ಕೊಳ್ಳೇಗಾಲ ವಿಶೇಷ ವರದಿ
ಚಾಲುಕ್ಯ ಛಲವಾದಿ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಹೊಲಯರು ಮೂಲ ಬೌದ್ಧ ಒಕ್ಕಲಿನ ಗೌಡರು
ಚಾಲುಕ್ಯ ಸಾಮ್ರಾಜ್ಯದ ಶೌರ್ಯ ಮತ್ತು ವೈಭವವನ್ನು ಚಿರಸ್ಥಾಯಿಯಾಗಿ ದಾಖಲಿಸಿದ ‘ದಕ್ಷಿಣಾಪಥೇಶ್ವರ’ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.
ದಕ್ಷಿಣದಿಂದ – ಉತ್ತರದವರೆಗೆ ತಮ್ಮ ಸಾಮ್ರಾಜ್ಯದ ಗಡಿಯನ್ನು ವಿಸ್ತರಿಸಿ, ರಾಜದಂಡದ ಜೊತೆಗೆ ಜ್ಞಾನ, ಸಂಸ್ಕೃತಿ ಮತ್ತು ಕಲೆಗಳ ಪೋಷಕರೆನಿಸಿಕೊಂಡರು. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ವಾಸ್ತುಶಿಲ್ಪಕ್ಕೆ ಚಿರಸ್ಮರಣೀಯ ಕೊಡುಗೆ ನೀಡಿದರು.
ವಿದೇಶಿ ಸಾಮ್ರಾಟರುಗಳನ್ನೇ ಗೌರವ ಪೂರ್ವಕವಾಗಿ ಎದುರಿಸಿದ ಮಹಾವೀರ, ಭಾರತದ ರಾಜಕೀಯ ಭೂಪಟವನ್ನು ಬದಲಿಸಿದ ಮಹಾರಾಜ ನಮ್ಮ ಕನ್ನಡಿಗರ ಶೌರ್ಯಕ್ಕೆ ಜೀವ ತುಂಬಿದ ವೀರ. ಇಮ್ಮಡಿ ಪುಲಿಕೇಶಿ ಸಾಮ್ರಾಟನಷ್ಟೇ ಅಲ್ಲ- ಕರ್ನಾಟಕದ ಅಸ್ಮಿತೆಯ ಆತ್ಮ
ಬಾದಾಮಿ ಚಾಲುಕ್ಯರ ಸಾಮ್ರಾಜ್ಯದಲ್ಲಿನ ಬೌದ್ಧಧಮ್ಮದ ಇತಿಹಾಸ
ಬಾದಾಮಿ ಚಾಲುಕ್ಯರ ಆರಂಭದ ಕಾಲದಲ್ಲಿನ ದೊರೆಗಳು ಬೌದ್ಧ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದರು. ಉದಾಹರಣೆಗೆ, ಮಂಗಲೇಶ.
ಚಾಲುಕ್ಯರು ತಮ್ಮನ್ನು ಅನೇಕ ಶಾಸನಗಳಲ್ಲಿ ‘ಹರಿತಿ’ಪುತ್ರರು ಎಂದು ಉಲ್ಲೇಖಿಸಿದ್ದಾರೆ. ಪ್ರಾಚೀನ ಕಾಲದಲ್ಲಿ “ಹರಿತಿ” ಬೌದ್ಧರ ಪ್ರಸಿದ್ಧ ದೇವಿಯಾಗಿದ್ದಳು.
ಬಾದಾಮಿಯ ಗುಹೆಗಳೊಂದರಲ್ಲಿ ಪದ್ಮಪಾಣಿಯ ಭಗ್ನಗೊಂಡಿರುವ ವಿಗ್ರಹವಿದೆ. ಬಾದಾಮಿ ಬೆಟ್ಟದ
ಮೇಲೆ ಗುಪ್ತಲಿಪಿಯ ಅಕ್ಷರಗಳುಳ್ಳ ಅನೇಕ ಬೌದ್ಧ ಗುಹೆಗಳಿವೆ.
ಹ್ಯಾವೆಲ್ ಮತ್ತು ಫರ್ಗೂಸನ್ ಅವರ ಪ್ರಕಾರ ಐಹೊಳೆಯ ಸುಪ್ರಸಿದ್ಧ ದುರ್ಗಾದೇವಾಲಯವು ವಾಸ್ತು ರಚನೆಯಲ್ಲಿ ಬೌದ್ಧ ಚೈತ್ಯಾಲಯವನ್ನು ಹೋಲುತ್ತದೆ. ಎಂದು ಹೇಳಲಾಗಿದೆ
ಚೀನಿ ಬೌದ್ಧ ಭಿಕ್ಕು ಹೂಯೆನ್‌ತ್ಸಾಂಗನು ಇಮ್ಮಡಿ ಪುಲಿಕೇಶಿಯ ರಾಜ್ಯಕ್ಕೆ ಸಂದರ್ಶನವಿತ್ತು ಈ ನಾಡಿನ ಜನರ ಬಗೆಗೆ ಚಿಕ್ಕದಾದರೂ ಬಹು ಬೆಲೆಯುಳ್ಳ ವರದಿಯನ್ನು ಸಿದ್ಧಪಡಿಸಿ ಹೋಗಿದ್ದಾನೆ.
‘ಬಾದಾಮಿ’ ಯೆಂಬ ಪ್ರಾಚೀನ ಹೆಸರು ಅನಂತರದಲ್ಲಿ ‘ವಾತಾಪಿ’ ಎಂದು ಸಂಸ್ಕೃತೀಕರಣ ಹೊಂದಿತೆಂದು ಕಾಣುತ್ತದೆ. ‘ವಾತಾಪಿ’ ಒಂದು ‘ಅಧಿಷ್ಠಾನ’ ಎಂದರೆ ರಾಜಧಾನಿನಗರ ಎಂದು ಬಣ್ಣಿಸಲ್ಪಟ್ಟದೆ.
ಹೂಯೆನ್‌ತ್ಸಾಂಗನು ಈ ನಗರದಲ್ಲಿದ್ದ ‘ ಪುಸ’ ಎಂಬ ಬಹು ‘ ಜಾಗೃತ ‘ ದೇವ ಶಿಲಾವಿಗ್ರಹವನ್ನೂ, 70 ಅಡಿ ಎತ್ತರದ ಬುದ್ದ ವಿಗ್ರಹವೆಂದು ಉಲ್ಲೇಖಿಸುತ್ತಾನೆ.
ಹೂಯನ್ ತ್ಸಾಂಗನು ಪುಲಿಕೇಶಿಯ ರಾಜ್ಯದಲ್ಲಿ 5000 ಭಿಕ್ಷುಗಳಿಗೆ ಆಶ್ರಯಸ್ಥಾನವಾಗಿದ್ದ 100 ಬೌದ್ಧ ವಿಹಾರಗಳು ಇದ್ದವು ಎಂಬ ವಿಚಾರವನ್ನು ಉಲ್ಲೇಖಿಸುತ್ತಾನೆ.
ಮುಂದೆ ಈ ಪ್ರವಾಸಿಯು ಆ ಪಟ್ಟಣವನ್ನು ಅದರ ಸುತ್ತಲಿನ ಪ್ರದೇಶವನ್ನು ಹೀಗೆ ಬಣ್ಣಿಸಿದ್ದಾನೆ
ಇಷ್ಟು ಅವರ ರೂಢಿ ಅಭ್ಯಾಸಗಳ ವಿಷಯ : ಜನರು ವಿದ್ಯಾಪ್ರಿಯರು. ಶಾಸ್ತ್ರ ಸಮ್ಮತ ವಿದ್ಯೆ ಮತ್ತು ಲೌಕಿಕ ಅನ್ಯವಿದ್ಯೆಯನ್ನು ಅಭ್ಯಾಸ ಮಾಡುತ್ತಾರೆ. ಅಲ್ಲಿ ಸುಮಾರು ನೂರು ಬೌದ್ಧ ಸಂಘಾರಾಮಗಳಿ ದ್ದವು
ಅಲ್ಲಿ ಐದು ಸಾವಿರದಷ್ಟು ಆಚಾರ್ಯರಿರುವರು ಅವರು ಮಹಾಯಾನ ಮತ್ತು ಹೀನಯಾನ ಎರಡನ್ನೂ ಅನುಸರಿಸುತ್ತಾರೆ. ಅಲ್ಲಿ ಸುಮಾರು ನೂರು ದೇವಮಂದಿರಗಳಿದ್ದು ಅಲ್ಲಿ ಶಾಸ್ತ್ರಸಮ್ಮತ ವಲ್ಲದ ಬೌದ್ದೇತರ ಅನ್ಯಮತೀಯರು ವಾಸಿಸುತ್ತಾರೆ.ಎಂಬುದಾಗಿ
ರಾಜಧಾನಿಯ ಒಳಗೂ ಹೊರಗೂ ಐದು ಸ್ತೂಪಗಳಿದ್ದು, ನಾಲ್ವರು ಗತಬುದ್ಧರು ನಡೆದಾಡಿದ ಮತ್ತು ಕುಳಿತ ಸ್ಥಳಗಳನ್ನು ಅವು ಸಂಕೇತಿಸುತ್ತವೆ. ಅವು ಅಶೋಕ ರಾಜ ನಿರ್ಮಿತಗಳು. ಇವಲ್ಲದೆ ಇನ್ನೂ ಕೆಲವು ಇಟ್ಟಿಗೆ ಮತ್ತು ಕಲ್ಲುಗಳಿಂದ ಕಟ್ಟಲಾದ ಸ್ತೂಪಗಳಿವೆ. ಅವು ಹೆಸರಿಸಿ ಹೇಳಲು ಬಾರದಷ್ಟು ಅಸಂಖ್ಯಾತವಾಗಿವೆ.
ಪಟ್ಟಣದ ದಕ್ಷಿಣಕ್ಕೆ ಅನತಿ ದೂರದಲ್ಲಿ ಒಂದು ಸಂಘಾರಾಮವಿದೆ ಅದರಲ್ಲಿ ಬೋಧಿಸತ್ವನ (ಕ್ವನ್-ತ್ಸರನ್-ತ್ಸಾಯ್) ಶಿಲಾಮೂರ್ತಿ ಇದೆ. ಅದರ ಆಧ್ಯಾತ್ಮಿಕ ಶಕ್ತಿ ಪ್ರಭಾವಗಳು ನಾಲ್ಲೆಸೆಗೂ ಪಸರಿದ್ದುಂಟು. ಅನೇಕರು ಆ ಬೋಧಿಸತ್ವನಿಗೆ ಗುಪ್ತ ಪ್ರಾರ್ಥನೆ ಸಲ್ಲಿಸಿ ತಮ್ಮ ಮನೋವಾಂಛಿತಗಳನ್ನು ಪಡೆದುಕೊಂಡಿದ್ದಾರೆ.
ಆ ನಾಡಿನ ಮೂಡಣ ಗಡಿಯಲ್ಲಿ ಎತ್ತರದ ಕೋಡುಗಲ್ಲುಗಳಿಂದ ಕೂಡಿದ ಕಡಿದಾದ ಇಳುಕಲಿನ ದೀರ್ಘ ಶೈಲಾವಳಿ ಇದ್ದು . ಇಲ್ಲಿ ಕತ್ತಲಿನ ಕಣಿವೆಯೊಂದರಲ್ಲಿ ಒಂದು ಸಂಘಾರಾಮವನ್ನು ರಚಿಸಲಾಗಿದೆ. ಅದರ ಸಮುಚ್ಚ ಪ್ರಶಸ್ತ ರಂಗಶಾಲೆ, ಮತ್ತು ಅದರ ಪಾರ್ಶ್ವದ ಅಂಗಳಗಳು ಪ್ರಕಾಂಡ ಪ್ರಸ್ತರಗಳ ಮುಖದುದ್ದಕ್ಕೂ ರಚಿಸಲಾಗಿವೆ. ಒಂದರ ಮೇಲೊಂದರಂತೆ ಮಹಡಿ, ಹಿಂದುಗಡೆಗೆ ಬಂಡೆಗಲ್ಲು; ಮುಂದುಗಡೆ ಕಣಿವೆ, ಜಲಪ್ರವಾಹ ಈ ವಿಹಾರವು ಅರ್ಹತ್ ಅಚರ (ಓ-ಚೆ-ಲೋ) ಎಂಬವರಿಂದ ನಿರ್ಮಿತವಾಯಿತು.
ಚಾಲುಕ್ಯರು ಹಾಗೂ ತಲಕಾಡು ಗಂಗರ ಆಡಳಿತ ಮೈತ್ರಿ ಹಾಗೂ ವೈವಾಹಿಕ ಸಂಬಂಧವನ್ನು ಹೊಂದಿದ್ದರು ಪಲ್ಲವರು ಹಾಗೂ ಪಾಂಡ್ಯರನ್ನು ಎದುರಿಸಲು ಚಾಲುಕ್ಯರ ಜೊತೆ ಮೈತ್ರಿ ಮಾಡಿಕೊಂಡು
ಗಂಗರ ದೊರೆ ದಡಿಗನ ಮಗಳನ್ನು ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಗೆ ಕೊಟ್ಟು ವಿವಾಹ ಮಾಡಿದ್ದರು ಹಾಗೂ ಗಂಗರ ಹೆಣ್ಣು ಮಕ್ಕಳನ್ನು ಚಾಲುಕ್ಯರಿಗೆ ಚಾಲುಕ್ಯರ ಹೆಣ್ಣು ಮಕ್ಕಳನ್ನು ಗಂಗರಿಗೆ ಕೊಟ್ಟು ವಿವಾಹ ಮಾಡುತಿದ್ದರು,
ಎಂಬುದಾಗಿ ಹಾಗೂ ಚಾಲುಕ್ಯರ ಕೆಲವು ಶಾಸನಗಳ ಪ್ರಕಾರ ಚಾಲುಕ್ಯರು ಹರಿತಿಯ ಪುತ್ರರು ಎಂಬುವ ಉಲ್ಲೇಖವಿದೆ ಹರಿತಿ ಎಂದರೆ ಬೌದ್ದರ ಪ್ರಸಿದ್ಧ ದೇವತೆಯಾಗಿದ್ದರು ಎಂದು ಹೇಳಲಾಗಿದೆ
ಚಾಲುಕ್ಯರ ಸಾಮ್ರಾಜ್ಯದಲ್ಲಿ ಇಷ್ಟು ಪ್ರವರ್ಧಮಾನದಲ್ಲಿದ್ದ ಬೌದ್ಧ ಧಮ್ಮದ ಇತಿಹಾಸವನ್ನು ಗಂಗರು ಮತ್ತು ಚಾಲುಕ್ಯರ ಸಹೋದರ ಸಂಬಂಧವು ಮುಂದೆ ವಿದೇಶಿ ಧೂರ್ತರು (ಸೋ ಕಾಲ್ಡ್ ವೈದಿಕರು) 8 ನೇ ಶತಮಾನದ ನಂತರ ಹಂತಹಂತವಾಗಿ ಮೊಟಕುಗೊಳಿಸಿ ಶೋಷಿತರನ್ನಾಗಿ ಮಾಡಿದ್ದಾರೆ
ಹೊಲೆಯರು ಇಡಿ ಭಾರತವನ್ನು ಆಳಿದ ಚಾಲುಕ್ಯ ವಂಶಸ್ಥರು ಪಂಚ ಪೀಠದಲ್ಲಿ ಶಿವಾಚಾರ ಗೈಯುವ ಮಹನೀಯರು ಮತ್ತು ಶಿವಾಚಾರಕ್ಕೆ ಒಡೆಯರು. ಇವರು ಭಾರತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಸಮುದಾಯದವರು . ಈ ಜನಾಂಗದ ಮೂಲ ಪುರುಷ ಛಲದಂಕಮಲ್ಲ ನೆಂದು ಡಾ. ಜಿ. ಶ್ರೀನಿವಾಸನವರ ತಣಿಗೆ ಎಂಬ ಪುಸ್ತಕದಲ್ಲಿ ಉಲೇಖಿಸಲಾಗಿದೆ . ಹಾಗೆ ಈ ಸಮುದಾಯವು 18 ಪಣದ ಕುಲಸ್ಥರು ಬಲಗೈ ನವರು ಎಂದು ಸಹ ಕರೆಯಲ್ಪಡುತ್ತಾರೆ. ಹೊಲೆಯ ಸಮುದಾಯವು ಐತಿಹಾಸಿಕ ಹಿನ್ನೆಲೆಯುಳ್ಳ ಸಮುದಾಯವಾಗಿದೆ.
ಒಂದು ಕಾಲದಲ್ಲಿ ಇವರು, ಪ್ರಾಚೀನ ಡೆಖ್ಖನ್ ಭಾರತದಲ್ಲಿ ಅನೇಕ ಪ್ರಾಚೀನ ರಾಜ್ಯಗಳನ್ನು ಬೆಳೆಸಿದ ಭೂಮಾಲೀಕರಾಗಿದ್ದರು. ಭಾರತೀಯ ಇತಿಹಾಸದ ಮಧ್ಯಯುಗದಲ್ಲಿ, ಇವರು ಪತನ ಹೊಂದಿದ ರಾಜ್ಯಗಳ ಯೋಧ ವರ್ಗಗಳಾಗಿದ್ದರು, ಹಾಗಾಗಿ ಇವರನ್ನು ಯುದ್ಧದಲ್ಲಿ ಗೆಲ್ಲಲಾಗದ ವೈದಿಕ ಶಾಹಿಗಳು ಇವರನ್ನ ಜಾತಿಭ್ರಷ್ಟರೆಂದು ಮಾಡಿ ಹಾಗೆಯೇ ನಡೆಸಿಕೊಳ್ಳಲಾಗುತ್ತಿತ್ತು. ಹೊಲ ಪದವು ಕೃಷಿ ಭೂಮಿಯನ್ನು ಸೂಚಿಸುತ್ತದೆ ಮತ್ತು ಹೊಲಯ ಪದವು ಹೊಲ ಪದದಿಂದ ವ್ಯುತ್ಪನ್ನವಾಗಿದೆ.
ಬ್ರಿಟಿಷ್ ಭಾರತದಲ್ಲಿ, ಹೊಲಯರು ಕೇರಳ, ಕೊಡಗು ಮತ್ತು ಮೈಸೂರಿನ ಭಾಗಗಳಲ್ಲಿ ಹೆಚ್ಚಾಗಿ ಇರುತ್ತಿದ್ದರು. ಇವರು ಹಿಂದೆ ಆದಿ ಕ್ಷತ್ರಿಯ ಕುಲದವರು ಎನಿಸಿಕೊಂಡಿದ್ದರು. ಮತ್ತು ಆದಿ ಕರ್ನಾಟಕ ಸಮುದಾಯದವರು
ಹೊಲಯ ಸಮುದಾಯವು ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಪ್ರಾಚೀನ ಕೃಷಿ ಸಮುದಾಯವಾಗಿದ್ದು, ಇತಿಹಾಸದಲ್ಲಿ ಭೂಮಾಲೀಕರು, ಯೋಧರು ಮತ್ತು ಆಡಳಿತಗಾರರಾಗಿದ್ದರು, ಆದರೆ ಮಧ್ಯಯುಗದಲ್ಲಿ ಸಾಮಾಜಿಕವಾಗಿ ಕೆಳಸ್ಥಾನಕ್ಕೆ ತಳ್ಳಲ್ಪಟ್ಟರು. ‘ಹೊಲ’ (ಕೃಷಿಭೂಮಿ) ಪದದಿಂದ ಬಂದ ಈ ಸಮುದಾಯವನ್ನು ಛಲದಂಕಮಲ್ಲನಂತಹ ಮೂಲಪುರುಷರೊಂದಿಗೆ ಗುರುತಿಸಲಾಗುತ್ತದೆ ಮತ್ತು ಶಾಸನಗಳಲ್ಲಿ ಉಲ್ಲೇಖವಿದೆ.
ಅಸ್ತಿತ್ವದ ಪುರಾವೆ ಕೊಪ್ಪಳದ ಅಶೋಕನ ಗವಿಮಠ
ಶಾಸನ ಮತ್ತು ಹಾಸನದ ಹಲ್ಮಡಿ ಶಾಸನಗಳಲ್ಲಿ ಈ ಸಮುದಾಯದ ಹೆಸರನ್ನು ಉಲ್ಲೇಖಿಸಲಾಗಿದೆ, ಇದು ಅವರ ಐತಿಹಾಸಿಕ ಅಸ್ತಿತ್ವವನ್ನು ತೋರಿಸುತ್ತದೆ.
ಆಧುನಿಕ ಸ್ಥಿತಿ ಸಂವಿಧಾನವು ಇವರನ್ನು ಪರಿಶಿಷ್ಟ ಜಾತಿ (SC) ಎಂದು ಗುರುತಿಸುತ್ತದೆ.
ಸಂಕ್ಷಿಪ್ತವಾಗಿ, ಹೊಲೆಯ ಸಮುದಾಯವು ಶ್ರೀಮಂತ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಪ್ರಾಚೀನ ಕೃಷಿ ಮತ್ತು ಭೂಮಾಲೀಕ ಸಮುದಾಯವಾಗಿದ್ದು, ಕಾಲಾಂತರದಲ್ಲಿ ಸಾಮಾಜಿಕವಾಗಿ ತುಳಿತಕ್ಕೊಳಗಾಗಿದೆ. ಎನ್ನಲಾಗಿದೆ
ಹೊಲಯಗೌಡ
ಆದಿ ಕ್ಷತ್ರಿಯರು, ಆರಂಬಗಾರರು, ಭೂಮಾಲೀಕರು, ಎಂಬುದು
ಶಾಸನಗಳಲ್ಲಿ ಉದ್ಧರಣೆ ಮಾಡಿ ಪೊಲೆಗಾವುಂಡ ಅನ್ನುವಂತ ಮಾತನ್ನ ಹೇಳಿದ್ದಾರೆ. ಪೊಲೆಗಾವುಂಡ ಎನ್ನುವ ಮಾತು ತಿಳುವಳಿ ಶಾಸನದಲ್ಲಿ, ರಾಣಿಬೆನ್ನೂರು ಶಾಸನದಲ್ಲಿ, ಮಡಲೂರು ಶಾಸನದಲ್ಲಿ ಉಲ್ಲೇಖವನ್ನು ಅವರು ವಿವರವಾಗಿ ಕೊಟ್ಟಿದ್ದಾರೆ. ತುಂಬಾ ಅಪರೂಪವಾದ ಹಳೆಯ ಮಾಹಿತಿ ಇದು. ಪೊಲೆಗಾವುಂಡ ಅಂದರೆ ಹೊಲಯ ಗೌಡರು ಅಂತ. ಹೊಲಯರನ್ನ ಗೌಡರು ಅಂತ ಕರೀತಿದ್ರು ಅನ್ನುವಂತಹ ಮಾತನ್ನ ಶಾಸನದಲ್ಲಿ ಹೇಳಿದ್ದಾರೆ.
ಕೆಲವು ಜಾತಿಗಳು, ಬುಡಕಟ್ಟುಗಳು ಕೂಡ ಗೌಡ್ರು ಅಂತ ಕರೆದುಕೊಳ್ಳುವಂತೆ
ಹೊಲಯಗೌಡ್ರು,
ಕುರುಬಗೌಡ್ರು, ಗೊಲ್ಲಗೌಡ್ರು ಇತ್ಯಾದಿಯಾಗಿ. ಮೂರು ನಾಲ್ಕು ಶಾಸನಗಳಲ್ಲಿ ಕಂಡು ಬರುವಂತಹ ಪೊಲೆಗಾವುಂಡ ಶಬ್ದ ಹೊಲಯರು ಗೌಡ್ರು ಅಂತ ಕರೆಯುತ್ತಿದ್ದದನ್ನ ಮತ್ತು ಅದನ್ನ ಸಮಾಜ ಅಂಗೀಕಾರ ಮಾಡಿದ್ದನ್ನ ದಾಖಲು ಮಾಡಿರೋದು ಕಂಡು ಬಂದಿರುತ್ತದೆ ಅದರ ಬಗ್ಗೆ ವಿದ್ವಾಂಸರು ಚರ್ಚೆ ಮಾಡೋಕು. ಶಾಸನಗಳು ಸಾಕ್ಷಿಯಾಗಿವೆ ಎಂದು ಹೇಳಲಾಗಿದೆ
ವರದಿ:ಶಂಕರ್





