ಎಲ್ಲ ಸಮುದಾಯದವರು ಒಗ್ಗೂಡಿ ಅಂಬೇಡ್ಕರ್ ರವರ ಜಯಂತಿ ಮತ್ತು ಪರಿನಿರ್ವಾಣ ದಿನಗಳನ್ನು ಆಚರಿಸಬೇಕು: ಮುತ್ಸಂದ್ರ ಎಂ.ಎ.ಕೃಷ್ಣಾರೆಡ್ಡಿ(ಕಿಟ್ಟಿ) ಅಭಿಮತ
ಹೊಸಕೋಟೆ : ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಭಾರತಕ್ಕೆ ನೀಡಿದ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರು ಎಲ್ಲ ಸಮುದಾಯಗಳ ಶ್ರೇಯಸ್ಸಿಗೆ ಶ್ರಮಿಸಿದವರು ಎಲ್ಲ ಸಮುದಾಯದವರು ಒಗ್ಗೂಡಿ ಅವರ ಜಯಂತಿ ಮತ್ತು ಪರಿನಿರ್ವಾಣ ದಿನಗಳನ್ನು ಆಚರಿಸಬೇಕು ಎಂದು ರಾಜ್ಯ ಜನರೆಡ್ಡಿ ಸಂಘದ ನಿರ್ದೇಶಕ ಮುತ್ಸಂದ್ರ ಎಂ.ಎ.ಕೃಷ್ಣಾರೆಡ್ಡಿ(ಕಿಟ್ಟಿ) ತಿಳಿಸಿದರು
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಬಾಬಾ ಸಾಹೇಬರ 69ನೇ ಪರಿನಿರ್ವಾಣ ದಿನ ಆಚರಣೆಯಲ್ಲಿ ಅಂಬೇಡ್ಕರ್ ರವರ ಬಾವ ಚಿತ್ರಕ್ಕೆ ಪುಷ್ಪ ನಮನಗಳನ್ನು ಅರ್ಪಿಸಿ ಮಾಥನಾಡಿದರು,
ಈ ಸಂದರ್ಭದಲ್ಲಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮೆಹಬೂಬ್ ಪಾಷಾ. ಮಹಂತೇಶ್, ಹಾಜರಿದ್ದರು.





