ಪ್ರಜ್ಙಾವಂತ ಸಮಾಜಕ್ಕೆ ಶಿಕ್ಷಣವೇ ಮೊದಲಮೆಟ್ಟಿಲು:ಮಣಿಕುಮಾರ್

ದೇವನಹಳ್ಳಿ :- ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆ ಗಳಿಂದ ಮಾತ್ರ ಸಾದ್ಯ ಹಾಗಾಗಿ ಕುಂದಾಣ ಸರ್ಕಾರಿ ಶಾಲೆ ಸರ್ವ ತೋಮುಖ ಅಭಿವೃದ್ದಿ ಶ್ರಮಿಸಲು ಶಕ್ತಿ ಮೀರಿ ಶ್ರಮಿಸುವೆ ಎಂದು ನೂತನ ಎಸ್‌ಡಿಎಂ ಅದ್ಯಕ್ಷ ಮಣಿಕುಮಾರ್ ಹೇಳಿದರು.

ತಾಲ್ಲೂಕಿನ ಕುಂದಾಣ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಎಸ್‌ಡಿಎಂಸಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಕೆವಿ.ಮಣಿಕುಮಾರ್ ಅವಿರೋಧವಾಗಿ ಆಯ್ಕೆಯ ವೇಳೆ ಅಭಿನಂಧನೆ ಸ್ವೀಕರಿಸಿದ ಬಳಿಕ ಮಾತನಾಡಿ, ಅಜ್ಙಾನದಿಂದ ಪ್ರಜ್ಙಾವಂತ ಸಮಾಜಕ್ಕೆ ಮೊದಲ ಮೆಟ್ಟಿಲು ಶಿಕ್ಷಣ. ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಕಟ್ಟು ನಿಟ್ಟಾಗಿ ಜಾರಿಗೆ ಬರಲು ಶ್ರಮಿಸಿದ ಡಾ.ಬಿರ್.ಅಂಬೇಡ್ಕರ್ ಅವರ ಆಶಯಗಳನ್ನು ನಮ್ಮೆಲ್ಲಾ ಎಸ್‌ಡಿಎಂಸಿ ಪದಾದಿ ಕಾರಿಗಳ ಅರಿತು. ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳ ಒದಗಿಸಲು ಶ್ರಮಿಸುತ್ತೇವೆ.

ಸರ್ಕಾರಿ ಶಾಲೆಯ ಹಲವು ವರ್ಷಗಳ ವ್ಯಜ್ಯವನ್ನು
ಊರಿನ ಗಣ್ಯರು ಹಾಗೂ ತಾಲ್ಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಚ್. ಮುನಿಯಪ್ಪ ಅವರನ್ನು ಸಂಪರ್ಕಿಸಿ ಇತ್ಯಾರ್ಥ ಪಡಿಸಿ ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ಸುಸರ್ಜಿತ ಭವ್ಯ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ. ಶಾಲಾ ಅಭಿವೃದ್ದಿ ವಿಚಾರವಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಹಸ್ತಕ್ಷೇಪ ಬಾರದಂತೆ ಎಚ್ಚರವಹಿಸು ತ್ತೇವೆ.
ಖಾಸಗಿ ಶಾಲೆಗಳಲ್ಲಿ ದುಬಾರಿ ಡೂನೇಶನ್ ಸಂಕಷ್ಟ ಎದುರಿಸುತ್ತಿರುವ ಮಕ್ಕಳ ಪೋಷಕರನ್ನು ಬೇಟಿ ಮಾಡಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ. ತಳವರ್ಗಗಳ ಸಮುದಾಯಗಳ ಹೇಳಿಕೆಗೆ ಶಿಕ್ಷಣ ವಿಕ್ರಾಂತಿ ಶಿಕ್ಷಣವೇ ಪರಿಶ್ರಮ ಇಂದು ಭಾವಿಸಿ ಅತಿ  ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿ ತಾಲ್ಲೂಕಿನಲ್ಲಿ ಮಾದರಿ ಶಾಲೆ ಮಾಡುತ್ತೇವೆಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುಂದಾಣ ಸರ್ಕಾರಿ ಶಾಲೆ ಎಸ್.ಡಿಎಂಸಿ ನೂತನ ಉಪಾದ್ಯಕ್ಷೆ ಮುನಿರತ್ನಮ್ಮ, ಮುನಿರಾಜು, ಅಂಬರೀಶ್, ನರಸಿಂಹ, ಅಂಬಿಕಾ, ಕಲಾವತಿ, ಭಾಗ್ಯಮ್ಮ, ರಾಜಶೇಖರ್, ಮಂಜುನಾಥ್, ಸಿಆರ್.ಪಿ ನಾಗೇಶ್, ಮುಖ್ಯ ಶಿಕ್ಷಕ ಮುನಿರಾಜಯ್ಯ, ಶಾಲಾ ಶಿಕ್ಷಕರು ಹಾಗೂ ಇತರರು ಇದ್ದರು.