--ಜಾಹೀರಾತು--

ಡಿ. 21 ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯುವಂತೆ ರೈತರು ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ

On: December 15, 2025 8:36 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಡಿ. 21 ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯುವಂತೆ ರೈತರು ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ

ದೇವನಹಳ್ಳಿ :- ಬಗರ್ ಹುಕುಂ ಸಕ್ರಮಕ್ಕಾಗಿ ರೈತರು ಅರ್ಜಿ ಸಲ್ಲಿಸಿ, ಅನೇಕ ವರ್ಷಗಳು ಕಳೆದರೂ..ಈವರೆಗೆ ರೈತರಿಗೆ ಭೂಮಿ ಮಂಜೂರಾತಿ ಆಗಿಲ್ಲ. ಅರ್ಜಿ ಸಲ್ಲಿ ಸಿದ ರೈತರಿಗೆ ಬಗರ್ ಹುಕುಂ ಮಂಜೂರಾತಿ ಪತ್ರ ಗಳನ್ನು ವಿತರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕನ್ನಡ ಪ್ರಜಾ ರಕ್ಷಣಾ ವೇದಿಕೆ ಸರ್ಕಾರ ವನ್ನು ಆಗ್ರಹಿಸಿದರು.

ದೇವನಹಳ್ಳಿ ತಾಲ್ಲೂಕು ಸಮಿತಿಯ ಕರ್ನಾಟಕ ಪ್ರಾಂತ ರೈತ ಸಂಘ ಕನ್ನಡ ಪ್ರಜಾ ರಕ್ಷಣಾ ವೇದಿಕೆ ಜಂಟಿಯಾಗಿ
ರಾಜ್ಯಾದ್ಯಾಂತ ಜನಾಂದೋಲನದ ಮೂಲಕ ಬೆಂಗ ಳೂರು ಬೃಹತ್ ಮಟ್ಟದಲ್ಲಿ ಬಹಿರಂಗ ಸಭೆಯನ್ನು ಕರೆದ ಸಂಬಂಧ ಪತ್ರಿಕಾ ಘೋಷ್ಠಿಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಮೋಹನ್ ಬಾಬು ಮಾತನಾಡಿದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಮಾತನಾಡಿ,
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಗರ್ ಹುಕಂ ಸಾಗುವಳಿ ಮಾಡುತ್ತಿರುವ ಕೃಷಿಕ ಪರಿಹಾರ ಕೊಡ ಬೇಕು. ಬಗರ್ ಹುಕಂ ಸಾಗುವಳಿ ಮಾಡುತ್ತಿರುವ ರೈತರಿಗೆ ಬೆಂಗಳೂರು ಮಹಾನಗರ ಪಾಲಿಕೆ ನಿಂದ18 ಕಿಲೋ ಮೀಟರ್, ನಗರ ತಹಸೀಲ್ದಾ‌ರ್ ರವರು ಬಗ‌ರ್ ಹುಕಂ ಸಾಗುವಳಿ ಜಮೀನನ್ನು ತೆರವುಗೊಳಿಸು ವುದನ್ನು ಕೂಡಲೇ ರದ್ದುಪಡಿಸಬೇಕು.

ಪಾಲಿಕೆ 10 ಕಿಲೋಮೀಟರ್, ಪಂಚಾಯಿತಿ, ಪಟ್ಟಣ 5 ಕಿಲೋಮೀಟರ್ ಗಳನ್ನು  ಕೂಡಲೇ ರದ್ದುಪಡಿಸಬೇಕು. ದರಖಾಸ್ತು ಜಮೀನು ಕೂಡಲೇ ಮಂಜೂರು ಮಾಡಿ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು. ರೈತರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಕೊಟ್ಟಿರುವುದಿಲ್ಲ.
ಬಡಕುಟುಂಬಗಳು ವಾಸ ಮಾಡಲು ಮನೆಗಳು ಮತ್ತು ನಿವೇಶನ ಇಲ್ಲದೇ ಬಹಳ ತೊಂದರೆಯಾಗಲಿದೆ.

ಸರ್ಕಾರದಿಂದ ಬಡವರಿಗೆ ನಿವೇಶನವನ್ನು ಕೊಟ್ಟು ಮನೆ ಕಟ್ಟಿಕೊಡುವ ಮೂಲಕ ಅವರಿಗೆ ನೆಮ್ಮದಿಯಾಗಿ ವಾಸ ಮಾಡಲು ಸರ್ಕಾರ ಅವಕಾಶ ಮಾಡಿಕೊಡ ಬೇಕು. ದೇವನಹಳ್ಳಿ ತಾಲ್ಲೂಕು, ವಿಜಯಪುರ ಹೋಬಳಿ, ಚಿಕ್ಕತತ್ತಮಂಗಲ, ದೊಡ್ಡ ತತ್ತಮಂಗಲ, ಗುಡುವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಸುಮಾರು 600 ಏಕರೆ ಜಮೀನು ಇದ್ದು, ಇದರಲ್ಲಿ ತಹಶೀಲ್ದಾರ್ ಅವರು ಅರಣ್ಯ ಇಲಾಖೆಗೆ 250 ಏಕರೆ ಕೊಟ್ಟಿದ್ದು, ಇನ್ನು ಉಳಿದ ಸುಮಾರು 351 ಏಕರೆ ಜಮೀನು ಉಳಿದಿದ್ದು, ಅರಣ್ಯ ಇಲಾಖೆಯವರು ಆಕ್ರಮಿಸಿಕೊಂಡಿದ್ದು, ಈ ಜಮೀನು ಬಿಡಿಸಿ ಅಳತೆ ಮಾಡಿ, ಸರ್ವೆ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು. ದರಖಾಸ್ತು ಸ್ವತ್ತುಗಳನ್ನು ಸರ್ವೆ ಮಾಡಿ ಆದಾಲತ್ ಒಂದು ತಂಡ ಮಾಡಿ ಕೂಡಲೇ ಸರ್ಕಾರದಿಂದ ಸರ್ವೆ ನೋಡಿ ಮಾಡಬೇಕು.

ಕನ್ನಡ ಪ್ರಜಾ ರಕ್ಷಣಾ ವೇದಿಕೆ ಪ್ರಾಂತ ರೖತ ಸಂಘ
ರಾಜ್ಯಾಧ್ಯಕ್ಷ ಡಾ||ಮೊಹನ್ ಬಾಬು, ಉಪಾಧ್ಯಕ್ಷ ಪ್ರದೀಪ್ ಕುಮಾರ್,ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು, ಖಜಾಂಚಿ ರಾಘವ ಎ, ಜಂಟಿ ಕಾರ್ಯದರ್ಶಿ ಎಸ್. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಕಾರ್ಯಕಾರಿ  ಸಮಿತಿ ಪದಾದಿ ಕಾರಿಗಳಾದ ಅರುಣ್, ಮುರುಗೇಶ್, ವೆಂಕಟೇಶ್, ಎಚ್. ಶ್ರೀನಿವಾಸ್, ಮಹೇಶ್ ಬಾಬು, ಜಿ.ನಾರಾಯಣ ಸ್ವಾಮಿ, . ಎಸ್. ಮಂಜುನಾಥ್, ಎಚ್.ವೆಂಕಟೇಶ್,   ಮುನಿರಾಜು, ಗೋವಿಂದರಾಜು ಕಾನೂನು ಸಲಹೆಗಾರರು ನಾಗರಾಜು, ನರಸಿಂಹ ಮೂರ್ತಿ, ವೆಂಕಟರಾಜು.ಎಂಸಹಾಯಕ ಕಾರ್ಯದರ್ಶಿ ಎಂ.ಪ್ರಭು, ಪ್ರಧಾನ ಕಾರ್ಯದರ್ಶಿ ಮಧು.ಎನ್, ಹಾಜರಿದ್ದರು.
ಇದೆ ವೇಳೆ ರೈತರ ಹೋರಾಟದ ಅನುಕೂಲಕ್ಕಾಗಿ 25000 ಚೆಕ್ಕನ್ನು ಮೋಹನ್ ಕುಮಾರ್ ಅವರ ತಂಡ ನೀಡಿ ಗೌರವಿಸಿದರು.