ಡಾ// ಬಿ ಆರ್ ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ–ಶಶಿಧರ್
ಶಿಡ್ಲಘಟ್ಟ:ತಾಲೂಕಿನ ಜಂಗಮಕೋಟೆ ಕ್ರಾಸ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಶಶಿಧರ್ ಅವರು, ಅಂಬೇಡ್ಕರ್ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಲ್ಲಾ ಸಮುದಾಯ ವರ್ಗದ ಜನರ ಏಳಿಗೆಗಾಗಿ ಹೋರಾಟಗಳನ್ನು ರೂಪಿಸಿದ ಒಬ್ಬ ಮಹಾನ್ ವ್ಯಕ್ತಿ.
ಭಾರತ ದೇಶದ ಸಂವಿಧಾನ ಶಿಲ್ಪಿ ಎಂದೇ ಪ್ರಖ್ಯಾತಿ ಗಳಿಸಿರುವ ಅಂಬೇಡ್ಕರ್ ರವರು ಸಾಮಾಜಿಕ ಸುಧಾರಕರಾಗಿ ದೂರ ದೃಷ್ಟಿವುಳ್ಳ ನಾಯಕರಾಗಿದ್ದರು.
ಸಂವಿಧಾನದ ಮೂಲಕ ಸಮಾನತೆ ಮತ್ತು ನ್ಯಾಯವನ್ನು ಒದಗಿಸುವ ಗುರಿಯೊಂದಿದ್ದರು.
ವಿಶೇಷವಾಗಿ ದೀನ ದಲಿತ ಮತ್ತು ತುಳಿತಕ್ಕೆ ಒಳಗಾಗಿರುವ ವರ್ಗದ ಸುಧಾರಣೆಗಾಗಿ ಶ್ರಮಿಸಿದರು.
ಬಡವರ ಕಲ್ಯಾಣ, ರೈತರ ಹಕ್ಕುಗಳು ಮತ್ತು ಕಾರ್ಮಿಕರ ಹಕ್ಕುಗಳ ಕುರಿತ ಚಿಂತನೆಗಳು ಇಂದಿಗೂ ಸಮಾಜದ ಮೇಲೆ ದೊಡ್ಡ ಪ್ರಭಾವ ಬೀರಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಯಶಸ್ವಿನಿ, ಮಂಜುನಾಥ್ ದಲಿತ ಮುಖಂಡ ಅಂಬರೀಷ್ ಮತ್ತಿತರರು ಹಾಜರಿದ್ದರು.





