ವಾಸವಿ ಸಂಸ್ಥೆ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮ
ಕೊಳ್ಳೇಗಾಲ:ಕೊಳ್ಳೇಗಾಲ ಪಟ್ಟಣದ ವಾಸವಿ ವಿದ್ಯಾ ಕೇಂದ್ರದ ವತಿಯಿಂದ ವಾಸವಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನು ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು
ಪಟ್ಟಣದ ವಾಸವಿ ಸಮೂಹ ಸಂಸ್ಥೆಯ ವತಿಯಿಂದ 2025 ರ ವಾಸವಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ
ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಕುಮಾರಕೃಷ್ಣ
ಮಾತನಾಡಿ ವಾಸವಿ ಶಾಲೆಯಲ್ಲಿ 24×7 ಬಾರ್ 365 ದಿನಗಳಲ್ಲಿ ಕೂಡ ತಮ್ಮನ್ನೇ ತೊಡಗಿಸಿಕೊಂಡು ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುತ್ತಾ ಬಹಳ ಹುಷಾರವಾಗಿ ಕೆಲಸವನ್ನು ಮಾಡುತ್ತಿರುವ ನನ್ನ ನೆಚ್ಚಿನ ಬೋಧಕ ವರ್ಗ ಹಾಗೂ ನನ್ನ ಬೋಧಕಿಯ ವರ್ಗದ ಸಿಬ್ಬಂದಿಗಳನ್ನು ನನ್ನ ಒಟ್ಟಿಗೆ ಕೈಜೋಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತ
ವಾಸವಿ ವಿದ್ಯಾ ಸಂಸ್ಥೆ ಕೇಂದ್ರವನ್ನು ಇವತ್ತಿಗೂ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಸಹಕಾರ ನೀಡಿದ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಕರ ವರ್ಗ ಎಲ್ಲರಿಗೂ ಕೂಡ ನನ್ನ ಹೃದಯದಿಂದ ಅಭಿನಂದನೆಗಳನ್ನು ತಿಳಿಸುತ್ತಾ ಈ ಮಾತನ್ನು ತಿಳಿಸುವುದಕ್ಕೆ ಇಷ್ಟಪಡುತ್ತೇನೆ
ನಮ್ಮ ದೇಶ ಯಾವ ಎತ್ತರಕ್ಕೆ ಬೆಳೆದಿದೆ ಎಂದರೆ
ಇವತ್ತಿಗೂ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು ಎಂದು ಹೇಳಿಕೊಳ್ಳುವ ಮಟ್ಟಿಗೆ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ಹೆಮ್ಮರವಾಗಿ ನಿಂತಿರುವ ದೇಶ ನಮ್ಮ ನಿಮ್ಮ ದೇಶ
ಇಡೀ ಪ್ರಪಂಚ ನಮ್ಮ ದೇಶದ ಕಡೆಗೆ ನೋಡುತ್ತವೆ ಪ್ರಪಂಚದ ಯಾವುದೇ ದೇಶದ ಆರ್ಥಿಕ ಬೆಳವಣಿಗೆ ಆಗಬೇಕಾದರೆ ಪ್ರತಿಭೆ ಬಹಳ ಮುಖ್ಯ ಅಂತಹ ಪ್ರತಿಭೆ ಬೆಳೆಯಬೇಕಾದರೆ ಶಿಕ್ಷಣ ಮತ್ತು ಕೌಶಲ್ಯದಿಂದ ವಾತಾವರಣವನ್ನು ನಾವೇ ನಿರ್ಮಿಸಿದ್ದೇವೆ,
ನಮ್ಮ ದೇಶದ ಶಿಕ್ಷಣದ ವ್ಯವಸ್ಥೆಯಿಂದ ಭಾರತ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಗಿದೆ ಹಾಗಾಗಿ ಅಂತ ವ್ಯವಸ್ಥೆ ಏನಿದೆ ಅಂತ ನೀವು ಕೇಳಬಹುದು ನಮ್ಮ ಭಾರತದ ಮಕ್ಕಳು ನಮ್ಮ ನಿಮ್ಮ ಮಕ್ಕಳಿಗೆ ಕ್ಯಾಲ್ಕುಲೇಟರ್ ಇಲ್ಲದೆ ಗಣಿತನ ಮಾಡುವುದು ಶಕ್ತಿಯನ್ನು ಭಗವಂತ ಭಾರತೀಯ ಮಕ್ಕಳಿಗೆ ಕೊಟ್ಟಿದ್ದಾರೆ,
ಇವತ್ತು ಇಡೀ ಪ್ರಪಂಚದಲ್ಲಿ ಭಾರತ ಯಾಕೆ ಪ್ರತಿಭೆಯಲ್ಲಿ ಬೆಳೆಯುತ್ತಿದೆ ಎಂದರೆ ನಮ್ಮ ಎಲ್ಲಾ ಮಕ್ಕಳು ಎಜುಕೇಶನ್ ಚೆನ್ನಾಗಿದೆ ಇಂಗ್ಲೀಷ್ ಚೆನ್ನಾಗಿ ಬರುತ್ತದೆ ಇವತ್ತು ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಲಾಂಚ್ ಆಗಿದೆ ಎಂದರೆ, ಇಂಗ್ಲಿಷ್ ಆಗಿದೆ ಆ ಇಂಗ್ಲೀಷ್ ಅನ್ನು ಬಹಳ ಸುಲಭವಾಗಿ ನಮ್ಮ ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಮತ್ತೆ ಇಂಗ್ಲೀಷ್ ತಲೆಗೆ ಹಾಕಿಕೊಳ್ಳುತ್ತಾರೆ ಎಂದರೆ ಬಹಳ ದೊಡ್ಡ ಸಾಧನೆ ಆಗಿದೆ
ಆದ್ದರಿಂದ ಪೋಷಕರು ಕೂಡ ಮಕ್ಕಳ ವಿದ್ಯಾಭ್ಯಾಸ ಹೇಗಿದೆ ಅವರ ಅಭ್ಯಾಸ ಯಾವ ರೀತಿ ಎಂಬುದನ್ನು ಗಮನಿಸಬೇಕು
ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುತ್ತೇವೆ ಈ ವರ್ಷದ ಫೀಸ್ ಕಟ್ಟಿದ್ದೇವೆ ನಮ್ಮ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಬಿಟ್ಟಿದ್ದೇವೆ ಮತ್ತೆ ಆ ಶಾಲೆಯಿಂದ ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಿದ್ದೇವೆ ನಮ್ಮ ಕೆಲಸ ಇಷ್ಟು ಆಗಿದೆ ಎಂದು ಯಾರೂ ಪೋಷಕರು ಅಂದುಕೊಂಡರೆ ಅವರಲ್ಲಿ ನಾನು ಕ್ಷಮೆ ಆಶಿಸುತ್ತೇನೆ, ನಿಮ್ಮ ಕೆಲಸ ಇಷ್ಟಕ್ಕೆ ಮುಗಿಯಲ್ಲ ಶಾಲೆಯಲ್ಲಿ ಮಕ್ಕಳಿಗೆ ಕೂಡವ ಪಾಠ ಪ್ರವಚನಗಳಿಗಿಂತ 50 ಭಾಗ ಪೋಷಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಬೇಕು, ಇನ್ನು 50 ಭಾಗ ಶಾಲೆಯಲ್ಲಿ ಪ್ರತಿಯೊಬ್ಬ ಶಿಕ್ಷಕರು ಸಪೋರ್ಟ್ ಸಿಕ್ಕಿದರೆ ಮಾತ್ರ ಆ ಮಗುವಿನ ಭವಿಷ್ಯದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಒಂದು ಕಿವಿಮಾತು ತಿಳಿಸಿದರು.
ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯಗಳು ಹಾಗೂ ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ಸನ್ಮಾನಿಸಿ ಅಭಿನಂದಿಸಿದರು
ಇದರ ಮಧ್ಯ ಕಳೆದ ತಿಂಗಳು ನವೆಂಬರ 9 ರಂದು ಜಿಲ್ಲಾ ಕಾರ್ಯನಿರತನ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕೂರುಪ್ರಸಾದ್ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಹೇಂದ್ರ ರವರ ತಂಡದಲ್ಲಿ ಗೆದ್ದು ಆಯ್ಕೆಯಾದ ಕೊಳ್ಳೇಗಾಲದ
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಡಿ ನಟರಾಜ್,
ಎಮ್ ಮರಿಸ್ವಾಮಿ,ಮತ್ತು ಮಲ್ಲಪ್ಪ
ಈ ಮೂವರಿಗೆ ವಾಸವಿ ವಿದ್ಯ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹಳ ಗೌರವದಿಂದ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸತ್ಯನಾರಾಯಣ ಕಾರ್ಯದರ್ಶಿಯಾದ ಶಶಿಧರ್ ಮತ್ತೊಬ್ಬ ಕಾರ್ಯದರ್ಶಿಯಾದ ಡಾ. ಶ್ರೀಧರ್ .ಖಜಾಂಜಿಯಾದ ಸುಮಂತ್ .ಜಂಟಿ ಕಾರ್ಯದರ್ಶಿಗಳಾದ ಚೇತನ್ ಶರತ್ ನಾಗರಾಜ್ ಬಾಬು. ವೆಂಕಟೇಶ್ ಬಾಬು.. ಈ ಸಂಸ್ಥೆಯ ನಿರ್ದೇಶಕರಾದ ದಿವಾಕರ್ ಸಚಿನ್ ಕುಮಾರ್ ಅಭಿಲಾಶ್, ರಾಮಕೃಷ್ಣ .ಸತೀಶ್. ಆಶಿಕ್.ರಾಜೇಶ್, ಅಶೋಕ್.ಸಮೋಜಕರಾದ ಅನಿತಾ ಗಿರೀಶ್. ಸವಿತಾ ಮಂಜುನಾಥ್ .ಮಧುರ ರಾಜೇಶ್. ಭಾವನಾ ಶಶಿಧರ್. ಸ್ವಪ್ನಶೇಖರ್, ಶಾಲೆಯ ಮುಖ್ಯ ಶಿಕ್ಷಕರು ಗೀತಾ. ಪ್ರಾಂಶುಪಾಲರು ವಾಸವಾಂಬ. ದಯಾಪ್ರಸಾದ್ .ರವಿಕುಮಾರ್. ನಾಗೇಂದ್ರ ಹಾಗೂ ವಾಸವಿ ವಿದ್ಯಾ ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





