ಆರ್.ಎಸ್. ಎಸ್ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ.
ವಿಜಯಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಭಾನುವಾರ ಪಟ್ಟಣದ ವಿಜಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಂಚ ಪರಿವರ್ತನ ಯೋಜನೆಯ ಗೃಹ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಾಲೂಕು ಕಾರ್ಯವಾಹ ಲೋಕೇಶ್ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ ನೂರು ವರ್ಷ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಂಘದ ಪಂಚ ಪರಿವರ್ತನೆಯಲ್ಲಿ ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ , ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆಯ ಅಂಶಗಳು ಪ್ರಧಾನವಾಗಿವೆ. ಸಂಘದ ಉದ್ದೇಶದ ಕಿರು ಮಾಹಿತಿ ಇರುವ ಪುಸ್ತಕ, ಕರಪತ್ರ ಮತ್ತು ಭಾರತಮಾತೆಯ ಭಾವಚಿತ್ರವನ್ನು ಪ್ರತಿ ಮನೆಗೆ ತಲುಪಿಸುವ ಮೂಲಕ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಜಯಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಂಘದ ಶತಮಾನೋತ್ಸವ ನಿಮಿತ್ತ ಗೃಹ ಸಂಪರ್ಕ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಸ್ವಯಂ ಸೇವಕರಾದ ದಿನೇಶ್, ಮಹೇಶ್, ನಾಗರಾಜ್, ನಾಗೇಂದ್ರ, ವೆಂಕಟೇಶ ಪ್ರಭು, ಕೃಷ್ಣಮೂರ್ತಿ, ಮುನಿಕೃಷ್ಣ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.





