ಕ್ರೀಡಾಪಟುಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವಾಗಬೇಕು
ಕ್ರಿಕೆಟ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಅಭಿನಂದನೆ : ಯುವ ಮುಖಂಡ ದೇವಲಾಪುರ ಶ್ರೀನಿವಾಸ್ ಹೇಳಿಕೆ
ಹೊಸಕೋಟೆ:ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಯುವಕರು ಕ್ರೀಡೆಗಳತ್ತ ಗಮನ ಹರಿಸುತ್ತಿರುವ ಪ್ರಮಾಣ ಕುಗ್ಗುತ್ತಿದ್ದು ಇರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದು ಯುವ ಮುಖಂಡ ದೇವಲಾಪುರ ಶ್ರೀನಿವಾಸ್ ತಿಳಿಸಿದರು.
ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಶಾಸಕ ಶರತ್ ಬಚ್ಚೇಗೌಡರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಎಸ್ಬಿಜಿ ಕಪ್ 2025 ಚಾಂಪಿಯನ್ಸ್ ನಲ್ಲಿ ಗೆದ್ದ ದೇವಲಾಪುರದ ಡ್ರೀಮ್ ಡಿಪೆಂಡರ್ ತಂಡವನ್ನು ಅಭಿನಂದಿಸಿ ಮಾತನಾಡಿದರು.
ದೇವಲಾಪುರದ ಡ್ರೀಮ್ ಡಿಪೆಂಡರ್ ತಂಡವು ಮೂರನೇ ಸ್ಥಾನ ಪಡೆದಿದ್ದು 75,000 ನಗದು ಹಾಗೂ ಟ್ರೋಪಿ ಪಡೆದಿದ್ದು ಗ್ರಾಮಕ್ಕೆ ಕೀರ್ತಿ ತಂದಂತಾಗಿದೆ. ಯುವಕರು ಸಾಕಷ್ಟು ಕ್ರೀಡೆಗಳತ್ತ ಒಲವು ತೋರಿಸುತ್ತಿದ್ದು ಅವರಿಗೆ ಮತ್ತಷ್ಟು ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕಾಗಿದೆ. ಈ ರೀತಿಯ ಪಂದ್ಯಾವಳಿಗಳನ್ನು ಸಾಕಷ್ಟು ಬಾರಿ ಆಯೋಜನೆ ಮಾಡುವ ಮೂಲಕ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸುವ ಕೆಲಸ ನಿರಂತರವಾಗಿ ಆಗಬೇಕು. ಡ್ರೀಮ್ ಡಿಪೆಂಡರ್ ತಂಡ ಮೂರನೇ ಸ್ಥಾನ ಪಡೆದು 75,000 ನಗದು ಹಾಗೂ ಟ್ರೋಪಿಯನ್ನು ಗೆದ್ದಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದು ಶುಭವನ್ನು ಹಾರೈಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾರೇಗೌಡ, ತಂಡದ ನಾಯಕ ಭರತ್ ಕುಮಾರ್ ಡಿಸಿ, ಕ್ರೀಡಾಪಟುಗಳಾದ ಡಿಪಿ ಮಂಜುನಾಥ್, ಮಾರಪ್ಪ, ಪುನೀತ್ ಕುಮಾರ್, ಬಿಟಿ.ಮಣಿ, ಬಿಟಿ ಕಿಶೋರ್, ರಾಹುಲ್, ಭಾಸ್ಕರ್ ಗೌಡ, ಹರ್ಷಿತ್, ಶ್ರೇಯಸ್, ವೆಂಕಟರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.





