--ಜಾಹೀರಾತು--

*ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮೇಲೆ ವಕೀಲ ಕೆ.ಬೋರೇಗೌಡ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ‌: ಸೂಕ್ತ ಕಾನೂನು ಕ್ರಮಕ್ಕೆ ಹಿರಿಯ ವಕೀಲರ ಮನವಿ*

On: December 6, 2025 11:58 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮೇಲೆ ವಕೀಲ ಕೆ.ಬೋರೇಗೌಡ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ‌: ಸೂಕ್ತ ಕಾನೂನು ಕ್ರಮಕ್ಕೆ ಹಿರಿಯ ವಕೀಲರ ಮನವಿ*

ಕೆ.ಆರ್.ಪೇಟೆ,ಡಿ.06: ಪಟ್ಟಣದ ದಲಿತ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿರುವ ವಕೀಲ ಕೆ.ಬೋರೇಗೌಡ ಅವರು ತಮ್ಮ ಕಚೇರಿಗೆ ಬಂದಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಎಂ.ಆರ್.ನಾಗೇಗೌಡ ಮತ್ತು ಪದಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಸಂಬಂಧ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ. ಅನಂತರ ತಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ ಹಾಗಾಗಿ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ವಹಿಸುವಂತೆ ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಆರ್.ಪ್ರಸನ್ನಕುಮಾರ್ ಅವರು ವಕೀಲರಾದ ಕೆ.ಬೋರೇಗೌಡ ಅವರು 2014ರಿಂದ 2017ವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಲಕ್ಷಾಂತರ ರೂಪಾಯಿಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ದುರುಪಯೋಗ ಮಾಡಿಕೊಂಡಿದ್ದಾರೆ. ಸದರಿ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆದು ಕೆ.ಬೋರೇಗೌಡ ಅವರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಜೈಲಿಗೂ ಸಹ ಹೋಗಿ ಬಂದಿದ್ದಾರೆ. ಇದರಿಂದಾಗಿ ತಾಲ್ಲೂಕು ವಕೀಲರ ಸಂಘದಲ್ಲಿ ಅವರಿಗೆ ಸದಸ್ಯತ್ವ ನಿರಾಕರಿಸಲಾಗಿದೆ. ಇದರಿಂದಾಗಿ ಸಂಘಕ್ಕೆ ಕೆಟ್ಟ ಹೆಸರ ತರಬೇಕೆಂಬ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಕಳೆದ ಐದಾರು ವರ್ಷಗಳಿಂದಲೂ ಕೆ.ಆರ್.ಪೇಟೆಯಲ್ಲಿ ಅಪಘಾತ ಪ್ರಕರಣಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ವಿಮಾ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಕಳೆದ ಬುಧವಾರ ತಾಲ್ಲೂಕಿನ ಗವಿರಂಗನಾಥ ದೇವಾಲಯದಲ್ಲಿ ನಡೆದ ಅಪಘಾತ ಒಂದರಲ್ಲಿ ಸಾರಂಗಿ ಗ್ರಾಮದ ಶಾಂತಮ್ಮ ಮತ್ತು ಸರೋಜಮ್ಮ ಎಂಬ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಸದರಿ ಮೃತ ಮಹಿಳೆಯರ ಸಂಬಂಧಿಕರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ಅವರನ್ನು ಸಂಪರ್ಕಿಸಿ ಘಟನೆಯ ಸಂಬಂಧ ವಿಮಾ ಪರಿಹಾರವನ್ನು ಕೊಡಿಸುವಂತೆ ಕೋರಿಕೊಂಡಿದ್ದಾರೆ. ಈ ಸಂಬಂಧ ಎಂ.ಆರ್.ನಾಗೇಗೌಡ ಅವರು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಹೋಗಿ ಈ ಕೇಸನ್ನು ನನಗೆ ಕೊಡಿ ಕಡಿಮೆ ಫೀಜಿನಲ್ಲಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದಲ್ಲದೇ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಎಂ.ಆರ್.ನಾಗೇಗೌಡರ ಬಗ್ಗೆ ಲಘುವಾಗಿ ಮಾತನಾಡಿ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲ ಕೆ.ಬೋರೇಗೌಡ ಮತ್ತು ಎಂ.ಆರ್.ನಾಗೇಗೌಡ ಅವರ ನಡುವೆ ಮಾತಿನ ಚಕಮಕಿ ನಡೆದಿರುವುದು ನಿಜ, ಆದರೆ ಯಾವುದೇ ಹಲ್ಲೆಯಾಗಲಿ, ಹೊಡೆದಾಟವಾಗಲಿ ನಡೆದಿಲ್ಲ. ಆದರೂ ಸಹ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಕೆಟ್ಟ ಹೆಸರು ತರಬೇಕು ಎಂಬ ದುರುದ್ದೇಶದಿಂದ ವಕೀಲ ಕೆ.ಬೋರೇಗೌಡ ಅವರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಎಂ.ಆರ್.ಪ್ರಸನ್ನಕುಮಾರ್ ಹೇಳಿದರು.
ವಕೀಲ ಕೆ.ಬೋರೇಗೌಡ ಅವರು ಜನಸಾಮಾನ್ಯರಿಗೆ ತುಂಬಾ ತೊಂದರೆ ನೀಡುತ್ತಾ ಬಂದಿದ್ದು ವಕೀಲ ವೃತ್ತಿಯ ಗೌರವವನ್ನು ಹಾಳು ಮಾಡುತ್ತಿದ್ದಾರೆ ಇದರಿಂದಾಗಿ ತಾಲ್ಲೂಕು ವಕೀಲರ ಸಂಘದ 180ಸದಸ್ಯರ ಪೈಕಿ ಒಬ್ಬರೇ ಒಬ್ಬ ವಕೀಲರೂ ಸಹ ಕೆ.ಬೋರೇಗೌಡ ಅವರ ಪರ ಇಲ್ಲ. ಕೆ.ಬೋರೇಗೌಡ ಅವರು ಅಪಘಾತ ಪ್ರಕರಣದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ, ವಿಮಾ ಸಂಸ್ಥೆಯ ಹಣವನ್ನು ಲೂಟಿ ಮಾಡುವ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಅಪಘಾತ ನಡೆದ ದಿನ ಕಕ್ಷಿದಾರರನ್ನು ಬೇಟಿ ಮಾಡಿ ಕೇಸು ನಡೆಸಿಕೊಡುತ್ತೇನೆ. ಕಡಿಮೆ ಫೀಜು ಕೊಡಿ ಎನ್ನುವ ಬೋರೇಗೌಡ ವಿಮಾ ಕಂಪನಿಯಿಂದ ವಿಮಾ ಪರಿಹಾರದ ಬಿಡುಗಡೆಯಾದ ಸಂದರ್ಭದಲ್ಲಿ ಹೆಚ್ಚಿನ ಫೀಜು ವಸೂಲಿ ಮಾಡುವ ಮೂಲಕ ಕಕ್ಷೀದಾರರಿಂದಲೂ ನ್ಯಾಯಾಲಯದ ಆವರಣದಲ್ಲಿಯೇ ಛೀಮಾರಿ ಹಾಕಿಕೊಂಡಿದ್ದಾರೆ. ಇದರಿಂದ ವಕೀಲ ವೃತ್ತಿಗೆ ಅವಮಾನ ಆಗುತ್ತಿದೆ. ಆದರೂ ತಮ್ಮ ಮೇಲೆ ಎಫ್.ಐ.ಆರ್ ಹಾಕಿದ್ದರೂ ಸಹ ಮಾಧ್ಯಮಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ತಾಲ್ಲೂಕು ವಕೀಲರ ಸಂಘ ಹಾಗೂ ಹಿರಿಯ ವಕೀಲರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆ.ಬೋರೇಗೌಡ ಅವರ ವಿರುದ್ದ ದಾಖಲೆ ಬಿಡುಗಡೆ ಮಾಡಿ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾಗಿರುವ ಕೆ.ಬೋರೇಗೌಡ ಅವರು ವಕೀಲರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಬೋರೇಗೌಡ ಅವರು ಇದೂವರೆವಿಗೂ ಮಾಡಿರುವ ಕಾನೂನು ಬಾಹಿರ ಕೆಲಸಗಳ ಬಗ್ಗೆ ದಾಖಲೆಗಳನ್ನು ಪ್ರದರ್ಶನ ಮಾಡಿದರು. ಅಲ್ಲದೇ ಕೆ.ಬೋರೇಗೌಡ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯಾವುದೇ ಹುರಳಿಲ್ಲ. ಸುಳ್ಳು ದೂರು ದಾಖಲಿಸುವ ಮೂಲಕ ತಾಲ್ಲೂಕು ವಕೀಲರ ಸಂಘಕ್ಕೆ ಹಾಗೂ ಸಂಘದ ಪದಾಧಿಕಾರಿಗಳಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ವಕೀಲರರಾದ ಕೆ.ಎನ್.ನಾಗೇಗೌಡ, ಎಂ.ಆರ್.ಪ್ರಸನ್ನಕುಮಾರ್, ಜಿ.ಜೆ.ಲೋಕೇಶ್, ನಿರಂಜನ್ ಹಾಗೂ ಹಲವು ಕಕ್ಷೀದಾರರು ಸಹ ಹಾಜರಿದ್ದು ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರಾದ ಕೆ.ಎನ್.ನಾಗೇಗೌಡ, ಕೆ.ಆರ್.ಮಹೇಶ್, ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ನಿರಂಜನ್, ಶಂಕರೇಗೌಡ ಸೇರಿದಂತೆ ಹಲವು ವಕೀಲರುಗಳು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:06.ಕೆ.ಆರ್.ಪಿ-01: ಕೆ.ಆರ್.ಪೇಟೆ: ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್.ಪ್ರಸನ್ನಕುಮಾರ್, ಹಿರಿಯ ವಕೀಲರರಾದ ಕೆ.ಎನ್.ನಾಗೇಗೌಡ, ಎಂ.ಆರ್.ಪ್ರಸನ್ನಕುಮಾರ್, ಜಿ.ಜೆ.ಲೋಕೇಶ್, ನಿರಂಜನ್ ಇತರರು ಮಾತನಾಡಿದರು.
=====================