ಗಾಂಧಿ ಪುರಸ್ಕಾರ ಪ್ರಶಸ್ತಿ ತಾವರೆಕೆರೆ ಗ್ರಾಮ ಪಂಚಾಯಿತಿ ಮುಡಿಗೆ
ಹೊಸಕೋಟೆ : ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟÀ ಹಾಲ್‌ನಲಿಲ್ನಡೆದ ಕಾರ್ಯಕ್ರಮದಲ್ಲಿ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಗೆ ನೀಡಿರುವ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನ ಸಚಿವ ಪ್ರಿಯಾಂಕ್ ಖರ್ಗೆರವರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕ ಡಿ.ರಮೇಶ್, ಸ್ವೀಕರಿಸಿದರು.
ಇನ್ಬು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂಲ ಸೌಕರ್ಯದ ಯಾವುದೇ ಕೊರತೆಯಿಲ್ಲದೆ ಗ್ರಾಮಗಳ ಸ್ವಚ್ಛತೆ ಸರ್ವಾಂಗೀಣ ಅಭಿವೃದ್ಧಿಗೆ ಸಂಧ ಗಾಂಧೀ ಗ್ರಾಮ ಪುರಸ್ಕಾರ ಇಡೀ ತಾಲ್ಲೂಕಿನ 28 ಪಂಚಾಯಿತಿಗಳ ಪೈಕಿ ನಮ್ಮ ಪಂಚಾಯಿತಿಗೆ ಲಭಿಸಿರುವುದು ನಮ್ಮ ಪಂಚಾಯಿತಿಯಲ್ಲಿ ನಡೆದ ನರೇಗಾ ಹಾಗೂ ಸಿಬ್ಬಂಧಿ ವೇತನ ಬಟವಾಡೆ ಈ ಖಾತಾ ಮಾಡುವಲ್ಲಿ ಶೇಕಡಾ 90 ರಷ್ಟು ಮಾಡಲಾಗಿದೆ. ಶಾಸಕ ಶರತ್ ಬಚ್ಚೇಗೌಡರು ಅವರ ಅನುದಾನವನ್ನ ಹೆಚ್ಚಾಗಿ ನೀಡಿ ಗ್ರಾಮಗಳ ಅಭಿವೃದ್ದಿ ಪಡಿಸಲು ನರವಾಗಿದ್ದಾರೆ. ಇವರ ಆಶೀರ್ವಾದದಿಂದ ಹಾಗೂ ಗ್ರಾಪಂನ ಉಪಾಧ್ಯಕ್ಷೆ ಮತ್ತು ಸದಸ್ಯರುಗಳ ಸಹಕಾರದಿಂದ ಹಾಗೂ ಸಿಬ್ಬಂಧಿಗಳ ಅಭಿವೃದ್ಧಿ ಅಧಿಕಾರಿಯ ಪರಿಶ್ರಮದಿಂದ ಈ ಪುರಸ್ಕಾರಕ್ಕೆ ಭಾಜನರಾಗಿದ್ದೇವೆ ಎಂದು ಹೇಳಿದರು.
ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ ಮಾತನಾಡಿ ನಮ್ಮ ಪಂಚಾಯಿತಿಯಲ್ಲಿ ಕಾಲ ಕಾಲಕ್ಕೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಗಳನ್ನು ನಡೆಸಿ ಸಾರ್ವಜನಿಕರಿಗೆ ಸಕಾಲ ಸೇವೆ ನೀಡಿಕೆಯಲ್ಲಿ ಯಶಸ್ವಿಯಾಗಿ ತೆರಿಗೆ ವಸೂಲಿಯಲ್ಲಿ ದಾಖಲೆ ಸರ್ಕಾರದ ವಿವಿಧ ಯೋಜನೆಗಳ ಅನುದಾನದ ಸದ್ಬಳಕೆ ಸೇರಿದಂತೆ ಅನೇಕ ಸಾಧನೆಗಳಿಂದ ನಮ್ಮ ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದೆ. ರಸ್ತೆ, ಚರಂಡಿ, ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಮುಕ್ತ ಗ್ರಾಮ ಪಂಚಾಯಿತಿ ಮಾಡುವ ಸಂಕಲ್ಪ ಕೈಗೂಡಲು ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂಧಿಗಳ ಶ್ರಮವಿದೆ. ಗ್ರಾಮೀಣ ಭಾಗದ ಪಂಚಾಯಿತಿಯಾಗಿದ್ದು ಇಲ್ಲಿ ಈಗಾಗಲೇ ಮನೆ ಮನೆಯಲ್ಲಿ ಕಸ ತಂದು ಕಸ ವಿಂಗಡಣೆಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಇನ್ನು ತಾವರೆಕೆರೆ ಗ್ರಾಮ ಪಂಚಾಯಿತಿಗೆ ಗಾಂಧೀ ಪುರಸ್ಕಾರ ದೊರೆತಿರುವುದರಿಂದ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ. ಶಾಸಕ ಶರತ್ ಬಚ್ಚೇಗೌಡ. ಉದ್ಯಮಿ ಬಿ.ವಿ.ಬೈರೇಗೌಡ ಹಾಗೂ ಮಾಜಿ ತಾಪಂ ಅಧ್ಯಕ್ಷರುಗಳಾದ ಬಿ.ವಿ.ರಾಜಶೇಖರ್‌ಗೌಡ, ಟಿ.ಎಸ್.ರಾಜಶೇಖರ್ ರವರುಗಳು ಪಂಚಾಯ್ತಿ ಅದ್ಯಕ್ಷೆ ಪ್ರಿಯಾಂಕ ರಮೇಶ್ ರವರನ್ಬು ಹಾಗೂ ಪಿಡಿಓ ಮುನಿಗಂಗಯ್ಯ ರವರನ್ನು ಅಭಿನಂದಿಸಿದ್ದಾರೆ.





