ಟ್ರಾನ್ಸ್ ಫಾರ್ಮ್ ನಲ್ಲಿ ಬೆಂಕಿ !ಬೆಸ್ಕಾಂ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ದೊಡ್ಡಬಳ್ಳಾಪುರ: ಲಾವಣ್ಯ ಶಾಲೆ ಮುಂಭಾಗದಲ್ಲಿನ ಟ್ರಾನ್ಸ್ ಫಾರ್ಮ್ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಬಳಿಯ ಲಾವಣ್ಯ ಶಾಲೆಯ ಮುಂಭಾಗದಲ್ಲಿ ಘಟನೆ ನಡೆದಿದ್ದು, ಶಾಲೆಯ ಮುಂಭಾಗದಲ್ಲಿನ ಟ್ರಾನ್ಸ್ ಫಾರ್ಮ್ ಏಕಾಏಕಿ ಹೊತ್ತಿ ಕೊಂಡು ಉರಿದಿದೆ, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿ ಟ್ರಾನ್ಸ್ ಫಾರ್ಮ್ ಹೊತ್ತಿ ಉರಿದಿದೆ, ತಕ್ಷಣವೇ ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿಗಳಾದ ಮೋಹನ್ , ಶಂಕರ್ ನಾಯಕ್ ಸಂಪರ್ಕವನ್ನ ಕಡಿತಗೊಳಿಸಿ ಬೆಂಕಿ ನಂದಿಸಿದ್ದಾರೆ,

ದರ್ಗಾಜೋಗಹಳ್ಳಿಗೆ ಸಂಪರ್ಕಿಸುವ ವಿದ್ಯುತ್ ಮಾರ್ಗವಾಗಿದ್ದು, ಈ ಮಾರ್ಗದಲ್ಲಿನ ವಿದ್ಯುತ್ ಸಂಪರ್ಕ ಕಡಿತವಾಗಿದೆ.