ತೂಬಗೆರೆ ಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಪ್ರಾರಂಭ
ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಸಂಬಂದಿಸಿದ ಕೆಲಸ ನಿರ್ವಹಣೆ ಮಾಡಲು
ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೂತನ ಕಛೇರಿಯಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ವಲಯದ ಕಛೇರಿ ಪ್ರಾರಂಭ ಮಾಡಲಾಯಿತು.
ಸಂಘದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ನೂತನವಾಗಿ ಹಾಡೋನಹಳ್ಳಿ ಒಕ್ಕೂಟ ರಚನೆ ಮಾಡಿ ದಾಖಲಾತಿಗಳನ್ನು ಯೋಜನಾಧಿಕಾರಿ ದಿನೇಶ್ ಎನ್.ಆರ್ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಧನಂಜಯ್,ಸವಿತಾ ಆನಂದ್ ತಾಲೂಕಿನ ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ ಮೇಲ್ವಿಚಾರಕರಾದ ಈರಣ್ಣ ಗಿರೀಶ್ ರೇಣುಕಾ ಪ್ರಸಾದ್,ಸೇವಾ ಪ್ರತಿನಿದಿಗಳು, ವಿ ಎಲ್ ಇ ಸೇವಾದಾರರು ಉಪಸ್ಥಿತರಿದ್ದರು.





