--ಜಾಹೀರಾತು--

ಕರ್ನಾಟಕ ಮಾದಿಗ ದಂಡೊರ ಯುವ ಘಟಕ ಸ್ಥಾಪನೆ ಜಿ. ಮಾರಪ್ಪ

On: December 8, 2025 12:04 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಕರ್ನಾಟಕ ಮಾದಿಗ ದಂಡೊರ ಯುವ ಘಟಕ ಸ್ಥಾಪನೆ ಜಿ. ಮಾರಪ್ಪ

ದೇವನಹಳ್ಳಿ :- ಕರ್ನಾಟಕ ಮಾದಿಗ ದಂಡೂರ ಯುವ ಘಟಕ ಅಧ್ಯಕ್ಷರಾಗಿ ರಘು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ಮಾದಿಗ ದಂಡೂರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹೇಳಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಕರ್ನಾಟಕ ಮಾದಿಗ ದಂಡೊರ ಯುವ ಘಟಕ ನೂತನ ಪದಾಧಿಕಾರಿ ಗಳು ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ,
ಸಮಾಜದಲ್ಲಿ ಇಂದಿಗೂ ಜಾತಿ ತಾರತಮ್ಯ ಜೀವಂತವಿದ್ದು ತೊಡೆದು ಹಾಕಲು ಕರ್ನಾಟಕ ಮಾದಿಗ ದಂಡೊರ ಯುವ ಘಟಕ ಅತ್ಯವಶ್ಯಕವಾಗಿದೆ ಎಂದು ಜನಾಂಗದ ಜಿಲ್ಲಾಧ್ಯಕ್ಷ ಜಿ. ಮಾರಪ್ಪ ಯುವ ಪೀಳಿಗೆಗೆ ತಿಳುವಳಿಕೆ ಮೂಡಿಸಬೇಕಿದೆ.

ಮಾದಿಗ ಸಮುದಾಯ ಶಿಕ್ಷಣ ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಹೊಂದಿದ್ದರೆ ಮಾತ್ರ ಜನಾಂಗದ ಬೆಳಿಗ್ಗೆ ಸಾಧ್ಯ ಹಾಗಾಗಿ ರಾಜ್ಯದಂತ ಯುವ ಘಟಕವನ್ನು ಸ್ಥಾಪಿಸಿ ಅವರಲ್ಲಿ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುವ ಕಾರ್ಯಗಳನ್ನು ನಡೆಸಲಾಗುತ್ತದೆ ದೇವನಹಳ್ಳಿ ತಾಲೂಕಿನಲ್ಲಿ ಬರುವ ತೂಬಗೆರೆ, ಕುಂದಾಣ ವಿಜಯಪುರ ಚನ್ನರಾಯ ಪಟ್ಟಣ, ದೇವನಹಳ್ಳಿ ಕಸಬಾ ಒಳಗೊಂಡಂತೆ ಎಲ್ಲಾ  ಹೋಬಳಿಗಳಲ್ಲಿ ಮಾಡಿದ ಯುವ ಪಡೆಯನ್ನು ಸಂಘಟಿಸ ಬೇಕು ಜನಾಂಗ ಬಲವರ್ತನೆ ಆದರೆ ಮಾತ್ರ ಸಾಮಾಜಿಕ ಪದ್ಧತಿ ಬೆಳೆಯುವುದಲ್ಲದೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸಲು ಸಾಧ್ಯ ಹಾಗೂ ತಿಂಗಳುಗಳ ಪರಿಶ್ರ ಮದ ಪರಿಶ್ರಮದಿಂದ ತಾಲೂಕು ಯುವ ಕಮಿಟಿ ರಚನೆ ಮಾಡಲಾಗಿದೆ. ರಾಜ್ಯ ಸಂಘದ ಸೂಚನೆ ಮೇರೆಗೆ ಪ್ರತಿ ತಿಂಗಳ ಮಾಸಿಕ ಸಬೆಯನ್ನು ಕರೆದು ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಅಗತ್ಯ ಯೋಜನೆಗಳನ್ನು ರೂಪಿಸಬೇಕೆಂದು ತಿಳುವಳಿಕೆ ನೀಡಿದರು.

ಈ ಸಂದರ್ಭದಲ್ಲಿ ದೇವನಹಳ್ಳಿ, ತಾಲೂಕು ಅಧ್ಯಕ್ಷ ವೆಂಕ ಟೇಶ, ಖಜಾಂಚಿ ಸಾವಕನಹಳ್ಳಿ ಶ್ರೀನಿವಾಸ, ತಾಲೂಕು ಕಾರ್ಯದರ್ಶಿ ಸಾದಹಳ್ಳಿ ಮಂಜುನಾಥ್, ತಾಲೂಕು ಯುವ ಘಟಕದ ಉಪಾಧ್ಯಕ್ಷ ವಿ.ಮುನೇಂದ್ರ,ಸಂಘಟನಾ ಕಾರ್ಯ ದರ್ಶಿ ವೆಂಕಟೇಶ್, ಕಾರ್ಯದರ್ಶಿ ದೇವರಾಜು, ಸೇರಿದಂತೆ ಜನಾಂಗದ ಯುವ ಪದಾಧಿಕಾರಿಗಳು ಹಾಜರಿದ್ದರು.