*ಸರ್ಕಾರದ ನೌಕರರು ಗುರುತಿನ ಚೀಟಿ ಧರಿಸುವುದು ಕಡ್ಡಾಯ*
*ಚಿಕ್ಕಬಳ್ಳಾಪುರ, ಡಿ 11*: ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಕಚೇರಿ ಅವಧಿಯಲ್ಲಿ ಸಂಬಂಧಪಟ್ಟ ಇಲಾಖೆಯು ನೀಡಲಾಗಿರುವ ಹೆಸರು, ಪದನಾಮ ಮತ್ತು ಇಲಾಖೆಯ ವಿವರಗಳುಳ್ಳ ಗುರುತಿನ ಚೀಟಿಯನ್ನು ಧರಿಸಿಕೊಳ್ಳತಕ್ಕದ್ದೆಂದು ತಿಳಿಸಲಾಗಿದೆ. ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಅಧಿಕಾರಿಗಳನ್ನು ಮತ್ತು ನೌಕರರನ್ನು ಗುರುತಿಸಲು ಅನುಕೂಲವಾಗುವಂತೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.





