ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಹಸಿಲ್ದಾರ್ ಮೋಹನ್ ಕುಮಾರ್
ತಿಪಟೂರು : ತಾಲ್ಲೂಕಿನ ಬೊಮ್ಮಲಾಪುರ ಕೆರೆ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.14.73 ಲಕ್ಷ ವೆಚ್ಚವನ್ನು ವಿನಿಯೋಗಿಸಿ ಕೆರೆ ಕಾಮಗಾರಿಯನ್ನು ನಡೆಸುತ್ತಿದ್ದು,ಕಾಮಗಾರಿ ವೀಕ್ಷಣೆಗೆ ತಾಲ್ಲೂಕು ದಂಡಾಧಿಕಾರಿಗಳಾದ ಮೋಹನ್ ಕುಮಾರ್ ರವರು ಆಗಮಿಸಿ,ಯೋಜನೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದ ಬಡ ಜನತೆಗೆ ಹಾಗೂ ರೈತರಿಗೆ ಉಪಯೋಗವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು,ಪ್ರಸ್ತುತ ತಾಲ್ಲೂಕಿನಲ್ಲಿ ಒಟ್ಟು 15 ಕೆರೆ ಪುನಶ್ಚೇತನಗೊಳಿಸಲು ಸರಿಸುಮಾರು 2 ಕೋಟಿಯಷ್ಟು ಮೊತ್ತವನ್ನು ಮಂಜೂರುಗೊಳಿಸಿರುವುದು ಕಂಡುಬರುತ್ತಿದೆ.
ಈ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲು ಧರ್ಮಸ್ಥಳ ಕ್ಷೇತ್ರದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾದ್ಯ ಎಂದು ತಿಳಿಸಿದರು.
ಇಷ್ಟಲ್ಲದೇ ಈ ಒಂದು ಕೆರೆ ಪುನಶ್ಚೇತನದ ಭಾಗ್ಯ ಬೊಮ್ಮಲಾಪುರ ಗ್ರಾಮಕ್ಕೆ ದೊರೆತಿದ್ದು ದಯವಿಟ್ಟು ಗ್ರಾಮದ ಎಲ್ಲಾ ಮುಖಂಡರು,ರೈತರು ಧರ್ಮಸ್ಥಳ ಸಂಸ್ಥೆಗೆ ಸಹಕರಿಸಿ ಉತ್ತಮ ಕೆರೆಯನ್ನಾಗಿ ಮಾರ್ಪಾಡುಗೊಳಿಸಲು ಸಹಕರಿಸಬೇಕೆಂದು ವಿನಂತಿಸಿದರು.ಜೊತೆಗೆ ಬಾಕಿ ಉಳಿದ ಕಾಮಗಾರಿಯ ಬಗ್ಗೆಯೂ ಅತ್ಯಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂಧರ್ಭ ಕಂದಾಯ ನಿರೀಕ್ಷಕರಾದ ರಂಗಣ್ಣ, ಗ್ರಾಮ ಲೆಕ್ಕಾಧಿಕಾರಿ ಸಾವಿತ್ರಮ್ಮ,ಗ್ರಾ.ಪಂ.ಅಧ್ಯಕ್ಷ ಪ್ರಸನ್ನಕುಮಾರ್,ಕೆರೆ ಸಮಿತಿ ಅಧ್ಯಕ್ಷರಾದ ನೀಲಕಂಠಸ್ವಾಮಿ ತಿಮ್ಮೇಗೌಡ,ಬೊಮ್ಮಲಾಪುರ ಯೂತ್ ಕಾಂಗ್ರೆಸ್ ಬೂತ್ ಕಮಿಟಿ ಅಧ್ಯಕ್ಷರಾದ ಸೋಮಶೇಖರ್,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್,ಜೆ.ಸಿ.ಬಿ ಮಾಲಿಕಾರಾದ ಗಣೇಶ್ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.
ವರದಿ:ಮಂಜು ಗುರುಗದಹಳ್ಳಿ