--ಜಾಹೀರಾತು--

ಹೊಸಕೋಟೆ ದಿ.ಟೌನ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಕಾಂಗ್ರೆಸ್ ತೆಕ್ಕೆಗೆ

On: December 9, 2025 9:20 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಹೊಸಕೋಟೆ ದಿ.ಟೌನ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಕಾಂಗ್ರೆಸ್ ತೆಕ್ಕೆಗೆ

ದಶಕದ ಬಳಿಕ ಕೈ ತೆಕ್ಕೆಗೆ ಸೇರಿದ ಅಧಿಕಾರ : ನ್ಯಾಯಾಲಯದ ಆದೇಶದ ಮೇರೆಗೆ ಫಲಿತಾಂಶ ಪ್ರಕಟ

 

ಹೊಸಕೋಟೆ:ಶತಮಾನ ಕಂಡ ಹೊಸಕೋಟೆ ದಿ ಟೌನ್ ಕೋ ಅಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸ್ಥಾನಗಳಿಂದ ಗೆಲುವು ಸಾಧಿಸಿದ್ದು ಅಧಿಕಾರದ ಚುಕ್ಕಾಣಿ ದಶಕದ ನಂತರ ಬಿಜೆಪಿ ಕಪಿಮುಷ್ಟಿಯಿಂದ ಕೈ ತೆಕ್ಕೆಗೆ ಜಾರಿದೆ.

ಫೆಬ್ರವರಿ 9ರಂದು 2025-2030ನೇ ಸಾಲಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಅನರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದ ಪರಿಣಾಮವಾಗಿ ಕೆಲವು ಸದಸ್ಯರು ಉಚಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ದಾಖಲಿಸಿದ ಪರಿಣಾಮವಾಗಿ ಉಚ್ಚ ನ್ಯಾಯಾಲಯದ ಆದೇಶದಂತೆ ಫಲಿತಾಂಶಗಳನ್ನು ತಡೆಹಿಡಿಯಲಾಯಿತು ಮತ್ತು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ನವೆಂಬರ್ 24 ರಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಬ್ಯಾಂಕಿನ ಉಪ-ಕಾನೂನುಗಳ ಪ್ರಕಾರ ನಿಗದಿತ ಷರತ್ತುಗಳನ್ನು ಪಾಲಿಸದ ಕಾರಣ ಮತ ಚಲಾಯಿಸಲು ಅನರ್ಹರಾದ ಮತದಾರರನ್ನು ಸೇರಿಸುವ ವಾದಗಳನ್ನು ಬದಿಗಿಟ್ಟು ಫಲಿತಾಂಶಗಳನ್ನು ಘೋಷಿಸಲು ಅಂತಿಮ ನಿರ್ಧಾರವನ್ನು ನೀಡಿತು. ಚುನಾವಣಾಧಿಕಾರಿ ಎನ್ ವೆಂಕಟೇಶ್ ಮಂಗಳವಾರ ಬ್ಯಾಂಕ್ ಆವರಣದಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದರು.
ಬ್ಯಾಂಕಿನ 13 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು ೮ ಸ್ಥಾನಗಳನ್ನು ಗೆದ್ದಿದೆ ಮತ್ತು ಬಿಜೆಪಿ ಬೆಂಬಲಿತರು 5 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನಿAದ ಬೆಂಬಲಿತ ಎಸ್ ಮಂಜುನಾಥ್, ಕೆ ಕಿರಣ್, ಅಕ್ಬರ್ ಪಾಷಾ, ಜಿ ಯು ವಿಷ್ಣು, ಎನ್ ನಾಗರಾಜ್, ಎಸ್ ಮುರಳಿ, ಎಚ್.ಎಸ್ ಗೋಪಾಲ್, ಎಂ ಸರೋಜಮ್ಮ ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಬೆಂಬಲಿತರಾಗಿ ಎ ಅಫ್ಸರ್, ಕೆ ಕಿರಣ್ ಕುಮಾರ್, ಬಿ ನಾಗರಾಜು, ಎನ್ ಬಾಲಚಂದ್ರನ್, ಬಿ ವೆಂಕಟಲಕ್ಷ್ಮಮ್ಮ ಗೆಲುವು ಸಾಧಿಸಿದ್ದಾರೆ.

ಈ ಸಂಧರ್ಭದಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ ಮಾತನಾಡಿ ಶಾಸಕ ಶರತ್ ಬಚ್ಚೇಗೌಡರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಷೇರುದಾರರು ಬ್ಯಾಂಕಿನ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಬೆಂಬಲಿತರ ಕೈಗೆ ನೀಡಿದ್ದಾರೆ ಎಂದರು.

ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ ಬಿಜೆಪಿ ಬೆಂಬಲಿತರು ಕಳೆದ 10 ವರ್ಷ ಅಧಿಕಾರ ಮಾಡಿದ್ದರೂ ಸಹ ಅವರ ತಂತ್ರಗಳಿಗೆ ಷೇರುದಾರರು ಮಣೆ ಹಾಕದೆ, ಶಾಸಕ ಶರತ್ ಬಚ್ಚೇಗೌಡರ ಸರಳತೆಗೆ ಹಾಗೂ ಅವರ ನಾಯಕತ್ವ ಗುಣಕ್ಕೆ ಮೆಚ್ಚಿ ಅಧಿಕಾರವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿಯತ್ತ ಬ್ಯಾಂಕ್ ಸಾಗಲಿದೆ ಎಂದರು.

ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ, ಉದ್ಯಮಿ ಬಿ.ವಿ.ಬೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಎನ್.ಕೇಶವಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜು, ಅಭಿನಂದಿಸಿದ್ದಾರೆ.

ಫೋಟೋ:
2: ಹೊಸಕೋಟೆ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್‌ಗೆ ಆಯ್ಕೆಯಾದ ಎಂಟು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು.
1: ಹೊಸಕೋಟೆ ದಿ ಟೌನ್ ಕೋ ಅಪರೇಟಿವ್ ಬ್ಯಾಂಕ್ ಅಧಿಕಾರದ ಚುಕ್ಕಾಣಿ ಕಾಂಗ್ರೆಸ ಪಾಲಾಗಿದ್ದು ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ ನಿರ್ದೇಶಕರಿಗೆ ಸಿಹಿ ತಿನಿಸಿ ಸಂಭ್ರಮಿಸಿದರು