ಕಸಾಯಿಖಾನೆಗೆ ಸಾಗುತ್ತಿದ್ದ ಎತ್ತು ರಸ್ತೆಯಲ್ಲೆ ಬಿದ್ದು ಸಾವು.
ವಿಜಯಪುರ: ಅಕ್ರಮವಾಗಿ ಖಸಾಯಿಖಾನೆಗಳಿಗೆ ರಾಸುಗಳನ್ನು ಸಾಗಿಸುವ ಭರದಲ್ಲಿ, ರಸ್ತೆಯಲ್ಲಿ ಬಿದ್ದಿರುವ ಎತ್ತನ್ನು ಗಮನಿಸದೇ ಹೋಗಿರುವುದರ ಪರಿಣಾಮ, ಸಾಗಾಣಿಕೆಯ ವಾಹನದಿಂದ ಬಿದ್ದಿರುವ ಎತ್ತು ಸ್ಥಳದಲ್ಲೆ ಮೃತಪಟ್ಟಿದೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ವಿ.ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರೋ ರಾತ್ರಿ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ. ಗೋವುಗಳನ್ನು ಸಾಗಾಣಿಕೆ ಮಾಡುವ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ, ಗೋವುಗಳನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ಈ ಕುರಿತು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಮೃತಪಟ್ಟಿರುವ ಗೋವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.





