ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಹಾಗೂ ಚಿಣ್ಣರ ಸಂತೆ
ಬಾಲ್ಯದಲ್ಲಿ ಕಲಿತ ವಿಷಯಗಳು ಜೀವನ ಪೂರ್ತಿ ಉಳಿಯುತ್ತವೆ – ಪ್ರತಿಭಾ ಶರತ್ ಬಚ್ಚೇಗೌಡ ಅಭಿಮತ
ಹೊಸಕೋಟೆ: ಬಾಲ್ಯದಲ್ಲಿ ಕಲಿತ ವಿಷಯಗಳು ಜೀವನ ಪೂರ್ತಿ ಉಳಿಯುತ್ತವೆ. ಹಾಗಾಗಿ ಮಕ್ಕಳು ಸಂತಸ, ಸಂಭ್ರಮದಿಂದ ಕಲಿಯುವಂತಹ ವಾತಾವರಣ ನಿರ್ಮಿಸುವ ಅವಶ್ಯಕತೆಯಿದೆ ಎಂದು ಸಮಸ್ತ ಫೌಂಡೇಶನ್ ಸಂಸ್ಥಾಪಕರಾದ ಪ್ರತಿಭಾ ಶರತ್ ಬಚ್ಚೇಗೌಡರು ತಿಳಿಸಿದರು
ತಾಲೂಕಿನ ಕಸಬಾ ಹೋಬಳಿಯ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಅಂಗವಾಗಿ ಮಕ್ಕಳ ವಿಶೇಷ ಗ್ರಾಮಸಭೆ ಹಾಗೂ ಚಿಣ್ಣರ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಕೇವಲ ಓದು ಬರಹ ಮಾಡಿಕೊಂಡಿದ್ದರೆ ಸಾಲದು ಬದಲಾಗಿ ಕ್ರಿಡಾ, ಸಾಂಸ್ಕೃತಿಕ ಹಾಗು ಮನೋರಂಜನೆ ಕಾರ್ಯಕ್ರಮಗಳಲ್ಲೂ ಬಾಗಿಯಾಗಬೇಕು, ಹೆಚ್ಚಾಗಿ ಮೊಬೈಲ್ ಬಳಸಬಾರದು ಹೆಚ್ಚಾಗಿ ಟಿವಿ ಸಿನಿಮಾ, ರೀಲ್ಸ್ ಅಂತ ಅಂಟಿಕೊAಡಿದರೆ ಆಗಾಗ ಮನೋರಂಜನೆಯಲ್ಲಿ ತೊಡಗಿಕೊಳ್ಳಬೇಕು ಎಂದರು
ಬಳಿಕ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪೂಜೇನ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ ಮಕ್ಕಳು ಈಗಿನಿಂದಲೆ ಪಂಚಾಯ್ತಿ ಆಡಳಿತದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ , ಗ್ರಾಮಗಳ ಅಭಿವೃದ್ದಿಗೆ ಪಂಚಾಯ್ತಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅರಿತುಕೊಳ್ಳುತ್ತಾರೆ. ಅದೇ ರೀತಿ ಮಕ್ಕಳ ಸಂತೆ ಮಾಡಿರುವುದರಿಂದ ಸಂತೆ ಎಂದರೇನು, ಅಲ್ಲಿ ಏನೆಲ್ಲಾ ಇರುತ್ತದೆ, ಹೇಗೆ ವ್ಯಾಪಾರ ಮಾಡಬೇಕು, ಹೇಗೆ ಚೌಕಾಸಿ ಮಾಡಬೇಕು ಎಂಬುದು ಮಕ್ಕಳಿಗೆ ತಿಳಿಯುತ್ತದೆ ಆದ್ದರಿಂದ ಸರ್ಕಾರ ಮಾಡಿರುವ ಈ ಕಾರ್ಯಕ್ರಮ ಅನುಕೂಲವಾಗಿದೆ ಎಂದರು
————————————————————————–
ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಹಾಗೂ ಆ ಹಕ್ಕುಗಳಿಗೆ ಚ್ಯುತಿ ಬಂದಾಗ ರಕ್ಷಣೆ ಮಾಡಿಕೊಳ್ಳಲು ಹಾಗೂ ತಮ್ಮ ಬೇಕು–ಬೇಡಗಳನ್ನು ಸಮಾಜದ ಮುಂದೆ ನಿರ್ಭಯವಾಗಿ ಹೇಳಿಕೊಳ್ಳಲು ಇರುವ ಒಂದೇ ಒಂದು ವೇದಿಕೆ ಎಂದರೆ ಮಕ್ಕಳ ವಿಶೇಷ ಗ್ರಾಮಸಭೆ. ನಾಗರಿಕರು ತಮ್ಮ ಬೇಡಿಕೆಗಳನ್ನು ಅಹವಾಲುಗಳನ್ನು ಗ್ರಾಮಸಭೆಯ ಮೂಲಕ ಸಲ್ಲಿಸುವಂತೆ ಮಕ್ಕಳೂ ಸಹ ತಮ್ಮ ಬೇಡಿಕೆಗಳನ್ನು ಕುಂದುಕೊರತೆಗಳನ್ನು ಮಕ್ಕಳ ಗ್ರಾಮಸಭೆಯ ಮೂಲಕ ಪರಿಹರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.
ಸುರೇಶ್ – ದೊಡ್ಡ ಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ —
ಇದಕ್ಕೂ ಮುನ್ನ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಲಾಗಿತ್ತು. ದೊಡ್ಡಗಟ್ಟಾಗನಬ್ಬೆ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಗಳಿಂದ ವಿದ್ಯಾರ್ಥಿಗಳು ಹಣ್ಣು, ಕಾಯಿ, ಸೊಪ್ಪು, ತರಕಾರಿಗಳು ಸೇರಿದಂತೆ ವಿವಿದ ರೀತಿಯ ತಿಂಡಿ ತಿನಿಸುಗಳನ್ನು ತಂದು ಹಳ್ಳಿ ಸಂತೆಯಲ್ಲಿ ಮಾರಾಟ ಮಾಡಿದರು. ಎಸ್.ಬಿ.ಜಿ.ತಂಡದ ನಾಯಕಿ ಪ್ರತಿಭಾ ಶರತ್ ಬಚ್ಚೇಗೌಡ ಅವರು ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಪ್ರಿಂಟರ್ ಯಂತ್ರ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ , ದೊಡ್ಡ ಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್. , ಗ್ರಾಮ ಪಂಚಾಯಿತಿ ಪಿಡಿಓ ಸುಬ್ರಮಣಿ , ಹೊಸಕೋಟೆ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣ ಗೌಡ, ಹಾಲಿ ಸದಸ್ಯ ಕೊರಳೂರು ಸುರೇಶ್ ಗೌಡ, ಹೊಸಕೋಟೆ ಟಿಎಪಿಸಿಎಂಎಸ್ ನಿರ್ದೇಶಕ ಸುನಿಲ್, ಟೌನ್ ಬ್ಯಾಂಕ್ ನಿರ್ದೇಶಕ ವಿಷ್ಣು, ಸರೋಜಮ್ಮ. ತಾಲೂಕು ಯೂಥ್ ಕಾಂಗ್ರೆಸ್ ಅಧ್ಯಕ್ಷ ಅನುಪ್ ಗೌಡ
ಪಂಚ ಗ್ಯಾರೆಂಟಿ ಯೋಜನೆ ಸಮಿತಿ ಸದಸ್ಯೆ ರಮಾ, ಗ್ರಾಮ ಪಂಚಾಯಿತಿ ಸದಸ್ಯ ಕಣ್ಣೂರುಹಳ್ಳಿ ಮುನಿಯಪ್ಪ , ಗಗನ ಚಂದ್ರೇಗೌಡ, ರಮೇಶ್ ಕಾರ್ಯದರ್ಶಿ ಚೌಡರೆಡ್ಡಿ, ಮುಖಂಡರಾದ ಚಂದ್ರೇಗೌಡ , ಸೂಪರ್ ನಾರಾಯಣಸ್ವಾಮಿ, ಸೇರಿದಂತೆ ಹಲವು ಮುಖಂಡರು, ಕ್ಲಸ್ಟರ್ ಮಟ್ಟದ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು





