ಕೆರೆಕುಂಟೆಗಳಿಗೆ ಹಾದು ಹೋಗುವ ಮಳೆ ನೀರು ಮೂಲಗಳ ನೆಲಸಮ ಗೊಳಿಸಿದ ಭೂ ಕಬಳಿಕೆದಾರರ ವಿರುದ್ಧ ರೈತರು ಆಕ್ರೋಶ

ದೇವನಹಳ್ಳಿ :- ಬೆಂಗಳೂರು ಸೇರಿ ರಾಜ್ಯದ ಯಾವುದೇ ಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿ ಯಾಗಿದ್ದರೆ ಅದನ್ನು ತೆರವುಗೊಳಿಸುವ ಸಂಪೂರ್ಣ ಅಧಿಕಾರವನ್ನು ತಹಶೀಲ್ದಾರರಿಗೆ ನೀಡಿದ್ದರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಡಾ. ಬಿಕೆ.ವಿನೋದ್ ಕುಮಾರ್ ಗೌಡ ಆರೋಪಿಸಿದರು.
ದೇವನಹಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ
ರಾಜಕಾಲುವೆ, ಚೆಕ್ ಡ್ಯಾಂ, ಬಂಡು ದಾರಿ, ಕಾಲು ದಾರಿ ಒತುವರಿ ಮಾಡಿದ ಸ್ವಾಯಾಮಿ ಸತ್ಸಂಗ ಬಿಯಾಜ್ ಖಾಸಗಿ ರಿಯಲ್ ಎಸ್ಟೇಟ್ ಮಾಫಿಯಾ ಗಳಿಂದ ಸರ್ಕಾರಿ ಆಸ್ತಿಯನ್ನು ತೆರವುಗೊಳಿಸಿ ಭೂಗಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಳೆದ ಆರು ಏಳು ತಿಂಗಳಿಂದ ದೂರು ನೀಡಿದರು ಎಚ್ಚೆತ್ತು ಕೊಳ್ಳು ವಲ್ಲಿ ವಿಫಲರಾಗಿದ್ದಾರೆ.
ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೊಡ್ಡ ಸಾಗರಹಳ್ಳಿ, ಹೊಸಹುಡ್ಯ, ಮುದುಗುರ್ಕಿ, ಹುರುಳುಗುರ್ಕಿ,ಸಿಂಗವಾರ, ಗ್ರಾಮಗಳಿಗೆ ಹಾದು ಹೋಗುವ ಬೆಟ್ಟದ ತುದಿಯಿಂದ ನೀರಿನ ಮಾರ್ಗಗಳು ಹಾದು ಹೋಗುತ್ತಿರುವ ಪ್ರದೇಶ ಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ನೀರಿನ ಮೂಲಗಳು ಕೆರೆಗೆ ಹಾದುಹೋಗುದಂತೆ ತಡೆಹಿಡಿದು ಸ್ವಾರ್ಥ ಸಾಧನೆಗಾಗಿ ಸರಕಾರಿ ಜಾಗವನ್ನು ದುರುಪಯೋಗ ಖಂಡನೀಯ ಸಂಬಂಧ ಪಟ್ಟ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರವು ಗೊಳಿಸದಿದ್ದರೆ ಉಗ್ರ ಹೋರಾಟ ವನ್ನು ಸಹಸ್ರಾರು ಸಂಖ್ಯೆಯಲ್ಲಿನ ರೈತರು ಹಾಗೂ ಗ್ರಾಮಸ್ಥರು ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಕಚೇರಿಗೆ ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸುವ ಎಚ್ಚರಿಕೆ ಸರ್ಕಾರಕ್ಕೆ ರವಾನಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದ ಅನಿಲ್ ಅವರಿಗೆ ಬೇಡಿಕೆ ಮನವಿ ಪತ್ರ ನೀಡಿದ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಗೌರವಧ್ಯಕ್ಷ ರಾಜಣ್ಣ,
ಸಂಚಾಲಕ ಚಿಕ್ಕಜಾಲ ಎಸ್ ಕೆ.ಮಂಜುನಾಥ್,ರೖತ ಹೋರಾಟಗಾರರಾದ ಮನು, ಶ್ರೀಧರ್, ಆನಂದ್, ಕೃಷ್ಣಮೂರ್ತಿ, ಕಿರಣ್ ಸೇರಿದಂತೆ ಹಲವು ರೈತ ಮುಖಂಡರು ಕಾರ್ಯಕರ್ತರು ಹಾಜರಿದ್ದರು.





