ಗಣೇಶ ವಿಸರ್ಜನೆಗೆ ನೋಂದಾಯಿಸಿಕೊಳ್ಳಲು ಮನವಿ
ದೊಡ್ಡಬಳ್ಳಾಪುರ:ಗಣೇಶೋತ್ಸವ ಆಚರಣೆ ಸಮಿತಿಯಿಂದ ಸೆ.18ರಿಂದ ಮೂರು ದಿನಗಳ ಕಾಲ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಸೆ.20ರಂದು ನಗರದಲ್ಲಿ ಸಾಮೂಹಿಕ ವಿಸರ್ಜನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಗಣಪತಿ ಸಮಿತಿ ನೋಂದಣಿ ಮಾಡಿಕೊಂಡು ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ದೊಡ್ಡ ಬಳ್ಳಾಪುರ ಗಣೇಶೋತ್ಸವ ಆಚರಣೆ ಸಮಿತಿಯ ಮಧುಬೇಗಲಿ ಹೇಳಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷದಂತೆ ಈ ಬಾರಿ ಗಣೇಶೋತ್ಸವ ಆಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮೂರು ದಿನಗಳ ಕಾಲ ಗಣೇಶ ಕೂರುಸುತ್ತಿರುವ ಮಂಡಳಿ ಬೇಟಿ ಮಾಡಿ ಚರ್ಚೆ ಮಾಡಲಾಗಿದೆ.ಸಾಮೂಹಿಕ ವಿಸರ್ಜನೆಗೆ ಅನೇಕರಿಂದ ಒಪ್ಪಿಗೆ ಸೂಚಿಸಿದ್ದು ಈಗಾಗಲೆ 25 ಗಣೇಶೋತ್ಸವ ನೆಡೆಸುವ ಮಂಡಳಿಗಳು ನೊಂದಣಿ ಮಾಡಿಕೊಂಡಿವೆ .ಸಾಮೂಹಿಕ ವಿಸರ್ಜನೆ ವೇಳೆ ಸಮಿತಿ ವತಿಯಿಂದ ಮಂಗಳ ವಾದ್ಯ ಕಲಾ ತಂಡಗಳು ಬಾಗವಹಿಸಲಿವೆ ಎಂದರು.
ಗಣಪತಿ ಮೆರವಣಿಗೆ: ಸೆ.20ರಂದು ಬುಧವಾರ ಸಂಜೆ 4ಕ್ಕೆ ಗಣೇಶೋತ್ಸವ ಸಮಿತಿ ವತಿಯಿಂದ ನಗರದ ಬಯಲು ಬಸವಣ್ಣ ದೇವಾಲಯ ಬಳಿಯಿಂದ ಆರಂಭವಾಗಿ ಕೊಂಗಾಡಿಯಪ್ಪ ಕಾಲೇಜು ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ಟೋಲ್ಗೇಟ್ ವೃತ್ತ, ಕಾಳಮ್ಮ ದೇವಾಲಯ ರಸ್ತೆ, ಚೌಕ, ಗಾಂಧಿ ಪ್ರತಿಮೆ ವೃತ್ತ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆವರೆಗೂ ಮರೆವಣಿ ನಡೆಯಲಿದೆ. ಗಣೇಶ ವಿಸರ್ಜನ ಸ್ಥಳದಲ್ಲಿ ಸಾಮೂಹಿಕ ವಿಸರ್ಜನೆ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ
ಗಣೇಶೋತ್ಸವ ಸಮಿತಿ ನವನೀತ್ ಕುಮಾರ್, ವಿಜಯ್ ಆರಾಧ್ಯ, ಅರ್ಜುನ್ವಿರಾಟ್ ಶ್ರೀಧರ್ರೆಡ್ಡಿ, ಗೋವರ್ಧನ್, ಶ್ರೀಕಾಂತ್ ಮುಂತಾದವರು ಇದ್ದರು.