ಎನ್.ರಾಚಯ್ಯ, ಬಸವಲಿಂಗಪ್ಪ ನಂತರ ದಲಿತರ ಧ್ವನಿಯಾಗಿದ್ದವರು ವಿ.ಶ್ರೀನಿವಾಸ ಪ್ರಸಾದ್ -ಆದಿತ್ಯ ನಾಗೇಶ್
ದೊಡ್ಡಬಳ್ಳಾಪುರ : ವಿ.ಶ್ರೀನಿವಾಸ ಪ್ರಸಾದ್ ರವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದು, ಕಾಂಗ್ರೆಸ್ ಮುಖಂಡರಾದ ಆದಿತ್ಯ ನಾಗೇಶ್ ಸಂತಾಪ ಸೂಚಿಸಿದ್ದಾರೆ, ರಾಜ್ಯ ದಲಿತರ ಮುಖಂಡರಲ್ಲಿ ವಿ.ಶ್ರೀನಿವಾಸ ಪ್ರಸಾದ್ ಒಬ್ಬರಾಗಿದ್ರು. ಎನ್.ರಾಚಯ್ಯ, ಬಸವಲಿಂಗಪ್ಪ ನಂತರ ರಾಜ್ಯದಲ್ಲಿ ದಲಿತರ ಧ್ವನಿಯಾಗಿದ್ರು, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದಲಿತರ ನಾಯಕರನ್ನ ಬೆಳೆಸುವಲ್ಲಿ ಅವರ ಕೊಡುಗೆ ದೊಡ್ಡದು ಎಂದರು.
ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಿ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ತಡರಾತ್ರಿ 1: 30 ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಬಹು ಅಂಗಾಂಗ ವೈಫಲ್ಯದಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆಂದು ಅವರ ಕುಟುಂಬ ಮೂಲದಿಂದ ತಿಳಿದು ಬಂದಿದೆ. ವಿ,ಶ್ರೀನಿವಾಸ ಪ್ರಸಾದ್ ರವರ ಸಾವಿಗೆ ಕಂಪನಿ ಮಿಡಿದಿರುವ ಕರ್ನಾಟಕ ರಾಜ್ಯ ಎಸ್ಸಿ ಕಾಂಗ್ರೆಸ್ ಘಟಕದ ಸಂಚಾಲಕರಾದ ಆದಿತ್ಯ ನಾಗೇಶ್ ಅವರ ಒಡನಾಟ ಮತ್ತು ಅವರ ಕೊಡುಗೆಯನ್ನ ಕರ್ನಾಟಕ ಮಿತ್ರ ಸೈಟ್ ನ್ನೊಂದಿಗೆ ಹಂಚಿ ಕೊಂಡರು, ವಿ.ಶ್ರೀನಿವಾಸ ಪ್ರಸಾದ್ ಮೈಸೂರಿನ ಅಶೋಕಪುರಂ ನಿವಾಸಿ, ಅಶೋಕಪುರಂ ದಲಿತ ನಾಯಕರ ಕರ್ಮಭೂಮಿ ಅಂತಾನೇ ಹೇಳ ಬಹುದು, ಇದೇ ಕಾರಣಕ್ಕೆ ಅವರ ವ್ಯಕಿತ್ವದಲ್ಲಿಯೂ ದಲಿತರ ಪರವಾಗಿ ಧ್ವನಿ ಎತ್ತುವ ಶಕ್ತಿ ಬಂದಿದೆ.
ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದವರು, 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯರವರೊಂದಿಗಿನ ಮನಸ್ತಾಪದಿಂದ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ರು, ಬಿಜೆಪಿ ಪಕ್ಷ ಸೇರ್ಪಡೆಗೊಂಡು ಚಾಮರಾಜನಗರ ಸಂಸದರಾಗಿ ಚುನಾಯಿತರಾಗಿದ್ರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಾರೋಗ್ಯ ಕಾರಣದಿಂದ ಸ್ವರ್ಥೆಯಿಂದ ದೂರು ಉಳಿದ್ರು, ಇತ್ತಿಚೇಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಶ್ರೀನಿವಾಸ ಪ್ರಸಾದ್ ರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.
ಎನ್.ರಾಚಯ್ಯ ಮತ್ತು ಬಸಲಿಂಗಪ್ಪ ರಾಜ್ಯದ ಮುಂಚೂಣಿ ದಲಿತ ನಾಯಕರಾಗಿದ್ರು, ಅವರ ನಂತರ ದಲಿತರ ಪರವಾಗಿ ನಿಂತವರು ವಿ.ಶ್ರೀನಿವಾಸ ಪ್ರಸಾದ್, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದಲಿತರ ನಾಯಕರಿಗೆ ನೆರವಾಗಿದ್ರು, ವಿಧಾನಪರಿಷತ್ ಸದಸ್ಯರಾದ ಧರ್ಮಸೇನಾ ಸೇರಿದಂತೆ ಹಲವು ದಲಿತ ನಾಯಕರಿಗೆ ಮಾರ್ಗದರ್ಶಕರಾಗಿದ್ರು. ದಲಿತರಷ್ಟೇ ಅಲ್ಲದೆ ಎಲ್ಲಾ ಸಮುದಾಯದ ನಾಯಕರ ಬೆಳವಣಿಗೆಗೂ ಕಾರಣವಾಗಿದ್ದವರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು