆ ಎಂಬುದರ ಬಗ್ಗೆ ಜನರೇ ಬಿಜೆಪಿ ಪಕ್ಷದವರನ್ನು ಪ್ರಶ್ನಿಸಬೇಕು. ಚಾಮುಂಡ ತಾಯಿ ನಂಬುತ್ತಾರೆ ಬಿಡುತ್ತಾರೆ ಅದು ಅವರಿಗೆ ಸೇರಿದ್ದು ಇದು ನಾಡಹಬ್ಬ ಎಲ್ಲರೂ ಸೇರಿ ಸಂಭ್ರಮವನ್ನು ಆಚರಿಸಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಪುರ ಶ್ರೀನಿವಾಸ್ ಟೀಕೆಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾ ಟಕ ರಾಜ್ಯ ಡಾ.ಬಿಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ನೂತನ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಹಿಂದುತ್ವದ ಅಜೆಂಡ ನಮ್ಮ ರಾಜ್ಯದಲ್ಲಿ ನಡೆಯದು ದೇಶದಲ್ಲಿ ದಲಿತರು ಹಿಂದು ಳಿದ ವರ್ಗ, ಅಲ್ಪಸಂಖ್ಯಾತರು, ಬಹು ಸಂಖ್ಯಾತರಿದ್ದಾರೆ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಎಲ್ಲಾ ವರ್ಗದವರ ಏಳಿಗೆಗಾಗಿ ಸಂವಿಧಾನವನ್ನು ನಾವು ಧರ್ಮ ಗ್ರಂಥವೆಂದು ಭಾವಿಸಿ ನಮಗಾಗಿ ಬಿಟ್ಟುಹೊಗಿ ಹೋಗಿದ್ದಾರೆ ಅದರ ಲಾಲನೆ ಪಾಲನೆ ಮಾಡುವು ದಲ್ಲದೆ ದಲಿತರ ಶಾಖೆಗಳನ್ನು ಮಾಡುವ ಮೂಲಕ ಸಂಕಷ್ಟ ಹಾಗೂ ದೌರ್ಜನ್ಯಕ್ಕೆಒಳಗಾದ ಎಲ್ಲಾ ವರ್ಗ ದವರ ಏಳಿಗೆಗೆ ಶ್ರಮಿಸುವ ಏಕೈಕ ಸಮಿತಿ ಎಂದರೆ ತಪ್ಪಾಗಲಾರದು ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಶಾಖೆ ಗಳನ್ನು ತೆಗೆಯುವ ಉದ್ದೇಶ ದಿಂದ ದೇವನ ಹಳ್ಳಿಯಲ್ಲಿ ರಾಜ್ಯಮಟ್ಟದ ಸಭೆಯನ್ನು ಕರೆದಿದ್ದೇ ವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಲ್ಪ ಸಂಖ್ಯಾತರ ಘಟ ಕದ ರಾಜಾಧ್ಯಕ್ಷ ಅಮೀದ್ ಪಾಷ ಪದಾಧಿಕಾರಿ ಗಳಾದ ಬೊಮ್ಮವಾರ ಮಂಜುನಾಥ್, ಕೃಷ್ಣ ಮೂರ್ತಿ, ವಿಜಯ ಪುರ ರಾಘು ಸೇರಿದಂತೆ ಅನೇಕ ಸಮಿತಿ ಕಾರ್ಯ ಕರ್ತರು ಹಾಜರಿದ್ದರು.