--ಜಾಹೀರಾತು--

ಕೆ ಆರ್ ಪೇಟೆಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭ

On: December 7, 2025 12:01 AM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಕೆ.ಆರ್.ಪೇಟೆಯಲ್ಲಿ ಅಡಿಕೆ ಖರೀದಿ ಕೇಂದ್ರ ಪ್ರಾರಂಭ*

ಕೆ.ಆರ್.ಪೇಟೆ,ಡಿ.06: ಅಡಿಕೆ ಬೆಳೆಗಾರರ ಜೀವನಾಡಿಯಾದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ ಶಿವಮೊಗ್ಗ ಸಂಕ್ಷಿಪ್ತದಲ್ಲಿ ಮಾಮ್‌ಕೋಸ್ ಎಂದೇ ಪ್ರಸಿದ್ಧವಾದ ಸ್ವಾತಂತ್ರ‍್ಯ ಪೂರ್ವ ಸಹಕಾರಿ ಸಂಸ್ಥೆಯು ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಸ್ಕೂಲ್ ಆಫ್ ಇಂಡಿಯಾ ಪಬ್ಲಿಕ್ ಸ್ಕೂಲ್ ಸಮೀಪ ಅಡಿಕೆ ಖರೀದಿ ಕೇಂದ್ರವನ್ನು ಆರಂಭಿಸಿದ್ದು ಸಂಸ್ಥೆಯ ಉಪಾಧ್ಯಕ್ಷ ಹೆಚ್.ಎಸ್.ಮಹೇಶ್ ಹುಲ್ಕುಳಿ ಉದ್ಘಾಟಿಸಿದರು.
ಅಡಿಕೆ ಖರೀದಿ ಕೇಂದ್ರವನ್ನು ಶಿವಮೊಗ್ಗ ಮಾಮ್ ಕೋಸ್ ಉಪಾಧ್ಯಕ್ಷ ಹೆಚ್ ಎಸ್ ಮಹೇಶ್ ಹುಲ್ಕುಳಿ ರೈತರಿಂದ ಅಡಿಕೆಯನ್ನು ತೂಕ ಮಾಡಿ ಖರೀದಿಸುವ ಮೂಲಕ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಹೆಚ್ ಎಸ್ ಮಹೇಶ್ ಹುಲ್ಕುಳಿ ಅವರು ಅಡಿಕೆ ಬೆಳೆಗಾರರ ಜೀವನಾಡಿ ಎಂದೇ ಪ್ರಖ್ಯಾತ ಹೊಂದಿರುವ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ ಶಿವಮೊಗ್ಗದಲ್ಲಿ ಮಾಮ್ ಕೋಸ್ ಎಂಬುದಾಗಿಯೇ ಪ್ರಸಿದ್ಧಿಹೊಂದಿದೆ.ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಎಂ ಶೇಷಾದ್ರಿಯವರ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ಕಾಯುವ ಉದ್ದೇಶದಿಂದ ದಿನಾಂಕ 08 ನವೆಂಬರ್ 1939 ರಂದು ಈ ಸಂಘವನ್ನು ಸ್ಥಾಪಿಸಲಾಗಿದೆ. ಸಂಸ್ಥೆಯ ಕೇಂದ್ರ ಕಚೇರಿಯು ಶಿವಮೊಗ್ಗದಲ್ಲಿದೆ.ಈಗಲೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ.ಪ್ರಾರಂಭದಲ್ಲಿ ಕೇವಲ 659 ಜನರು ಸದಸ್ಯರಿದ್ದು,5121 ಮೂಟೆ ಮಾತ್ರ ಅಡಿಕೆ ಆವಕವಾಗಿತ್ತು.ರೂ 16031ಷೇರು ಬಂಡವಾಳದೊಂದಿಗೆ ಆರಂಭಗೊಂಡ ಸಂಘವು ಸ್ಥಾಪನೆಯ ವರ್ಷವೇ ರೂ 3867.00 ನಿವ್ವಳ ಲಾಭ ಗಳಿಸಿ ಶೇ.6.25 ರಷ್ಟು ಡಿವಿಡೆಂಡ್ ನೀಡುವಲ್ಲಿ ಸಫಲವಾಗಿದೆ. ನಂತರ ಮಾಮ್ ಕೋಸ್ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಪ್ರಸ್ತುತ 30,500 ಕ್ಕೂ ಹೆಚ್ಚು ಸದಸ್ಯರೊಂದಿಗೆ ಸದೃಢ ಆರ್ಥಿಕ ತಳಹದಿಯನ್ನು ಹೊಂದಿದೆ.ಪ್ರಾರಂಭದಿಂದ ಇಲ್ಲಿಯವರೆಗೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಾ ಪ್ರತಿವರ್ಷ ಡಿವಿಡೆಂಡ್ ನೀಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ 2024-25ನೇ ಸಾಲಿನ ವರ್ಷದಲ್ಲಿ 5.52 ಕೋಟಿ ನಿವ್ವಳ ಲಾಭ ಗಳಿಸಿದ್ದು ಇದೇ ಸಾಲಿನಲ್ಲಿ ಒಟ್ಟು ವ್ಯವಹಾರ (ಟರ್ನೋವರ್) ಅಂದಾಜು 1297.38 ಕೋಟಿ ಆಗಿರುತ್ತದೆ.ಆದ್ದರಿಂದ ಅಡಿಕೆ ಬೆಳೆಗಾರರು ಕೆ ಆರ್ ಪೇಟೆ ಪ್ರಾರಂಭವಾಗಿರುವ ನೂತನ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಉತ್ತಮ ಲಾಭ ಪಡೆಯುವ ಮೂಲಕ ನೆಮ್ಮದಿಯ ಜೀವನ ಮಾಡುವಂತೆ ಸಲಹೆ ನೀಡಿದರು.
ರೈತರು ಖರೀದಿ ಕೇಂದ್ರದಲ್ಲಿ ಅಡಿಕೆಯನ್ನು ದಾಸ್ತಾನು ಇರಿಸಿ ಆಧಾರ ಸಾಲವನ್ನು ಸಹ ಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗುವುದು ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪುರಸಭೆಯ ಮಾಜಿ ಅಧ್ಯಕ್ಷ ಹೊಸಹೊಳಲು ಕೃಷ್ಣೇಗೌಡ ಮಾತನಾಡಿ ನಮ್ಮ ತಾಲ್ಲೂಕಿಗೆ ಅಡಿಕೆ ಮಾರಾಟ ಮತ್ತು ಖರೀದಿ ಕೇಂದ್ರ ಪ್ರಾರಂಭವಾಗಿರುವುದು ಸಂತೋಷದ ಸಂಗತಿಯಾಗಿದೆ. ಇದನ್ನು ತಾಲ್ಲೂಕಿನ ರೈತ ಬಾಂದವರು ಸದುಪಯೋಗ ಪಡಿಸಿಕೊಳ್ಳಬೇಕು.ಸಾಮಾನ್ಯವಾಗಿ ನಮ್ಮ ತಾಲ್ಲೂಕಿನಲ್ಲಿ ತೆಂಗು,ಭತ್ತ, ಅಡಿಕೆ ಬೆಳೆಯುತ್ತಾರೆ.ರೈತ ಕಷ್ಟ ಪಟ್ಟು ಬೆಳೆಯುವ ಬೆಳೆಗೆ ಬೆಂಬಲ ಬೆಲೆ ಸಿಕ್ಕರೆ ಖುಷಿ ಪಡುತ್ತಾರೆ. ಅಡಿಕೆ ಖರೀದಿ ಕೇಂದ್ರವು ರೈತರ ಬೆನ್ನೆಲುಬಾಗಿ ಕೆಲಸ ಮಾಡಲಿ. ದಲ್ಲಾಳಿಗಳು ಮಧ್ಯ ಪ್ರವೇಶ ಮಾಡದಂತೆ ಸಂಸ್ಥೆಯು ಕೆಲಸವನ್ನು ನಿರ್ವಹಿಸುವಂತೆ ಸಲಹೆ ನೀಡಿದರು. ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಕೇಳಲ್ಪಟ್ಟಿದ್ದೇವೆ ಇದಕ್ಕೆ ಕಡಿವಾಣ ಹಾಕುವ ಮೂಲಕ ರೈತರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳುವಂತೆ ಎಪಿಎಂಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ, ಗ್ರಾ.ಪಂ.ಸದಸ್ಯ ಹೊನ್ನೇನಳ್ಳಿ ಕೃಷ್ಣೇಗೌಡ, ಶಿವಮೊಗ್ಗ ಮಾಮ್ ಕೋಸ್ ಪ್ರಧಾನ ವ್ಯವಸ್ಥಾಪಕ ಜಯಂತಿ ಪಿ ಎಂ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತಬರ್ವೆ, ನಿರ್ದೇಶಕರಾದ ತಿಮ್ಮಪ್ಪ, ರತ್ನಾಕರ್, ಕೀರ್ತಿರಾಜ್, ಕುಬೇಂದ್ರಪ್ಪ,ಅಂಬಿಕಾ, ಅಡಿಕೆ ವ್ಯಾಪಾರಿ ಮುರುಕನಹಳ್ಳಿ ಜಗದೀಶ್, ನಾಗೇಶ್, ಯೋಗಣ್ಣ, ನಾಗೇಶ್, ಆನಂದ್, ಕುಮಾರ್, ವೆಂಕಟೇಶ್, ವಿಜಯ್ ಕುಮಾರ್ ಸೇರಿದಂತೆ ಅನೇಕ ರೈತರು ಹಾಜರಿದ್ದರು.