--ಜಾಹೀರಾತು--

ಸಾರ್ವಜನಿಕ ಗ್ರಂಥಾಲಯವನ್ನು ನಿಗದಿ ಸಮಯಕ್ಕೆ ತೆರೆಯಬೇಕು ಎಂದು ಸ್ಥಳೀಯರ ಆಗ್ರಹ.

On: December 12, 2025 8:13 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಸಾರ್ವಜನಿಕ ಗ್ರಂಥಾಲಯವನ್ನು ನಿಗದಿ ಸಮಯಕ್ಕೆ ತೆರೆಯಬೇಕು ಎಂದು ಸ್ಥಳೀಯರ ಆಗ್ರಹ

ವಿಜಯಪುರ: ಹೋಬಳಿಯ ಕೋರಮಂಗಲ ಗ್ರಾಮದ, ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪದಲ್ಲೆ ಇರುವ ಸಾರ್ವಜನಿಕ ಗ್ರಂಥಾಲಯವನ್ನು ಸರಿಯಾಗಿ ತೆರೆಯುತ್ತಿಲ್ಲದ ಕಾರಣ, ಓದುಗರಿಗೆ ತುಂಬಾ ಅಡಚಣೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಮನೋಹರ್ ಅವರು ಆರೋಪಿಸಿದ್ದಾರೆ.

ಕೋರಮಂಗಲ ಗ್ರಾಮದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಸ್ಥಾಪಿಸಿರುವ ಇಲ್ಲಿನ ಗ್ರಂಥಾಲಯದ ಬಾಗಿಲು ತೆರೆಯುವುದಿಲ್ಲ. ಗ್ರಂಥಪಾಲಕಿ ಇದ್ದರೂ, ಅವರ ಪತಿ ಗ್ರಂಥಾಲಯದ ಬಾಗಿಲು ತೆರೆಯುತ್ತಾರೆ. ಅವರಿಗೆ ಬಿಡುವಿದ್ದಾಗ ಮಾತ್ರವೇ, ಅವರು ಬಾಗಿಲು ತೆರೆಯುತ್ತಾರೆ. ಈ ಕಾರಣದಿಂದ ಸಾವಿರಾರು ಜನಸಂಖ್ಯೆ ಇರುವ ಗ್ರಾಮದಲ್ಲಿ, ಕೇವಲ ನಾಲ್ಕೈದು ಜನ ಓದುಗರು ಮಾತ್ರ ಬರುತ್ತಾರೆ.

ಶಾಲಾ, ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪುಸ್ತಕಗಳು ದೊರೆಯದೆ ಅವರು ಪರದಾಡುವಂತಾಗಿದೆ. ಈಗಿರುವ ಕಟ್ಟಡದಿಂದ ಗ್ರಂಥಾಲಯವನ್ನು ಸ್ಥಳಾಂತರ ಮಾಡಬೇಕು. ಗ್ರಂಥಪಾಲಕಿಯನ್ನು ವಜಾಗೊಳಿಸಿ, ಬೇರೆಯವರನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

————————————————————————-

ನಾನು ಪ್ರತಿದಿನ ಗ್ರಂಥಾಲಯ ತೆರೆಯುತ್ತಿದ್ದೇನೆ. ಗರ್ಭೀಣಿ ಮಹಿಳೆಯೊಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದ್ದ ಕಾರಣ, ನನ್ನ ಪತಿಯನ್ನು ಬಿಟ್ಟು ಹೋಗಿದ್ದೆ. ನನ್ನ ಮೇಲೆ ಸುಳ್ಳು ಆರೋಪಗಳು ಮಾಡುತ್ತಿದ್ದಾರೆ.

ಪುಷ್ಪ. ಗ್ರಂಥಪಾಲಕಿ ಕೋರಮಂಗಲ.

————————————————————————-

ಗ್ರಂಥಾಲಯ ಬಾಗಿಲು ತೆರೆಯುತ್ತಿಲ್ಲವೆಂದು ಸ್ಥಳೀಯರಿಂದ ಆರೋಪ ಕೇಳಿ ಬಂದಿದ್ದರಿಂದ ಗ್ರಂಥಪಾಲಕಿಯನ್ನು ವಿಚಾರಿಸಿದ್ದೇನೆ. ಅವರು ಆಸ್ಪತ್ರೆಗೆ ಹೋಗಿ ಬಂದಿರುವುದಾಗಿ ತಿಳಿಸಿದ್ದಾರೆ.

ರಾಘವೇಂದ್ರ ಪಿಡಿಓ ಕೋರಮಂಗಲ ಗ್ರಾ.ಪಂ.