ಸಮಸ್ಯೆ ಬಗೆಹರಿಯಬೇಕಾದರೆ ಫಲಾನುಭವಿಗಳು ಸಭೆಗೆ ಹಾಜರಾಗಿ ಮಾಹಿತಿ ಪಡೆಯಿರಿ ಬಚ್ಚೇಗೌಡ ಮನವಿ
ಹೊಸಕೋಟೆ : ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತದೆ. ಹೀಗಾಗಿ ಕಳೆದ ವಿಧಾನಸಭೆ ಚುನಾವಣೆಗಿಂತ ಮುಂಚೆ ನೀಡಿರುವ ಆಶ್ವಾಸನೆಗಳನ್ನು ಒಂದೊAದಾಗಿ ಜಾರಿಗೆ ತಂದಿದೆ. ಈ ಬಗ್ಗೆ ಜನರಲ್ಲಿ ತಿಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧಿಕಾರಿಗಳೊಂದಿಗೆ ಪ್ರತೀ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಮುಂದಾಗುತ್ತಿದ್ದೇವೆ ಎಂದು ತಾಲ್ಲೂಕು ಅಧ್ಯಕ್ಷರಾದ ಹೆಚ್. ಜೆ. ಬಚ್ಚೇಗೌಡ ತಿಳಿಸಿದ್ದಾರೆ.
ತಾಲ್ಲೂಕಿನ ಜಡಿಗೇನಹಳ್ಳಿ ಗ್ರಾ.ಪಂ. ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಮಹತ್ವ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಅನುಷ್ಠಾನ ಸಮಿತಿ ಜನರಿಗೆ ಮಾಹಿತಿ ನೀಡುವುದರ ಜೊತೆಗೆ ಜನರಿಂದ ಮಾಹಿತಿಯನ್ನು ಸಹ ಕಲೆ ಹಾಕಲಾಗುತ್ತಿದೆ. ಇದಲ್ಲದೇ ಸಂಬAಧಪಟ್ಟ ಇಲಾಖೆಗಳ ಮುಖ್ಯಸ್ಥರು ನೇರವಾಗಿ ಸಭೆಗೆ ಬರಬೇಕು,ಅಂದಾಗ ಮಾತ್ರ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಧಿಕಾರಿಗಳನ್ನು ತಾವು ಇರುವ ಸ್ಥಳಕ್ಕೆ ಕರೆಸಿರುವುದು ನಿಮ್ಮ ಸಮಸ್ಯೆ ಆಲಿಸಿ ಅದಕ್ಕೆ ತಕ್ಕ ಪರಿಹಾರ ದೊರಕಿಸಿಕೊಡಲು ಆದ್ದರಿಂದ ಎಲ್ಲಾ ಫಲಾನುಭವಿಗಳು ಸಭೆಗೆ ಆಗಮಿಸಬೇಕು ಎಂದು ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿವೆ. ಸ್ಥಳದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಫಲಾನುಭವಿಗಳು ಏನೇ ಸಮಸ್ಯೆ ಇದ್ದರು ತಾಲ್ಲೂಕಿನಾ ಆಯಾ ಸಂಬAಧ ಪಟ್ಟ ಕಚೇರಿಗೆ ಭೇಟಿ ನೀಡಿ ಅರ್ಜಿ ನೀಡಿ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಮಾಹಿತಿ ನೀಡಿದರೆ ಆವರ ಮೂಲಕ ಸಮಸ್ಯೆ ನಿವಾರಣೆಗೆ ಕ್ರಮ ಕೈ ಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಇಓ ಮುನಿಯಪ್ಪ, ಗ್ರಾ.ಪಂ. ಅಧ್ಯಕ್ಷರಾದ ವೆಂಕಟೇಗೌಡ, ಗ್ಯಾರಂಟಿ ಯೋಜನೆ ಸದಸ್ಯರಾದ ಹೇಮಣ್ಣ, ಅಮ್ಜದ್, ಪಿಡಿಓ ಗೋವಿಂದ್, ಆಹಾರ ಇಲಾಖೆಯ ಶಿವಕುಮಾರ್, ಯುವನಿಧಿ ಇಲಾಖೆಯ ಮಹಾಂತೇಶ್, ಶಕ್ತಿ ಯೋಜನೆಯ ನಟರಾಜ್, ಸೇರಿದಂತೆ ಇತರರು ಉಪಸ್ಥಿತರಿದ್ದರು.





