ಒಕ್ಕಲಿಗರ ಒಗ್ಗಟ್ಟು, ಸಂಘಟನೆ ನಮ್ಮ ಅಸ್ತಿತ್ವವನ್ನು ಹೆಚ್ಚಿಸುತ್ತದೆ. ವೀರಣ್ಣ
ವಿಜಯಪುರ: ಜನಾಂಗದಲ್ಲಿನ ಒಗ್ಗಟ್ಟು, ಸಂಘಟನೆ, ನಮ್ಮ ಅಸ್ತಿತ್ವಕ್ಕೆ ಗುರುತನ್ನು ನೀಡುವುದರೊಂದಿಗೆ ಇತರೆ ಸಂಘ ಸಂಸ್ಥೆಗಳು, ರಾಜಕೀಯದಲ್ಲಿ ನಮ್ಮನ್ನು ಗುರುತಿಸುವಂಥಾಗುತ್ತದೆ ಎಂದು ವಿ.ಎಸ್.ಎಸ್.ಎನ್ ಅಧ್ಯಕ್ಷ ಎಂ ವೀರಣ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ೨೦೨೫-೨೬ ನೇ ಸಾಲಿನ ಒಕ್ಕಲಿಗರ ಸಂಘದ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.
ಶ್ರೀ ಓಂಕಾರೇಶ್ವರ ಸ್ವಾಮಿ ಒಕ್ಕಲಿಗರ ಟ್ರಸ್ಟ್ ನ ಅಧ್ಯಕ್ಷ ವಿ.ಎಂ.ನಾಗರಾಜ್ ಅವರು ಮಾತನಾಡಿ, ಸಂಘದ ಪದಾಧಿಕಾರಿಗಳು, ಜನಾಂಗದ ಏಳಿಗೆಯ ಜೊತೆಯಲ್ಲಿ, ಸಮಾಜದಲ್ಲಿ ಮಾದರಿಯಾಗಿ ಬದುಕುವ ಮೂಲಕ ಮಾದರಿಯಾಗಬೇಕು. ಜನಾಂಗದಲ್ಲಿನ ಬಡವರು, ತೊಂದರೆಗೊಳಗಾದವರಿಗೆ ಎಲ್ಲರ ಸಹಕಾರದೊಂದಿಗೆ ಸಹಾಯ ಹಸ್ತ ನೀಡುವಂತಾಗಬೇಕೆಂದು. ಸಮಾಜದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ಶ್ರೀಓಂಕಾರೇಶ್ವರ ಸ್ವಾಮಿ ಒಕ್ಕಲಿಗರ ಟ್ರಸ್ಟ್ ನ ಮಾಜಿ ಅಧ್ಯಕ್ಷರಾದ ತೋಟದಪ್ಪ, ಬೈಯಣ್ಣ, ವೆಂಕಟೇಶ್, ಟ್ರಸ್ಟಿಗಳಾದ ಮುನಿರಾಜಪ್ಪ, ಆಂಜಿನಪ್ಪ, ಸಿ.ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.
ನೂತನ ಕಾರ್ಯಕಾರಿ ಮಂಡಳಿ: ಅಧ್ಯಕ್ಷ ಎಂ ಬೈರೇಗೌಡ, ಉಪಾಧ್ಯಕ್ಷರಾಗಿ ವಿ.ಮಂಜುನಾಥ್, ಪ್ರಭಾಕರ್, ಸಿ.ಮುನಿಕೃಷ್ಣ, ರಾಜಕುಮಾರ, ಖಜಾಂಚಿ ವಿ.ರವಿ,
ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಕಾರ್ಯದರ್ಶಿ ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಮೋಹನ್ ಕುಮಾರ್, ಡಿ.ರಘು, ಜಿ.ಲೋಕೇಶ್, ಸುದೇಶ್ ಕುಮಾರ್, ಸಹಕಾರ್ಯದರ್ಶಿಗಳಾಗಿ ನಿತೇಶ್ ಕುಮಾರ್, ಮಧುಕುಮಾರ್, ಮಂಜುನಾಥ್, ರಮೇಶ್, ಜೀವನ್ ಕುಮಾರ್, ಅನಿಲ್ ಕುಮಾರ್, ಮಧುಸೂಧನ್, ಸದಸ್ಯರಾಗಿ ಎಸ್.ರಾಜಯ್ಯ, ಡಿ.ಎನ್.ಸುರೇಶ್ ಅವರು ಆಯ್ಕೆಯಾಗಿದ್ದಾರೆ.
ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನು ಸನ್ಮಾನಿಸಲಾಯಿತು.





