ಸಮಾನತೆಯ ನವ ಸಮಾಜ ನಿರ್ಮಾಣ ಡಾ.ಬಿ.ಆರ್.ಅಂಬೇಡ್ಕರ್ ಕನಸು ಅಂಬೇಡ್ಕರ್ ಪರಿನಿರ್ವಾಣದ ದಿನ : ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಅಭಿಮತ
ಹೊಸಕೋಟೆ:ಡಾ.ಬಿ.ಆರ್.ಅಂಭೇಡ್ಕರ್ ಅವರು ಸಮಾನತೆಯ ನವ ಸಮಾಜ ನಿರ್ಮಿಸುವ ದೃಷ್ಟಿಯಿಂದ ಸಂವಿಧಾನ ರಚನೆ ಮಾಡಿದ್ದು ಅವರ ಕನಸು ನನಸು ಮಾಡುವಂತಹ ಕಾರ್ಯ ಆಗಬೇಕು ಎಂದು ಭೀಮ್ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ತಿಳಿಸಿದರು.
ಡಾ.ಬಿ.ಆರ್.ಅಂಭೇಢ್ಕರ್ ಪರಿನಿರ್ವಾಣ ದಿನದ ಅಂಗವಾಗಿ ನಗರದ ಗೌತಮ್ ಕಾಲೋನಿಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬಾಬಾ ಸಾಹೇಬರು ಪ್ರಜಾಸತ್ತಾತ್ಮಕ ತತ್ವಗಳಾದ ಸ್ವಾತಂತ್ರö್ಯ, ಸಮಾನತೆ, ಭಾತೃತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಜೀವನವಿಡೀ ಹೋರಾಟ ಮಾಡಿದವರು. ಸೌಹಾರ್ದತೆ, ಮತ್ತು ರಾಷ್ಟಿಯ ಏಕತೆಯ ಮನೋಭಾವವನ್ನು ಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಿದರು. ದೇಶಕ್ಕೆ ಪ್ರಗತಿಪರ ಹಾಗೂ ನ್ಯಾಯ ಕೇಂದ್ರಿತ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದು, ಸಂವಿಧಾನದಡಿಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರು ಅಂಬೇಡ್ಕರ್ ಅವರನ್ನು ಮನೆಯಲ್ಲಿ ಪ್ರತಿದಿನ ಪೂಜಿಸಬೇಕು. ಇಲ್ಲದಿದ್ದರೆ ಅವರ ಜೀವನ ಕೂಡ ವ್ಯರ್ಥ ಎಂದರು.
ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯ ಡಾಸುಪ್ರಿತ್ ಮಾತನಾಡಿ ಜಾತಿ, ಧರ್ಮ ಲಿಂಗಾಧಾರಿತ ಶೋಷಣೆಯಿಂದ ಸಮಾನತೆಯ ಸಮಾಜ ನಿರ್ಮಾಣ ಅಂಬೇಡ್ಕರ ಕನಸಾಗಿತ್ತು. ತಮ್ಮ ಜ್ಞಾನ, ಅನುಭವ ಮತ್ತು ಆದರ್ಶಗಳನ್ನು ಸಂವಿಧಾನ ರೂಪದಲ್ಲಿ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಆದ್ದರಿಂದ ಸಂವಿಧಾದನ ಆಶಯದಡಿ ಹೆಜ್ಜೆ ಹಾಕುವ ಮೂಲಕ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡೋಣ. ಶೋಷಿತ, ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ ಸಂವಿಧಾನ ರಚಿಸಿದ ಅಂಬೇಡ್ಕರ್ ಡಿಸೆಂಬರ್ 6, 1956ರಲ್ಲಿ ನಿಧನರಾದರು. ಅವರು ನಿಧನರಾದ ದಿನವನ್ನು ಪರಿನಿರ್ವಾಣ ದಿನವನ್ನಾಗಿ ಆಚರಣೆ ಮಾಡುತ್ತಿದ್ಧೇವೆ ಎಂದರು.
ಸಿಲಿಕಾನ್ ಸಿಟಿ ಆಸ್ಪತ್ರೆಯ ವೈದ್ಯ ಡಾ.ಸುಪ್ರೀತ್, ಭೀಮ್ ಸೇವಾ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಗಂಗಾಧರ್‌ಬಿಜಿ, ಆಟೋ ಘಟಕದ ರಾಜ್ಯಾಧ್ಯಕ್ಷ ಮೂರ್ತಿ, ಜಿಲ್ಲಾಧ್ಯಕ್ಷ ಬಾಲಚಂದ್ರ ಬಾಲು, ಪ್ರ.ಕಾರ್ಯದರ್ಶಿ ಮುನಿರಾಜು, ಕಾರ್ಯದರ್ಶಿ ವರುಣ್ ರಾಜ್ ಚಕ್ರವರ್ತಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸೂರ್ಯ ಸೂರಿ ಸೇರಿದಂತೆ ಸಂಘಟನೆಯ ಪಧಾಧಿಕಾರಿಗಳು ಹಾಜರಿದ್ದರು.





