ದೇಶದ ಬಹುತೇಕ ಕಲೆಗಳು ಉಳಿಸಿ ಬೆಳೆದರೆ ಮಾತ್ರ ಸಂಸ್ಕಾರ ಸಂಸ್ಕೃತಿ ಬೆಳೆಯಲು ಸಾಧ್ಯ
ದೇವನಹಳ್ಳಿ :- ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆ ಯಾಗ ಲಿದೆ. ಇಲ್ಲಿನ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭವಂತ ಮಕ್ಕಳನ್ನು ಜಿಲ್ಲೆ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾದಿಕಾರಿ ಸೖಯಾದ್ ಆಯಿಷಾ ಅಭಿ ಪ್ರಾಯಿಸಿದರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ಅಂಜನಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗ ಳೂರು ಗ್ರಾಮಾಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ 2025ನೇ ಸಾಲಿನ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಗಾಗಿ ಕಲೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಅವರು ಉದ್ಘಾಟಿಸಿದರು.
ಕಸಾಪ ತಾಲೂಕು ನಂಜೇಗೌಡ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ ದೇಸಿ ಹಾಗೂ ಪಾರಂಪರಿಕ ಕಲೆ, ಸಂಗೀತ-ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಲೆಗಳು ಅವನತಿಗೊಳ್ಳಬಹುದಾದ ಸಂಧಿಕಾಲದಲ್ಲಿ ಪ್ರತಿಭಾವಂತ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಶಿಕ್ಷಣ ಇಲಾಖೆಯು ಇಂತಹ ವೇದಿಕೆ ಗಳನ್ನು ರೂಪಿಸಿದೆ. ಇದನ್ನು ಪೋಷಿಸದಿದ್ದರೆ ದೇಶದ ಎಲ್ಲಾ ರೀತಿಯ ಕಲೆಗಳು ನಾಶಗೊಳ್ಳಬಹುದಾದ ಆತಂಕ ವ್ಯಕ್ತಪಡಿಸಿದರು.
ಈ ಸಂರ್ಭದಲ್ಲಿ ಅಂಜನಾದ್ರಿಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ. ಕಾವ್ಯಶ್ರೀ, ಕಸಾಪ ಮಾಜಿ ಸಮ್ಮೇಳನಾದ್ಯಕ್ಷ ಹಿರೇಮಠ್, ಮುಖಂಡರಾದ ರಮೇಶ್, ಬೆಂಗಳೂರು ಗ್ರಾಮಾಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್, ತಿರ್ಪುಗಾರಾಗಿ ವೆಂಕಟಗಿರಿಕೋಟೆ ಮುನಿರಾಜು, ಕಾರ್ಯಕ್ರಮದ ಸಂಚಾಲಕರಾದ ದೇವನಹಳ್ಳಿ ದೇವರಾಜು, ಹೆಸರಾಂತ ಚಲನಚಿತ್ರ ಗಾಯಕರಾದ ಮೋಹನ್ ಕುಮಾರ್, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.





