*ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿ ನೂತನ ಕಟ್ಟಡಕ್ಕೆ ಶಾಸಕ ಹೆಚ್. ಟಿ.ಮಂಜು ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಶಂಕುಸ್ಥಾಪನೆ*
ಕೆ.ಆರ್.ಪೇಟೆ,ಡಿ.08: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಬಡವರಿಗೆ ನಿವೇಶನ ವಿತರಣೆ ಮಾಡಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾ.ಪಂ.ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ನಿವೇಶನ ನೀಡಿದರೆ ಬಡವರಿಗೆ ಶಾಶ್ವತ ಸೂರು ನೀಡಿದಂತಾಗುತ್ತದೆ. ಇದರಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ಇಲಾಖೆ(ಕೆಶಿಫ್) ಇವರ ಸಂಯುಕ್ತ ಅಶ್ರಯದಲ್ಲಿ ನಿರ್ಮಿಸಲಾಗುತ್ತಿರುವ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರ ಇದ್ದಂತೆ. ಹೆಚ್ಚಿನ ಜವಾಬ್ದಾರಿಯನ್ನು ವಹಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಕಷ್ಟು ಯೋಜನೆಗಳ ಅನುಧಾನವನ್ನು ನೇರವಾಗಿ ಗ್ರಾ.ಪಂ.ಗಳಿಗೆ ಬಿಡುಗಡೆ ಮಾಡಿ ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಪಿಡಿಓ, ಕಾರ್ಯದರ್ಶಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಸರ್ಕಾರಿ ಜಮೀನು ಇದೆ ಎಂಬುದನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ನಿವೇಶನ ಹಂಚಿಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡು ಬಡವರು ಸ್ವಂತ ಮನೆ ಹೊಂದಲು ಅವಕಾಶ ಕಲ್ಪಿಸಿಕೊಡಬೇಕು. ಈ ಈ ನಿಟ್ಟಿನಲ್ಲಿ ಅಗ್ರಹಾರಬಾಚಹಳ್ಳಿಯ ಹೈಸ್ಕೂಲ್ ಬಳಿ ಕೀರೇಮಡಿ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿಸಿ ಸಮತಟ್ಟು ಮಾಡಿಸಿ ನಿವೇಶನ ಹಂಚಿಕೆಗೆ ಕ್ರಮ ವಹಿಸುತ್ತಿರುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಎಲ್ಲಾ ಗ್ರಾಮ ಪಂಚಾಯಿತಿಗಳು ನಿವೇಶನ ವಿತರಣೆಗೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ನಿವೇಶನಕ್ಕೆ ಹಕ್ಕುಪತ್ರ ವಿತರಣೆಗೆ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಶಾಸಕನಾಗಿ ನಾನು ಮುಂದೆ ನಿಂತು ಮಾಡಿಸಿಕೊಡುತ್ತೇನೆ ಹಾಗಾಗಿ ಗ್ರಾಮ ಪಂಚಾಯಿತಿಗಳು ನಿವೇಶನ ಹಂಚಿಕೆ ಮಾಡಲು ತುರ್ತು ಕ್ರಮ ವಹಿಸಬೇಕು. ಜೊತೆಗೆ ನರೇಗಾ ಕಾಮಗಾರಿಗಳನ್ನು ಹೆಚ್ಚು ಹೆಚ್ಚು ಕೈಗೊಂಡು ಗ್ರಾಮಾಭಿವೃದ್ಧಿಗೆ ಕೈಜೋಡಿಸಬೇಕು ಈ ಮೂಲಕ ಶಾಸಕರ ಕೆಲಸವನ್ನು ಹಗುರ ಮಾಡಬೇಕು ಎಂದು ಶಾಸಕರಾದ ಹೆಚ್.ಟಿ.ಮಂಜು ಅವರು ಮನವಿ ಮಾಡಿದರು.
ಗ್ರಾಮೀಣ ಭಾಗದ ಎಲ್ಲದಕ್ಕೂ ಶಾಸಕರನ್ನೇ ಹೊಣೆ ಮಾಡಬಾರದು. ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಬೀದಿ ದೀಪ, ಗ್ರಾಮಗಳ ರಸ್ತೆ ಅಬಿವೃದ್ಧಿ, ರೈತರ ವಯಕ್ತಿಕ ಕಾಮಗಾರಿಗಳಾದ ಕೊಟ್ಟಿಗೆ ನಿರ್ಮಾಣ, ಬದುಗಳ ನಿರ್ಮಾಣ, ರೈತರ ಒಕ್ಕಣೆ ಕಣ ನಿರ್ಮಾಣ, ಜಾನುವಾರು ನೀರಿನ ತೊಟ್ಟಿಗಳ ನಿರ್ಮಾಣ, ರೇಷ್ಮೆ, ತೆಂಗು, ಬಾಳೆ, ಕೃಷಿ ಅರಣ್ಯ ಅಭಿವೃದ್ಧಿಗೆ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಬೆರೆಸಬಾರದು. ಜಾಬ್ ಕಾರ್ಡ್ ಹೊಂದಿರುವ ಎಲ್ಲರಿಗೂ ನರೇಗಾ ಕಾಮಗಾರಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಅಗತ್ಯ ಇರುವ ಕಡೆ ಹೊರತು ಪಡಿಸಿ ಬೇರೆ ಯಾವುದೇ ಕೆಲಸಕ್ಕೆ ಜೆಸಿಬಿ ಬಳಕೆ ಮಾಡಬಾರದು. ಕೂಲಿ ಕಾರ್ಮಿಕರನ್ನು ಮಾತ್ರ ನರೇಗಾ ಕೆಲಸಕ್ಕೆ ಬಳಕೆ ಮಾಡಬೇಕು. ಈ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಗ್ರಾಮ ಪಂಚಾಯಿತಿಗಳಿಗೆ ಎಂದು ಶಾಸಕರು ಸಲಹೆ ನೀಡಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಮಗದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅಗ್ರಹಾರಬಾಚಹಳ್ಳಿ ಗ್ರಾಮದ ಅಭಿವೃದ್ಧಿಗೆ ಶಾಸಕರೊಂದಿಗೆ ಜೊತೆಗೂಡಿ ಸರ್ಕಾರದ ಮಟ್ಟದಲ್ಲಿ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಮಾಡಿಸಿಕೊಡಲು ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಜಿ.ಎಸ್.ಶಿಲ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ.ಇಓ ಸುಷ್ಮಾ.ಕೆ, ತಾ.ಪಂ.ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಕೆಶಿಫ್ ಕಾರ್ಯಪಾಲಕ ಇಂಜಿನಿಯರ್ ಶಿವಕುಮಾರ್, ಎಇಇ ಶಿವರಾಜು, ಇಂಜಿನಿಯರ್ ಮದನ್‌ಕುಮಾರ್, ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾ.ಪಂ.ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಮೆಣಸ ಮಹದೇವೇಗೌಡ, ಸೊಸೈಟಿ ಅಧ್ಯಕ್ಷ ಅಶೋಕ್, ಹಿರಿಯ ಮುಖಂಡರಾದ ಹರೀನಹಳ್ಳಿ ರಘು, ಅಣ್ಣೇಗೌಡ, ಚಂದ್ರೇಗೌಡ, ಎ.ಎಸ್.ಪುಟ್ಟಸ್ವಾಮೀಗೌಡ, ಯಜಮಾನ್ ಲಾಳಿ ಬೋರೇಗೌಡ, ಎ.ಎಸ್.ರಾಮಚಂದ್ರೇಗೌಡ, ಡಿ.ರಾಜೇಗೌಡ, ಎ.ಹೆಚ್.ಯೋಗೇಶ್, ಸುಬ್ಬಯ್ಯ, ದೇವರಾಜು, ಸ್ವಾಮಿ, ಚಿಕ್ಕೋಸಹಳ್ಳಿ ನಾಗೇಶ್, ಬೊಮ್ಮನಾಯಕನಹಳ್ಳಿ ಬಸವೇಗೌಡ, ಮೆಣಸ ಮರೀಗೌಡ, ಕರವೇ ತಾಲ್ಲೂಕು ಅಧ್ಯಕ್ಷ ಎ.ಎಸ್.ಶ್ರೀನಿವಾಸ್, ರೂಪೇಶಾಚಾರ್, ಉದ್ದಾನಿ ಮಹಾದೇವೇಗೌಡ, ಗ್ರಾ.ಪಂ.ಸದಸ್ಯರಾದ ಚನ್ನೇಗೌಡ, ಕುಮಾರಗೌಡ, ಫಯಾಜ್‌ಉಲ್ಲಾಖಾನ್, ಸಾವಿತ್ರಮ್ಮಗೋವಿಂದಶೆಟ್ಟಿ, ಭಾಗ್ಯನಂಜುಂಡಯ್ಯ, ರೇಣುಕಾಈಶ್ವರ್, ಆಶಾಆನಂದ್, ಶಶಿರೇಖಾಅಶೋಕ್, ವೈ.ಎಂ.ನೇತ್ರಾವತಿ, ರೇವತಿಹರೀಶ್, ಪ್ರೇಮಾಶೇಖರ್, ನೇತ್ರಾವÀತಿರಮೇಶ್, ನಗರೂರು ನಂಜೇಗೌಡ, ದಿನೇಶ್, ಗುಡ್ಡೇನಹಳ್ಳಿ ಕುಮಾರ್, ಚಿಲ್ಲದಹಳ್ಳಿ ಆರ್.ಶ್ರೀನಿವಾಸ್, ಪಿಡಿಓ ಜಿ.ಎಸ್.ಶಿಲ್ಪ, ಕಾರ್ಯದರ್ಶಿ ಚಂದ್ರಕುಮಾರ್, ಎಫ್.ಡಿ.ಸಿ ಟಿ.ಗೀತಾ, ಬಿಲ್ ಕಲೆಕ್ಟರ್ ನರಸಿಂಹಯ್ಯ, ಡಿಇಓ ತ್ರಿವೇಣಿ.ಎ. ಗ್ರಂಥಪಾಲಕಿ ಸೌಮ್ಯ ಸೇರಿದಂತೆ ಹಲವು ಮುಖಂಡರು, ಗ್ರಾಮ ಪಂಚಾಯತಿಯ ಎಲ್ಲಾ ನೀರು ಗಂಟಿಗಳು ಸೇರಿದಂತೆ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳ ಹಲವಾರು ಮುಖಂಡರು ಉಪಸ್ಥಿತರಿದ್ದರು.





