--ಜಾಹೀರಾತು--

ಕಾರ್ಯಾಂಗದ ಭಾಗವಾಗಿರುವ ಅಧಿಕಾರಿ ನೌಕರರಿಗೆ ಕರ್ತವ್ಯ ಪ್ರಜ್ಞೆ ಅಗತ್ಯ : ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ

On: November 28, 2025 7:30 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಕಾರ್ಯಾಂಗದ ಭಾಗವಾಗಿರುವ ಅಧಿಕಾರಿ ನೌಕರರಿಗೆ ಕರ್ತವ್ಯ ಪ್ರಜ್ಞೆ ಅಗತ್ಯ : ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ

ಚಾಮರಾಜನಗರ:ಕಾರ್ಯಾಂಗದ ಭಾಗವಾಗಿರುವ ಅಧಿಕಾರಿ ನೌಕರರಿಗೆ ಕರ್ತವ್ಯ ಪ್ರಜ್ಞೆ ಅಗತ್ಯ : ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ

ಜನರ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸವಲತ್ತುಗಳನ್ನು ತಲುಪಿಸುವ ಜವಾಬ್ದಾರಿ ಕಾರ್ಯಾಂಗದ ಮೇಲಿದ್ದು, ಇದರ ಮುಖ್ಯ ಭಾಗವಾಗಿರುವ ಸರ್ಕಾರಿ ಅಧಿಕಾರಿ ನೌಕರರಿಗೆ ಕರ್ತವ್ಯ ಪ್ರಜ್ಞೆ ಅಗತ್ಯವಾಗಿದೆ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರು ತಿಳಿಸಿದರು.

ಚಾಮರಾಜನಗರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕುರಿತ ಕಾರ್ಯ ಉದ್ಘಾಟನೆ ನೆರವೇರಿಸಿ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಉತ್ತಮ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಹಾಗೂ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸುವ ಹೊಣೆಗಾರಿಕೆ ಇರುವ ಅಧಿಕಾರಿ ನೌಕರರು ಕಾರ್ಯಾಂಗದ ಮುಖ್ಯ ಭಾಗಿದಾರರಾಗಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಸವಲತ್ತುಗಳು ದೊರೆಯಬೇಕು. ಯಾವುದೇ ಸಮಸ್ಯೆ ಬಾರದಂತೆ ಕರ್ತವ್ಯ ನಿರ್ವಹಿಸುವ ಹೆಚ್ಚಿನ ಜವಾಬ್ದಾರಿ ಕಾರ್ಯಾಂಗದ ಮೇಲಿದೆ ಎಂದರು.

ಆಡಳಿತ, ಕರ್ತವ್ಯದಲ್ಲಿ ಶ್ರದ್ದೆ ಇರಬೇಕು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪ್ರಭಾವ ಬೀರುವುದು ದುರಾಡಳಿತಕ್ಕೆ ಕಾರಣವಾಗಲಿದೆ. ಕಾನೂನಿನ ಪ್ರಕಾರ ಯಾವ ಕೆಲಸಗಳನ್ನು ಮಾಡಬೇಕಿದೆಯೋ ಅದನ್ನು ಚ್ಯುತಿ ಬಾರದಂತೆ ಮಾಡಬೇಕು. ನಿಯಮಾವಳಿ ಉಲ್ಲಂಘನೆ ಯಾಗಬಾರದು. ಮಾಡಲೇ ಬೇಕಾದ ಕೆಲಸವನ್ನು ಯಾವುದೇ ವಿಳಂಬವಿಲ್ಲದೆ ನಿರ್ವಹಿಸಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ತನ್ನ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಅಧಿಕಾರಿಗಳು, ನೌಕರರು ದೇಶದ ಅಭಿವೃದ್ದಿಯ ಮನೋಭಾವನೆಯನ್ನು ಇಟ್ಟುಕೊಂಡು ಕರ್ತವ್ಯ ಮಾಡಬೇಕು. ಅರ್ಜಿ ವಿಲೇವಾರಿಯಲ್ಲಿ ಸಂದರ್ಭ, ಸಮಯೋಚಿತಕ್ಕನುಸಾರವಾಗಿ ಜವಾಬ್ದಾರಿಯನ್ನು ನಿಭಾಯಿಸಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯಕ್ಕನುಗುಣವಾಗಿ ನಡೆದುಕೊಳ್ಳಬೇಕು. ಕರ್ತವ್ಯ ಲೋಪ ದುರಾಡಳಿತ ಕಂಡು ಬಂದರೆ ಸಮಸ್ಯೆ ಯಾರಿಂದ ಉಂಟಾಯಿತು ಹೇಗೆ ತಲೆದೋರಿದೆ ಎಂಬುದನ್ನು ಪರಿವೀಕ್ಷಣೆ ಮಾಡಿ ಲೋಕಾಯುಕ್ತ ತಕ್ಕ ಕ್ರಮ ವಹಿಸಲಿದೆ ಎಂದು ಲೋಕಾಯುಕ್ತರು ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಗೌರವಯುತ, ಶಾಂತಿಯುತ ಬದುಕು ಬೇಕಿದೆ. ಪುರುಷ ಮಹಿಳೆ ಎಂಬ ಬೇಧವಿಲ್ಲದೆ ಎಲ್ಲರಿಗೂ ಅಗತ್ಯ ಮೂಲಸೌಕರ್ಯಗಳು ಲಭಿಸಬೇಕಿದೆ. ಕಾನೂನಾತ್ಮಕವಾಗಿ ಜನರ ರಕ್ಷಣೆಗೆ ಸಾಕಷ್ಟು ಕಾಯ್ದೆಗಳು ಇವೆ. ಎಲ್ಲರಿಗು ಸಮಾನ ಅವಕಾಶಗಳು ಇದ್ದು, ಜನಪರ ಕಾಳಜಿ ವಹಿಸಬೇಕಿದೆ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರು ತಿಳಿಸಿದರು.

ಸಿವಿಲ್ ನ್ಯಾಯಾಧೀಶರು ಮತ್ತು ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳಾದ ಕಿರಣ್ ಪಿ.ಎಂ. ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ, ಲೋಕಾಯುಕ್ತ ಎಸ್.ಪಿ.ಯವರಾದ ಉದೇಶ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.